Kolkata: ಟ್ರೈನಿ ವೈದ್ಯೆ ಕೇಸು: ಸುಪ್ರೀಂ ಸ್ವಯಂ ಪ್ರೇರಿತ ವಿಚಾರಣೆ
ದೇಶದೆಲ್ಲೆಡೆ ಮುಂದುವರಿದ ವೈದ್ಯರ ಪ್ರತಿಭಟನೆ, ಸಿಎಂ ಮಮತಾ ಬ್ಯಾನರ್ಜಿ ಮೇಲೆ ನಮಗೆ ನಂಬಿಕೆ ಇಲ್ಲ: ಮೃತ ವೈದ್ಯೆಯ ಹೆತ್ತವರ ಅಳಲು
Team Udayavani, Aug 19, 2024, 6:45 AM IST
ಹೊಸದಿಲ್ಲಿ: ಕೋಲ್ಕತಾದ ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿರುದ್ಧ ದೇಶಾ ದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಆ.20ರ ಮಂಗಳವಾರವೇ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಸಿಜೆಐ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಪ್ರಕ ರಣದ ವಿಚಾರಣೆ ನಡೆಸಲಿದೆ. ದೇಶಾದ್ಯಂತ ವೈದ್ಯರ ಪ್ರತಿಭಟನೆಗಳು ತೀವ್ರಗೊಂಡಿರುವಂತೆಯೇ ಸುಪ್ರೀಂ ಕೋರ್ಟ್ ಮಧ್ಯ ಪ್ರ ವೇಶಿಸಿರುವುದು ಮಹತ್ವ ಪಡೆದಿದೆ.
ವರ್ಗಾವಣೆ ಹಿಂಪಡೆದ ಸರಕಾರ:
ವೈದ್ಯರನ್ನು ಬೆದರಿಸಲೆಂದೇ ಪಶ್ಚಿಮ ಬಂಗಾಳ ಸರಕಾರ ವರ್ಗಾವಣೆಗಳನ್ನು ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದರ ಬೆನ್ನಲ್ಲೇ ಸರಕಾರ ತನ್ನ ನಿರ್ಧಾರ ಹಿಂಪಡೆದಿದೆ.
ಮಮತಾ ಮೇಲೆ ನಂಬಿಕೆ ಇಲ್ಲ:
ಮಾಧ್ಯಮವೊಂದರ ಜತೆ ಮಾತನಾಡಿದ ಮೃತ ವೈದ್ಯೆಯ ಹೆತ್ತವರು, ಸಿಎಂ ಮಮತಾ ಬ್ಯಾನರ್ಜಿ ಅವರ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಮೊದಲು ಅವರ ಮೇಲೆ ನಮಗೆ ತುಂಬಾ ನಂಬಿಕೆ ಇತ್ತು. ಅವರು ನ್ಯಾಯ ಕೇಳುತ್ತಿದ್ದಾರೆ. ಆದರೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. ಅವರು ಏನನ್ನು ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ ತನ್ನ ಮಗಳ ಡೈರಿಯೊಂದನ್ನು ಸಿಬಿಐಗೆ ನೀಡಿರುವುದಾಗಿ ಅವರು ಹೇಳಿದ್ಧಾರೆ.
2 ಗಂಟೆಗೊಮ್ಮೆ ವರದಿ ಕೊಡಿ: ರಾಜ್ಯಗಳಿಗೆ ಕೇಂದ್ರ
ದೇಶಾದ್ಯಂತ ವೈದ್ಯರು ಮತ್ತು ಆರೋಗ್ಯ ಕಾರ್ಯಕ ರ್ತರ ಪ್ರತಿಭಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರತೀ 2 ಗಂಟೆಗೆ ಒಮ್ಮೆ ವರದಿ ಸಲ್ಲಿಸಬೇಕೆಂದು ಕೇಂದ್ರ ರವಿವಾರ ನಿರ್ದೇಶಿಸಿದೆ. ಪ್ರತಿಭಟನೆ ವಿಕೋಪಕ್ಕೆ ತಲುಪದಂತೆ ಎಚ್ಚರ ವಹಿಸಲು ಈ ಕ್ರಮ ಕೈಗೊಂಡಿದೆ.
ಒಂದಾದ ಪ್ರತಿಸ್ಪರ್ಧಿ ಫುಟ್ಬಾಲ್ ಫ್ಯಾನ್ಸ್ ತಂಡ
ವೈದ್ಯೆ ಅತ್ಯಾ ಚಾ ರದ ವಿರುದ್ಧದ ಪ್ರತಿಭಟನೆ ಮೋಹನ್ ಬಾಗಾನ್ ಹಾಗೂ ಈಸ್ಟ್ ಬೆಂಗಾಲ್ ಫುಟ್ಬಾಲ್ ತಂಡಗಳ ಅಭಿಮಾನಿಗಳ ನಡುವಿನ ವೈರತ್ವವನ್ನು ದೂರ ಮಾಡಿದೆ. ರವಿವಾರ ಈ ಅಭಿಮಾನಿಗಳು ವೈರತ್ವ ಮರೆತು ಒಂದಾಗಿ, ತಮ್ಮ ತಂಡದ ಧ್ವಜ ಹಿಡಿದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಪ್ರಕರಣದ ಬಗ್ಗೆ ವದಂತಿ: ಬಿಜೆಪಿ ನಾಯಕ, 2 ವೈದ್ಯರಿಗೆ ಸಮನ್ಸ್!
