Kolara: ಕೆಜಿಎಫ್ ಗಣಿಗಳಲ್ಲಿ ಮತ್ತೆ ಬಂಗಾರ ಬೇಟೆ!
5 ವರ್ಷಗಳಲ್ಲಿ ಚಿನ್ನದ ಗಣಿ ತ್ಯಾಜ್ಯದಿಂದಲೇ 25ರಿಂದ 32 ಸಾವಿರ ಕೆ.ಜಿ.ಯಷ್ಟು ಬಂಗಾರ ಉತ್ಪಾದನೆ
Team Udayavani, Jun 22, 2024, 11:44 AM IST
ಕೋಲಾರ ಜಿಲ್ಲೆಯ ಕೆಜಿಎಫ್ ಗಣಿ ತ್ಯಾಜ್ಯದಿಂದ ಚಿನ್ನವನ್ನು ಸಂಶೋಧಿಸುವ ಕೈಗಾರಿಕೆಗಳ ಸ್ಥಾ ಪನೆಗೆ ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರವು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಆ ಮೂಲಕ 24 ವರ್ಷಗಳ ಹಿಂದೆ ಮುಚ್ಚಿದ್ದ ಚಿನ್ನದ ಗಣಿ ಪುನಾರಂಭವಾಗುವ ಚಟುವಟಿಕೆಗಳು ಶುರುವಾಗಲಿವೆ. ಕೆಜಿಎಫ್ ಚಿನ್ನದ ಗಣಿ ಇತಿಹಾಸ, ಬೆಳವಣಿಗೆ, ಈಗಿನ ಸ್ಥಿತಿ ಕುರಿತ ಮತ್ತಿತರ ಮಾಹಿತಿ ಇಲ್ಲಿದೆ.
ಕರುನಾಡು “ಬಂಗಾರದ ಬೀಡು’ ಎಂಬ ಹಿರಿಮೆಗೆ ಕಾರಣವಾದ ಕೋಲಾರ್ ಗೋಲ್ಡ್ ಫೀಲ್ಡ್ (ಕೆಜಿಎಫ್) ನಲ್ಲಿ ಮತ್ತೆ “ಚಿನ್ನ’ ಹುಡುಕುವ ಕೆಲಸ ಶುರುವಾಗಲಿದೆ. ಕೆಜಿಎಫ್ ಗಣಿ ತ್ಯಾಜ್ಯ ದಿಂದ ಗಣಿಗಾರಿಕೆಯನ್ನು ನಡೆಸಲು ಅನು ಮತಿ ನೀಡುವಂತೆ ಕೇಂದ್ರ ಸರಕಾರ ಪ್ರಸ್ತಾವನೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರವು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಹಾಗಾಗಿ, ಕೆ ಜಿಎಫ್ ಗ ಣಿಗಾರಿಕೆಯಿಂದ ಹೊರ ತೆಗೆದು 13 ಕಡೆ ಬೆಟ್ಟದಂತೆ ರಾಶಿ ಹಾಕಿರುವ 3226.2 (32,262 ಮಿ ಲಿ ಯನ್) ಕೋಟಿ ಮೆಟ್ರಿಕ್ ಟನ್ ತ್ಯಾಜ್ಯ ಧೂ ಳಿ ನಿಂದ ಚಿನ್ನ ಸಂಶೋಧಿಸಲು ಕೇಂದ್ರ ಸರಕಾ ರಕ್ಕೆ ಅನುಮತಿ ದೊರೆತಿದೆ.
ಇದರಿಂದ ಕೆಜಿ ಎಫ್ ಭಾ ಗದ ಗಣಿ ಧೂಳು ಇ ರುವ 2479 (1003.4 ಹೆಕ್ಟೇರ್) ಎಕರೆ ಪ್ರ ದೇ ಶ ದಲ್ಲಿ ಗಣಿಗಾರಿಕೆ ಚ ಟು ವ ಟಿಕೆ ನ ಡೆಸಲು ರಾಜ್ಯ ಸರಕಾ ರ ಒಪ್ಪಿಗೆ ನೀಡಿದಂತಾಗಿದೆ. ಈ ಅ ನುಮತಿಯ ಜೊತೆಗೆ ರಾಜ್ಯ ಸರಕಾರಕ್ಕೆ ಬರಬೇಕಾಗಿದ್ದ 75.24 ಕೋಟಿ ರೂ. ಪಾವತಿಸುವಂತೆ ಬಿ ಜಿ ಎಂಎಲ್ ಆಡಳಿತ ಮಂಡಳಿಗೆ ಸೂಚಿಸಲು ಕೋರಿದೆ.
