Kolkata ಟ್ರೈನಿ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ?
ವೈದ್ಯ ಮೃತದೇಹದಲ್ಲಿ 150 ಮಿ.ಗ್ರಾಂ ವೀರ್ಯ ಪತ್ತೆ, ಪ್ರತಿಭಟನೆಗೆ ಟಿಎಂಸಿ ಸಂಸದ ಶೇಖರ್ ರಾಯ್ ಬೆಂಬಲ
Team Udayavani, Aug 14, 2024, 11:53 PM IST
ಕೋಲ್ಕತಾ: ಪಶ್ಚಿಮ ಬಂಗಾಲದ ಕೋಲ್ಕತಾದ ಸರಕಾರಿ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ವೈದ್ಯೆಯ ದೇಹದಲ್ಲಿ ಸಾಕಷ್ಟು ಪ್ರಮಾಣದ ವೀರ್ಯವಿದ್ದು ಅತ್ಯಾಚಾರದಲ್ಲಿ ಹಲವರು ಶಾಮೀಲಾಗಿದ್ದಾರೆಂಬ ಶಂಕೆಯಿರುವ ಬಗ್ಗೆ ಆಕೆಯ ಪೋಷಕರು ಕಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ತಮ್ಮ ಮಗಳ ದೇಹದಲ್ಲಿ ಆದ ಗಾಯಗಳು ಅತ್ಯಾಚಾರ ಹಾಗೂ ಕೊಲೆ ಎಷ್ಟು ಕ್ರೂರವಾಗಿ ನಡೆದಿದೆ ಎಂಬುದನ್ನು ಸೂಚಿಸುತ್ತದೆ. ಶವಪರೀಕ್ಷೆಯಲ್ಲಿ ಆಕೆ ಯ ದೇಹದಲ್ಲಿ 150 ಮಿಲಿ ಗ್ರಾಂನಷ್ಟು ವೀರ್ಯ ಪತ್ತೆಯಾಗಿದ್ದು, ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆಯಿದೆ ಎಂದು ಪೋಷಕರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ವೈದ್ಯೆಯ ಹತ್ಯೆ ಖಂಡಿಸಿ ದೇಶಾದ್ಯಂತ ಬುಧ ವಾರವೂ ಪ್ರತಿಭಟನೆ ನಡೆದಿವೆ.
ನನಗೂ ಮಗಳಿದ್ದಾಳೆ - ಟಿಎಂಸಿ ಸಂಸದ: ಟಿಎಂಸಿ ಸಂಸದ ಸುಖೇಂದು ಶೇಖರ್ ರಾಯ್ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿದ್ದು, ವೈದ್ಯೆ ಸಾವಿಗೆ ನ್ಯಾಯ ಸಿಗಲು ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಗೆ ನಾನು ಬೆಂಬಲ ಸೂಚಿಸುತ್ತೇನೆ. ನನಗೂ ಮಗಳು, ಪುಟ್ಟ ಮೊಮ್ಮಗಳು ಹಾಗೂ ಕುಟುಂಬ ಇದೆ. ಮಹಿಳೆ ವಿರುದ್ಧದ ಕ್ರೌರ್ಯ ನಿಲ್ಲಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.