Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
ಸಾರಸ್ವತ ಕೊಂಕಣಿ ಭಾಷೆಯಲ್ಲಿ ಈವರೆಗೆ ಬಂದಿರುವ ಚಲನಚಿತ್ರಗಳು ಕೇವಲ ಎಂಟು.
Team Udayavani, Nov 28, 2024, 10:31 AM IST
ಮಹಾನಗರ: ಖ್ಯಾತ ಕೊಂಕಣಿ ಚಲನಚಿತ್ರ ನಿರ್ದೇಶಕ ಡಾ| ಕೆ.ರಮೇಶ್ ಕಾಮತ್ ಅವರ ಕೊಂಕಣಿ ಚಲನಚಿತ್ರ “ಅಂತ್ಯಾರಂಭ’
ನ. 28ರಂದು ಸಂಜೆ 4ಕ್ಕೆ ಮಂಗಳೂರಿನಲ್ಲಿ ಭಾರತ್ ಸಿನೆಮಾ-ಭಾರತ್ ಮಾಲ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಈ ಚಲನಚಿತ್ರದ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ.
ಸಾರಸ್ವತ ಕೊಂಕಣಿ ಭಾಷೆಯಲ್ಲಿ ಈವರೆಗೆ ಬಂದಿರುವ ಚಲನಚಿತ್ರಗಳು ಕೇವಲ ಎಂಟು. ಅದರಲ್ಲಿ ನಾಲ್ಕು ಚಿತ್ರ ಡಾ| ರಮೇಶ್
ಕಾಮತ್ ಅವರದು. 1980-ಜನಮನ, 2016- ಆವೈಜಾಸಾ, 2019-ಅಪ್ಸರಾಧಾರ ಮತ್ತು ಈಗ 4ನೇ ಕೊಂಕಣಿ ಸಿನೆಮಾ ಅಂತ್ಯಾರಂಭ ತಯಾರಿಸಲಾಗಿದೆ.
ಚಿತ್ರದ ಪ್ರೀಮಿಯರ್ ಶೋ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಡಾ| ದಯಾನಂದ ಪೈ ಅಧ್ಯಕ್ಷತೆ ಮತ್ತು ಪ್ರಖ್ಯಾತ ನಟ ಪ್ರಕಾಶ್ ಬೆಳವಾಡಿ ಅವರು ಭಾಗವಹಿಸಿದ್ದರು. ಆದಿತ್ಯ ಸಿನೆ ಕ್ರಿಯೇಶನ್ಸ್ ಬ್ಯಾನರ್‌ನಲ್ಲಿ ಕಿರಣ್ಮಯಿ ಕಾಮತ್ ಈ ಸಿನೆಮಾವನ್ನು
ನಿರ್ಮಿಸಿದ್ದಾರೆ.
“ಅಂತ್ಯಾರಂಭ’ ತತ್ವಾಧಾರಿತ ಕಲಾತ್ಮಕ ಚಿತ್ರ. ಜೀವನದ ವಿವಿಧ ಹಂತದಲ್ಲಿ ಮಾನವನಿಗೆ ಹಲವಾರು ಕಷ್ಟ-ಸಂಕಷ್ಟ ಎದುರಾಗುತ್ತವೆ. ಆ ಕಷ್ಟಕ್ಕೆ ಮಾನವ ಹೆದರಿ ಅದೇ ಜೀವನದ ಅಂತ್ಯ ಎಂದು ಭಾವಿಸುತ್ತಾನೆ. ಆದರೆ ಈ ಸಿನೆಮಾ ಕಥೆಯ ಮೂಲಕ ಜೀವನ ಪಯಣದಲ್ಲಿ ಅಂತ್ಯ ಎಂಬುದೇ ಇಲ್ಲ.
ಅದು ಹೊಸ ಆರಂಭಕ್ಕೆ ನಾಂದಿ ಹಾಡುತ್ತದೆ ಎಂಬ ಬಗ್ಗೆ ಕಥೆಯ ಸಿನೆಮಾ ಇದಾಗಿದೆ ಎಂದು ಪ್ರಕಟನೆ ತಿಳಿಸಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಡಾ| ರಮೇಶ್ ಕಾಮತ್, ಪ್ರತೀಕ್ಷಾ ಕಾಮತ್, ವಿಠೊಭ ಭಂಡಾರ್ಕರ್, ಸ್ಟಾನಿ ಆಲ್ವಾರೀಸ್, ಉದಯ ಜಾದೂಗಾರ್ ಮೊದಲಾದವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tulu Movie: ಎರಡು ಭಾಗದಲ್ಲಿ ಬರುತ್ತಿದೆ ತುಳು ಸಿನಿಮಾ; ಹೊಸಚಿತ್ರಕ್ಕೆ ಮುಹೂರ್ತ
Tulu movie: ಕುತೂಹಲ ಮೂಡಿಸಿದ ಪೆಟ್ಟಿಸ್ಟ್ ; ಪೋಸ್ಟರ್ ರಿಲೀಸ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Tulu Cinema: ವಿನೀತ್ ಕುಮಾರ್ ನಟನೆಯ “90 ಎಮ್ ಎಲ್” ಸಿನಿಮಾ ಮುಹೂರ್ತ
Tulu Cinema: “ಪಿಲಿಪಂಜ” ಹೊಸ ತುಳು ಸಿನಿಮಾದ ಶಿರ್ಷಿಕೆ ಬಿಡುಗಡೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.