1880ರಿಂದ ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆ
ಕೆಜಿಎಫ್ ನೆಲದಲ್ಲಿ 1880ರಿಂದಲೂ ಚಿ ನ್ನದ ಗಣಿಗಾರಿಕೆ ನಡೆಯುತ್ತಿತ್ತು ಎನ್ನುವು ದನ್ನು 1804 ಏಷ್ಯಾಟಿಕ್ ಜರ್ನಲ್ ಬ್ರಿಟಿಷ್ ದಂಡ ನಾ ಯಕ ಜಾನ್ ವಾ ರೆನ್ ಲೇ ಖನ ಪ್ರಕಟಿಸಿದ್ದರು. ಹ ಳ್ಳಗಳನ್ನು ತೆಗೆದು ಅದಿರನ್ನು ಸಂಸ್ಕ ರಿಸಿ ಚಿನ್ನ ಶೋಧಿಸುವ ಕಾರ್ಯ ಸ್ಥಳೀಯವಾಗಿ ನಡೆಯುತ್ತಿತ್ತು. 1880ರಲ್ಲಿ ಚಿ ನ್ನದ ಗಣಿ ಕಾ ರ್ಯ ದಲ್ಲಿ ತ ಜ್ಞ ರಾ ಗಿದ್ದ ಜಾನ್ ಟೇಲರ್ ತ ಮ್ಮದೇ ಹೆ ಸ ರಿ ನಲ್ಲಿ ಜಾನ್ ಟೇ ಲರ್ ಆ್ಯಂಡ್ ಸನ್ಸ್ ಹೆಸರಿನ ಕಂಪನಿ ಆ ರಂಭಿಸಿ, ಚಿ ನ್ನ ವನ್ನು ಸಂಶೋ ಧಿ ಸಲು ಆರಂಭಿ ಸಿ ದ್ದರು. 1886ರಲ್ಲಿ ಅಂದಿನ ಮೈ ಸೂರು ಸಂಸ್ಥಾ ನಕ್ಕೆ ಇದೇ ಕಂಪನಿ 33,368 ರೂ . ರಾಯಧನವನ್ನು ನೀಡಿತ್ತು.
ಆದಾಯ ಸೃಷ್ಟಿ ಅವಕಾಶ ಕೈಚೆಲ್ಲಿದ ರಾಜ್ಯ ಸರ್ಕಾರ
ಕೆಜಿಎಫ್ ಗಣಿ ತ್ಯಾಜ್ಯ ದಿಂದ ಚಿನ್ನ ಸಂಶೋಧಿಸುವ ಕೈ ಗಾರಿ ಕೆಗ ಳನ್ನು ಸ್ಥಾ ಪಿ ಸಲು ಕ ನಿಷ್ಠ 200 ರಿಂದ 500 ಮಂದಿ ಉದ್ಯೋಗ ಸ್ಥ ರಷ್ಟೇ ಅವಶ್ಯ ಕತೆ ಇದೆ. ಇಂಥದ್ದೊಂದು ಕೈ ಗಾ ರಿಕೆ ಆ ರಂಭವಾದ 5 ವರ್ಷಗಳಲ್ಲಿ ಕೆ ಜಿ ಎ ಫ್ ನ 13 ಜಾಗದಲ್ಲಿರುವ ಗಣಿ ತ್ಯಾಜ್ಯವನ್ನು ಸಂಸ್ಕ ರಿಸ ಬ ಹುದು. 1 ಟನ್ ಗ ಣಿ ತ್ಯಾ ಜ್ಯ ದಿಂದ 1 ಗ್ರಾಂ ನಂತೆ ಚಿನ್ನ ಉ ತ್ಪಾ ದಿ ಸಿ ದರೂ 5 ವ ರ್ಷ ಗ ಳಲ್ಲಿ 25 ಸಾವಿರ ಕೆ.ಜಿ.ಯಿಂದ 32 ಸಾ ವಿರ ಕೆ .ಜಿ. ಯ ವ ರೆ ವಿಗೂ ಚಿನ್ನ ಉ ತ್ಪಾ ದಿ ಸ ಬ ಹುದು. ಇ ದ ರಿಂದ ಕ ನಿಷ್ಠ 25 ಸಾ ವಿರ ಕೋಟಿ ರೂ ಪಾ ಯಿ ಗಳ ಆದಾಯ ಗಳಿಸ ಬಹುದಾಗಿತ್ತು.
