Kolluru: ನವರಾತ್ರಿ ರಥೋತ್ಸವ, ನವಾನ್ನಪ್ರಾಶನ, ವಿಜಯೋತ್ಸವ
ವಾಗ್ದೇವಿ ಸನ್ನಿಧಿಯಲ್ಲಿ ದಾಖಲೆ ಸಂಖ್ಯೆಯ ಮಕ್ಕಳಿಗೆ ವಿದ್ಯಾರಂಭ ವಿಧಿ
Team Udayavani, Oct 13, 2024, 3:24 AM IST
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅ.11ರಂದು ಚಂಡಿಕಾಯಾಗ ಹಾಗೂ ರಾತ್ರಿ ನವರಾತ್ರಿ ರಥೋತ್ಸವವು ಭಕ್ತಿಭಾವ ಹಾಗೂ ಸಂಭ್ರಮದಿಂದ ಜರಗಿತು.
ದೇಗುಲದ ಪ್ರಧಾನ ಅರ್ಚಕರಾದ ನಿತ್ಯಾನಂದ ಅಡಿಗ ಹಾಗೂ ಕೆ.ಎನ್.ಸುಬ್ರಹ್ಮಣ್ಯ ಅಡಿಗರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ಜರಗಿದವು. ಲೋಕಕಲ್ಯಾಣಾರ್ಥವಾಗಿ ಜರಗಿದ ಚಂಡಿಕಾಯಾಗದಲ್ಲಿ ವಿವಿಧ ರಾಜ್ಯಗಳ ಭಕ್ತರು ಪಾಲ್ಗೊಂಡಿದ್ದು, ಅಲಂಕೃತ ರಥದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ನಡೆದ ಪ್ರದಕ್ಷಿಣೆಯ ರಥಯಾತ್ರೆಯಲ್ಲಿ ಭಕ್ತಿಭಾವದಿಂದ ಸಂಭ್ರಮಿಸಿದರು. ರಥೋತ್ಸವದ ಕೊನೆಯಲ್ಲಿ ನಡೆಯುವ ನಾಣ್ಯ ಸ್ವೀಕರಿಸಲು ಭಕ್ತರು ಮುಗಿಬಿದ್ದರು.
ವಿದ್ಯಾರಂಭಕ್ಕೆ ಚಾಲನೆ
ಸರಸ್ವತಿ ಕಲ್ಯಾಣ ಮಂಟಪ ಹಾಗೂ ದೇಗುಲದ ಹೊರಪೌಳಿಯಲ್ಲಿ ಅ.12ರಂದು ಪುಟ್ಟ ಮಕ್ಕಳಿಗೆ ನೆರವೇರಿದ ವಿದ್ಯಾರಂಭಕ್ಕೆ ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಮಕ್ಕಳ ನಾಲಿಗೆ ಮೇಲೆ ಚಿನ್ನದ ನಾಣ್ಯದಲ್ಲಿ ಓಂಕಾರ ಬರೆಸುವುದಲ್ಲದೆ, ಅಕ್ಕಿಯಲ್ಲಿ ಓಂ ಬರೆಸಲಾಯಿತು. ವಿಜಯದಶಮಿ ಸಲುವಾಗಿ ವಿದ್ಯಾರಂಭದ ಬಳಿಕ ನವಾನ್ನಪ್ರಾಶನ ಹಾಗೂ ವಿಜಯೋತ್ಸವ ನೆರವೇರಿತು.
ಶಾಸಕರಾದ ಗುರುರಾಜ ಗಂಟಿಹೊಳೆ, ಹರೀಶ್ ಪೂಂಜ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಸಹಾಯಕ ಕಮಿಷನರ್ ಮಹೇಶ್ಚಂದ್ರ, ದೇಗುಲದ ಕಾರ್ಯನಿರ್ವಹಣಾ ಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಬೈಂದೂರು, ಸದಸ್ಯರಾದ ರಾಜೇಶ ಕಾರಂತ ಉಪ್ಪಿನಕುದ್ರು, ಸುರೇಂದ್ರ ಶೆಟ್ಟಿ ಕೋಟೇಶ್ವರ, ರಘುರಾಮ ದೇವಾಡಿಗ, ನಿತ್ಯಾನಂದ ಅಡಿಗ, ಅಭಿಲಾಷ್ ಪಿ.ವಿ, ಧನಾಕ್ಷಿ, ಸುಧಾ ಕೆ., ಮಹಾಲಿಂಗ ನಾಯ್ಕ,
ಕೊಲ್ಲೂರು ಗ್ರಾ.ಪಂ.ಅಧ್ಯಕ್ಷೆ ವನಿತಾ ಸೇರುಗಾರ್, ಮಾಜಿ ಧರ್ಮದರ್ಶಿಗಳಾದ ರಮೇಶ ಗಾಣಿಗ ಕೊಲ್ಲೂರು, ವಂಡಬಳ್ಳಿ ಜಯರಾಮ ಶೆಟ್ಟಿ, ರತ್ನ
ಆರ್.ಕುಂದರ್ ಉಪಸ್ಥಿತರಿದ್ದರು. ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.