ತಮಿಳುನಾಡಿನಲ್ಲಿ ಕೊಂಗುನಾಡು ಸದ್ದು : ಏನಿದು ಕೊಂಗುನಾಡು?
ಕೇಂದ್ರ ಸರಕಾರದಿಂದ ಕೇಂದ್ರಾಡಳಿತದ ಹೊಸ ದಾಳ?
Team Udayavani, Jul 11, 2021, 7:10 AM IST
ಚೆನ್ನೈ: “ಕೇಂದ್ರ’ ಸರಕಾರ ಪದ ಬಳಕೆ ಮಾಡದೆ “ಒಕ್ಕೂಟ’ ಸರಕಾರ ಎಂಬ ಸಂಬೋಧನೆಗೆ ಮುಂದಾಗಿರುವ ತಮಿಳುನಾಡು ಸರಕಾರಕ್ಕೆ ಬಿಜೆಪಿ ಕೇಂದ್ರಾಡಳಿತದ ಶಾಕ್ ನೀಡಲಿದೆಯೇ?
ಕೇಂದ್ರ ಸಚಿವ ಸಂಪುಟ ಪುನಾರಚನೆಯ ಅನಂತರ “ಕೊಂಗುನಾಡು’ ಪದದ ಬಗ್ಗೆ ಭಾರೀ ಊಹಾಪೋಹ ಎದ್ದಿದೆ. ಈ ಬಗ್ಗೆ ಕೇಂದ್ರ ತುಟಿ ಬಿಚ್ಚಿಲ್ಲ. ಆದರೆ ಕೇಂದ್ರದ ನೂತನ ಸಚಿವ, ತಮಿಳುನಾಡು ಮೂಲದ ಎಲ್. ಮುರುಗನ್ ತನ್ನ ಪರಿಚಯ ವಿವರದಲ್ಲಿ ತಾನು “ತಮಿಳುನಾಡಿನ ಕೊಂಗುನಾಡಿನಿಂದ ಬಂದವನು’ ಎಂದು ಉಲ್ಲೇಖೀಸಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಎಐಎಡಿಎಂಕೆ, ಬಿಜೆಪಿ ಬಲಿಷ್ಠ
ಈ ಭಾಗದಲ್ಲಿ ಎಐಎಡಿಎಂಕೆ ಪ್ರಬಲವಾಗಿದೆ. 75 ವಿಧಾನಸಭಾ ಸ್ಥಾನಗಳಲ್ಲಿ ಎಐಎಡಿಎಂಕೆ 40ರಲ್ಲಿ ಗೆದ್ದಿದೆ. ಬಿಜೆಪಿ ಕೂಡ ಬಲಿಷ್ಠವಾಗಿದೆ. ತಮಿಳುನಾಡು ಬಿಜೆಪಿಯ ಅಧ್ಯಕ್ಷ ಕೆ. ಅಣ್ಣಾಮಲೈ ಇದೇ ಭಾಗದವರು. ಹೀಗಾಗಿ ಕೇಂದ್ರ ಸರಕಾರವು ಈ ಭಾಗವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಬಹುದು ಎಂದು ಸ್ಥಳೀಯ ಪತ್ರಿಕೆಯೊಂದು ವಿಶ್ಲೇಷಿಸಿದೆ.
ಪುದುಚೇರಿ ಮಾದರಿ
ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ, ಪುದುಚೇರಿಯಲ್ಲಿ ಮಾತ್ರ ಬಿಜೆಪಿ ಸರಕಾರವಿದೆ. ಒಂದು ವೇಳೆ ತಮಿಳುನಾಡಿನಲ್ಲಿರುವ ಈ ಭಾಗವನ್ನು ಪ್ರತ್ಯೇಕಿಸಿದರೆ ಇಲ್ಲೂ ಬಿಜೆಪಿ ಅಧಿಕಾರ ಸ್ಥಾಪನೆ ಮಾಡಬಹುದು ಎಂಬ ಲೆಕ್ಕಾಚಾರವಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.