1.64 ಕೋಟಿ ರೂ.ಗೆ ಸರ್ಕಾರಕ್ಕೆ ಮಾರಾಟ
ಗಣಿಗಳ ರಾಷ್ಟ್ರೀಕರಣದ ಭಾಗವಾಗಿ ಜಾನ್ ಟೇ ಲರ್ ಆ್ಯಂಡ್ ಸನ್ಸ್ ಸಂಸ್ಥೆಯು ಒ ಪ್ಪಂದ ಮಾ ಡಿಕೊಂಡು, 1956ರ ನ ವೆಂಬರ್ 29ರಂದು 1.64 ಕೋಟಿ ರೂಪಾಯಿಗಳ ಕಂಪನಿಯ ಹೊಣೆಗಾರಿಕೆಯನ್ನು ಮೈ ಸೂರು ಸರಕಾರಕ್ಕೆ ಒಪ್ಪಿಸಿತು. ಆಗಿನ ಸಿಎಂ ಎ ಸ್. ನಿ ಜ ಲಿಂಗಪ್ಪ ಸ ರ ಕಾ ರವು ಚಿನ್ನದ ಗಣಿ ನಿರ್ವಹಣೆ ಜವಾಬ್ದಾರಿ ಪಡೆದುಕೊಂಡಿತು. ಚಿ ನ್ನದ ಗ ಣಿ ಯಲ್ಲಿ ಆಗ 13 ಸಾ ವಿರ ಮಂದಿ ಕಾ ರ್ಮಿ ಕರು ಕೆ ಲಸ ಮಾ ಡು ತ್ತಿ ದ್ದರು!
ಕೆಜಿಎಫ್ ಗಣಿ ತ್ಯಾಜ್ಯದಿಂದ ಚಿನ್ನ ಮರುಶೋಧನೆ ಪ್ರಕ್ರಿಯೆ ಹೇಗೆ?
ಗಣಿ ತ್ಯಾಜ್ಯಗಳಿಂದ ಚಿನ್ನವನ್ನು ಸಂಸ್ಕರಿಸುವ ತಂತ್ರಜ್ಞಾನ ಸರಳವಾಗಿದೆ. ಮೊದಲಿಗೆ ತ್ಯಾ ಜ್ಯ ವನ್ನು ನೀರಿನಲ್ಲಿ ಬೆ ರೆಸಿ ಕೊಳ ವೆ ಯೊಂದ ರಲ್ಲಿ ಹಾ ಯಿಸಿ ವಿ ವಿಧ ಹಂತಗಳಲ್ಲಿ ಶೋಧಿಸಿ ಚಿ ನ್ನ ಸಂಸ್ಕ ರಿ ಸರಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಕಾ ರ್ಬನ್ ಲೀ ಚಿಂಗ್ ಪ್ರೊಸೆಸ್ (ಸಿ ಎಲ್‌ಪಿ) ಎಂದು ಕ ರೆ ಯ ಲಾ ಗು ತ್ತದೆ. ಆ ಸ್ಟ್ರೇ ಲಿಯಾ ಕಂಪ ನಿ ಯೊಂದರ ನೆ ರ ವಿ ನೊಂದಿಗೆ ತಾನೇ ಗಣಿಗಾರಿಕೆ ಆರಂಭಿಸುವುದಾಗಿ ಚಿ ನ್ನದ ಗಣಿ ಕಾ ರ್ಮಿ ಕ ರ ಸಹ ಕಾರ ಸಂಘವು ಹಿಂದೆಯೇ ಮುಂದೆ ಬಂದಿತ್ತು. ಸಾಧ್ಯವಾಗಿರಲಿಲ್ಲ. ಈಗ ಯಾವುಏದ ಕಂಪನಿ ಕೆಲಸ ಆರಂಭಿಸಿದರೂ ಗು ತ್ತಿಗೆ ಆ ಧಾ ರದ ಮೇಲೆ, ಇಲ್ಲಿರುವ ಕಾರ್ಮಿಕ ಸ ಹ ಕಾರ ಸಂಘವು ಕೆಲಸ ಮಾಡಲು ಅವಕಾಶವಿದೆ. ಬೇರೆ ಸ್ಥಳದ ಕಾರ್ಮಿಕರನ್ನು ಬಳಸಿದರೆ ಕಂಪ ನಿಗೆ ದು ಬಾರಿ ವೆ ಚ್ಚವಾ ಗ ಲಿದೆ. ಒಂದೊಮ್ಮೆ ರಾಜ್ಯವು ಕಾ ರ್ಮಿಕ ಸಂಘಕ್ಕೆ ಗಣಿಗಾರಿಕೆ ಅ ವ ಕಾಶ ಕ ಲ್ಪಿ ಸಿ ದ್ದರೆ ಶೇ.75ರಾಜ್ಯಕ್ಕೆ ಹಾಗೂ ಶೇ.25 ಕಾರ್ಮಿಕ ವರ್ಗಕ್ಕೆ ಆದಾಯ ಬರುತ್ತಿತ್ತು.