ಟ್ರೈನಿ ವೈದ್ಯೆ ಹತ್ಯೆ ಪ್ರಕರಣದಲ್ಲಿ ಸುಳ್ಳು ಮಾಹಿತಿ ಹಬ್ಬಿಸಿದ್ದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ಹಾಗೂ ಇಬ್ಬರು ವೈದ್ಯರಿಗೆ ಕೋಲ್ಕತಾ ಪೊಲೀಸರು ಸಮನ್ಸ್ ನೀಡಿದ್ದಾರೆ. ವೈದ್ಯೆಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆಯ ದೇಹದಲ್ಲಿ 150 ಗ್ರಾಂ ವೀರ್ಯ ಪತ್ತೆಯಾಗಿದೆ ಎಂದು ವೈದ್ಯ ಸುಬರ್ನೋ ಗೋಸ್ವಾಮಿ ವದಂತಿ ಹಬ್ಬಿಸಿದ್ದರು ಎನ್ನಲಾಗಿದೆ.
ಮತ್ತೋರ್ವ ವೈದ್ಯ ಕುನಾಲ್ ಸರ್ಕಾರ್ ಜಾಲತಾಣಗಳಲ್ಲಿ ಈ ಕುರಿತು ಕಮೆಂಟ್ ಮಾಡಿರುವ ಕಾರಣಕ್ಕೆ ಈ ಇಬ್ಬರಿಗೂ ಪೊಲೀಸರು ಸಮನ್ಸ್ ನೀಡಿದ್ದಾರೆ. ಜತೆಗೆ ಸಂತ್ರಸ್ತೆಯ ಫೋಟೋ ಹಾಗೂ ಹೆಸರನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕಾಗಿ ಬಿಜೆಪಿ ನಾಯಕಿ ಲಾಕೆಟ್ ಚಟರ್ಜಿಗೂ ಸಮನ್ಸ್ ನೀಡಲಾಗಿದೆ. ಸರಕಾರ ತನಿಖೆ ಬಗ್ಗೆ ಗಮನಹರಿಸದೇ ಸಾಮಾಜಿಕ ಜಾಲತಾಣಗಳನ್ನು ನೋಡುತ್ತಾ ಕುಳಿತಿದೆ ಎಂದು ಚಟರ್ಜಿ ಚಾಟಿ ಬೀಸಿದ್ದಾರೆ.
ಟಿಎಂಸಿ ಸಂಸದನಿಗೂ ನೋಟಿಸ್: ಹತ್ಯೆ ನಡೆದ 3 ದಿನದ ಬಳಿಕ ಆಸ್ಪತ್ರೆಗೆ ಶ್ವಾನದಳ ಕಳುಹಿಸಲಾಗಿತ್ತು ಎಂದು ಟಿಎಂಸಿ ಸಂಸದ ಸುಖೇಂದು ಶೇಖರ್ ರಾಯ್ ಹೇಳಿಕೆ ನೀಡಿದ್ದರು. ಆದರೆ ಇದು ತಪ್ಪು ಮಾಹಿತಿ. ಹತ್ಯೆ ನಡೆದ ದಿನವೇ ಶ್ವಾನದಳ ಕಳುಹಿಸಲಾಗಿತ್ತು ಎಂದು ಬಂಗಾಲ ಪೊಲೀಸರು ಹೇಳಿದ್ದು, ಈ ಸಂಬಂಧ ರಾಯ್‌ಗೆ ನೋಟಿಸ್ ಕೂಡ ಜಾರಿ ಮಾಡಿದ್ದಾಗಿ ಹೇಳಿದ್ದಾರೆ.
ಆರೋಪಿಗೆ ಮಾನಸಿಕ ಪರೀಕ್ಷೆ
ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣದ ಆರೋಪಿಯನ್ನು ಸಿಬಿಐ ಅಧಿಕಾರಿ ಗಳು ರವಿವಾರ ಮಾನಸಿಕ ಪರೀಕ್ಷೆಗೆ ಒಳ ಪಡಿಸಿದ್ದಾರೆ. ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ (ಸಿಎಫ್ಎಸ್‌ಎಲ್) ಐವರು ಅಧಿಕಾರಿಗಳ ತಂಡ ಪರೀಕ್ಷೆಯ ಮೇಲ್ವಿಚಾರಣೆ ನಡೆಸಲಿದೆ. ಅಧಿಕಾರಿಗಳ ತಂಡವು ಶನಿವಾರವೇ ಕೋಲ್ಕತಾಗೆ ಆಗಮಿಸಿದ್ದು, ಆರೋಪಿ ಸಂಜಯ್ ರಾವ್‌ನನ್ನು ಪ್ರಶ್ನಿಸಲು ಪ್ರಶ್ನೆ ಪಟ್ಟಿಯನ್ನೂ ಮುಂಚೆಯೇ ಸಿದ್ಧಪಡಿಸಿ ಕೊಂಡಿದೆ. ಇದು ಆರೋಪಿಯ ಮನೋವಿಶ್ಲೇಷಣೆ ಪರೀಕ್ಷೆ ಯಾಗಿದ್ದು, ಆರೋಪಿಯ ದಿನಚರಿ, ನಡವಳಿಕೆ, ಅಭ್ಯಾಸ ಗಳನ್ನು ಅರ್ಥೈಸಿಕೊಳ್ಳಲು ಈ ಪರೀಕ್ಷೆ ನೆರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.