ಕೊಪಾ ಅಮೆರಿಕ: ಆರ್ಜೆಂಟೀನಾ ಫೈನಲ್‌ಗೆ
Team Udayavani, Jul 7, 2021, 10:13 PM IST
ಬ್ರಸಿಲಿಯಾ (ಬ್ರಝಿಲ್) : ಶನಿವಾರದ “ಕೊಪಾ ಅಮೆರಿಕ’ ಫುಟ್‌ಬಾಲ್ ಪ್ರಶಸ್ತಿ ಸೆಣಸಾಟದಲ್ಲಿ ಲಿಯೋನೆಲ್ ಮೆಸ್ಸಿ ಅವರ ಆರ್ಜೆಂಟೀನಾ ಹಾಗೂ ನೇಯ್ಮರ್ ಅವರ ಬ್ರಝಿಲ್ ತಂಡಗಳು ಮುಖಾಮುಖೀಯಾಗಲಿವೆ. ರಿಯೋ ಡಿ ಜನೈರೋದ ಐತಿಹಾಸಿಕ “ಮರಕಾನ ಸ್ಟೇಡಿಯಂ’ನಲ್ಲಿ ಈ ಕಾಲ್ಚೆಂಡಿನ ಕದನ ಏರ್ಪಡಲಿದೆ.
ದ್ವಿತೀಯ ಸೆಮಿಫೈನಲ್‌ನಲ್ಲಿ ಆರ್ಜೆಂಟೀನಾ ಪಡೆ ಶೂಟೌಟ್‌ನಲ್ಲಿ ಕೊಲಂಬಿಯಾವನ್ನು 3-2 ಗೋಲುಗಳಿಂದ ಕೆಡವಿತು. ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ 3 ಸಲ ಚೆಂಡನ್ನು ತಡೆದು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು. ನಿಗದಿತ ಅವಧಿಯಲ್ಲಿ ಪಂದ್ಯ 1-1ರಿಂದ ಸಮನಾಗಿತ್ತು.
“ಡಿಬು ಓರ್ವ ಅಸಾಮಾನ್ಯ ಹಾಗೂ ಚಮತ್ಕಾರಿ ಕೀಪರ್. ನಮಗೆ ಅವರ ಮೇಲೆ ಭಾರೀ ನಂಬಿಕೆ ಇದೆ…’ ಎಂಬುದಾಗಿ ಮೆಸ್ಸಿ ಹೇಳಿದರು. “ಡಿಬು’ ಎಂಬುದು ಮಾರ್ಟಿನೆಜ್ ಅವರ ನಿಕ್‌ನೇಮ್.
ಇದನ್ನೂ ಓದಿ :ಕ್ಷಿಪ್ರಗತಿಯಲ್ಲಿ ಲಸಿಕೆ ಹಾಕಿಸಿದಲ್ಲಿ ಭಾರತದ ಅರ್ಥವ್ಯವಸ್ಥೆ ಚೇತರಿಕೆ : ಫಿಚ್
1993ರಲ್ಲಿ ಚಾಂಪಿಯನ್
ಆರ್ಜೆಂಟೀನಾ ಕೊನೆಯ ಸಲ ಕೊಪಾ ಅಮೆರಿಕ ಚಾಂಪಿಯನ್ ಎನಿಸಿದ್ದು 1993ರಲ್ಲಿ. ಅಂದಿನ ಸೆಮಿಫೈನಲ್ ಶೂಟೌಟ್‌ನಲ್ಲೂ ಅದು ಕೊಲಂಬಿಯಾವನ್ನು ಮಣಿಸಿತ್ತು. ಆದರೆ ಅಂತರ 6-5 ಆಗಿತ್ತು. ಫೈನಲ್‌ನಲ್ಲಿ ಮೆಕ್ಸಿಕೊವನ್ನು 2-1ರಿಂದ ಮಣಿಸಿ ಕಪ್ ಎತ್ತಿತ್ತು.
ಆದರೆ ಈ ಬಾರಿ ಆತಿಥೇಯ ಬ್ರಝಿಲ್ ಎದುರಿಗಿದೆ. ಪೆರು ತಂಡವನ್ನು 1-0 ಅಂತರದಿಂದ ಮಣಿಸಿ ಬಂದ ಬ್ರಝಿಲ್, ತವರಿನ ಫೈನಲ್‌ನಲ್ಲಿ ಒಮ್ಮೆಯೂ ಸೋತಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.