ಗಣಿ ಮರು ಆರಂಭಕ್ಕೆ ಮೊದಲಿನಿಂದ ಒತ್ತಡ
ಚಿನ್ನದ ಗಣಿಗಳು ಏಕಾಏಕಿ ಸ್ಥಗಿತವಾದ್ದರಿಂದ ಸಾ ವಿ ರಾರು ಕಾ ರ್ಮಿಕ ಕು ಟುಂಬ ಗಳು ನಿ ರ್ಗ ತಿ ಕ ವಾ ದವು. ಉ ದ್ಯೋಗ, ವ ಸತಿ, ಆ ಸ್ಪತ್ರೆ ಸೌ ಲ ಭ್ಯ ಗ ಳಿ ಲ್ಲದೆ ನ ರ ಳಿ ದವು. ಸಾ ವಿ ರಾರು ಮಂದಿ ರೈ ಲಿ ನಲ್ಲಿ ಬೆಂಗ ಳೂ ರಿಗೆ ನಿ ತ್ಯವೂ ಪ್ರ ಯಾ ಣಿಸಿ, ಉ ದ್ಯೋಗ ಅ ರ ಸ ಬೇ ಕಾಯಿತು. ಹಾಗಾಗಿ ಗ ಣಿ ಗ ಳನ್ನು ಪು ನ ರಾರಂಭಿಸ ಬೇ ಕೆಂಬ ಬೇ ಡಿಕೆ ಹೆ ಚ್ಚು ತ್ತಲೇ ಇತ್ತು.
ಮತ್ತೆ ರಾಜ್ಯದ ಪಾಲಾದ ಕೆಜಿಎಫ್: 2015ರಲ್ಲಿ ಎಂಎಂಡಿಆರ್ ಕಾ ಯ್ದೆಯಿಂದ ಚಿ ನ್ನದ ಗ ಣಿ ಗಳ ವಾ ರ ಸ ತ್ವವು ರಾಜ್ಯ ಸ ರ ಕಾ ರದ ಪಾ ಲಾ ಯಿತು. ಗ ಣಿ ತ್ಯಾ ಜ್ಯ ದಲ್ಲಿ ಚಿನ್ನ ಹೊರ ತೆಗೆಯಲು ಅನುಮತಿ ನೀ ಡು ವಂತೆ ಕೇಂದ್ರ ಮಾ ಡಿ ದ್ದ ಮ ನ ವಿ ಯನ್ನು ಅಂದಿನ ಸರ್ಕಾರ ತಿರಸ್ಕರಿಸಿತ್ತು
ಚಿನ್ನ ಕೊರತೆ: 2001ರಲ್ಲಿ ಮುಚ್ಚಿದ ಗಣಿ
ಆರಂಭದಲ್ಲಿ ಚಿನ್ನದ ಪ್ರಮಾಣ ಹೆಚ್ಚಿದ್ದ ಕೆಜಿಎಫ್ನಲ್ಲಿ ನಿಧಾನ ವಾಗಿ ಚಿ ನ್ನದ ಅಂಶ ಪ್ರತಿ ಟ ನ್‌ಗೆ 3.18 ಗ್ರಾಂಗ ಳವರೆಗೂ ಕುಸಿಯಲಾ ರಂಭಿಸಿತು. ಕೊನೆಗೆ ವೆಚ್ಚವೇ ಹೆಚ್ಚಾದ್ದರಿಂದ ಕೇಂದ್ರ ಸರ್ಕಾರವು, “ಬಿ ಜಿ ಎಂಎಲ್’ ರೋ ಗ ಗ್ರಸ್ಥ ಕೈ ಗಾ ರಿಕೆ ಎಂದು ಗು ರು ತಿ ಸ ಲಾಯಿತು. 2001 ಏ ಪ್ರಿಲ್ 1ರಿಂದ ಚಿ ನ್ನದ ಗ ಣಿ ಗ ಳನ್ನು ಮು ಚ್ಚ ಲಾಯಿತು. ಇ ದಕ್ಕೆ ಪ್ರ ಮುಖ ಕಾ ರಣ 10 ಗ್ರಾಂ ಚಿನ್ನ ಉ ತ್ಪಾ ದಿ ಸಲು 20 ಸಾ ವಿರ ರೂ. ವೆ ಚ್ಚ ವಾ ಗು ತ್ತಿತ್ತು. ಆಗ ಮಾ ರು ಕ ಟ್ಟೆ ಯಲ್ಲಿ 10 ಗ್ರಾಂ ಚಿನ್ನ ಕೇ ವಲ 6 ಸಾ ವಿರ ರೂಪಾಯಿ ವರೆಗೂ ಇತ್ತು!
10 ವರ್ಷದಲ್ಲೇ 1.70 ಲಕ್ಷ ಕೆ.ಜಿ. ಚಿನ್ನ ಉತ್ಪಾದನೆ!
1881ರಿಂದ 1900ರ ವ ರೆ ಗೆ ಚಿನ್ನ ಉತ್ಪಾದನೆಯ ಮಹತ್ವದ ಅವಧಿಯಾಗಿದೆ. ಆಗ ಪ್ರತಿ ಟನ್ ಮಣ್ಣಿನಲ್ಲಿ 47.5 ಗ್ರಾಂ ಚಿ ನ್ನ ಉತ್ಪಾದನೆಯಾಗುತ್ತಿತ್ತು. ಈ ಅವಧಿಯಲ್ಲಿ ಗಣಿಯಲ್ಲಿ 22,500 ಮಂದಿ ಕೆಲಸ ಮಾಡುತ್ತಿ ದ್ದರು. ಚಿನ್ನದ ಗಣಿ ಗಳು ಆಳಕ್ಕೆ ಇಳಿಯುತ್ತಿದ್ದಷ್ಟು ಗಣಿಗಾರಿಕೆ ಕಷ್ಟವಾಗಿತ್ತು. ಆಗ 1902ರಲ್ಲಿ ಶಿವನಸಮುದ್ರದಲ್ಲಿ ಜಲ ವಿದ್ಯುತ್ ಘಟಕವನ್ನು ಸ್ಥಾಪಿಸಿ, ಗ ಣಿಗೆ ವಿ ದ್ಯುತ್ ಸಂಪರ್ಕ ಕ ಲ್ಪಿ ಸಿ ಸಿದ ಹತ್ತೇ ವ ರ್ಷ ದಲ್ಲಿ ಟ ನ್‌ಗೆ 28.05 ಗ್ರಾಂನಂತೆ 1.70 ಲಕ್ಷ ಕೆ. ಜಿ. ಚಿ ನ್ನ ಉ ತ್ಪಾ ದಿ ಸಿ ದಾಖಲೆ ನಿ ರ್ಮಿ ಸ ಲಾ ಗಿತ್ತು. ಚಿ ನ್ನದ ಗ ಣಿ ಯನ್ನು 1972ರಲ್ಲಿ ಸಾ ರ್ವ ಜ ನಿಕ ಉ ದ್ದಿಮೆ ಎಂದು ಘೋ ಷಿಸಿ, ಕೇಂದ್ರ ಸ ರ ಕಾ ರವು “ಭಾ ರತ್ ಗೋಲ್ಡ್ ಮೈನ್ಸ್ ಲಿ'(ಬಿ ಜಿ ಎಂಎಲ್). ಎಂದು ನಾಮಕರಾಣ ಮಾಡಲಾಯಿತು. ಆಗ ಪ್ರತಿ ಟ ನ್ ಗೆ 5.35 ಗ್ರಾಂ ಚಿ ನ್ನ ಸಂಶೋಧಿಸಲಾಗುತ್ತಿತ್ತು.
-ಕೆ.ಎಸ್.ಗಣೇಶ್, ಕೋಲಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.