ಕೊಪ್ಪಳದಲ್ಲಿ ಮತ್ತೆ 15 ಮಂದಿಗೆ ಸೋಂಕು ದೃಢ ! ಸೋಂಕಿನ ಸಂಖ್ಯೆ 446ಕ್ಕೆ ಏರಿಕೆ
Team Udayavani, Jul 18, 2020, 7:27 PM IST
ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಶನಿವಾರ ಮತ್ತೇ 15 ಜನರಿಗೆ ಕೋವಿಡ್ ಸೋಂಕು ದೃಢಪಡುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆಯು 446ಕ್ಕೆ ಏರಿಕೆಯಾಗಿದೆ. ಶುಕ್ರವಾರ ರಾತ್ರಿ 53 ವರ್ಷದ ವೃದ್ಧ ಸಾವನ್ನಪಿದ್ದು, ಸಾವಿನ ಸಂಖ್ಯೆಯು 10ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಈ ವರೆಗೂ ಆಸ್ಪತ್ರೆಯಿಂದ 282 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಶನಿವಾರ ದೃಢಪಟ್ಟ 15 ಜನರ ಪೈಕಿ ಗಂಗಾವತಿಯ 35 ವರ್ಷದ ಮಹಿಳೆ, ಕೊಪ್ಪಳ ತಾಲೂಕಿನ ಭಾಗ್ಯನಗರದ 18 ವರ್ಷದ ಯುವಕ, ಬೇವಿನಹಳ್ಳಿಯ 30 ವರ್ಷದ ಯುವಕ, ಯಲಬುರ್ಗಾ ತಾಲೂಕಿನ ಬೆಣಕಲ್‌ನ 25 ವರ್ಷದ ಯುವಕ, ಯಲಬುರ್ಗಾದ 20 ವರ್ಷದ ಯುವತಿ, ಗಂಗಾವತಿ ನಗರದ 33 ವರ್ಷದ ಮಹಿಳೆ, 24 ವರ್ಷದ ಯುವಕ, 47 ವರ್ಷದ ವ್ಯಕ್ತಿ, ಕನಕಗಿರಿಯ 35 ವರ್ಷದ ಪ್ರಂಟ್‌ಲೈನ್ ವರ್ಕರ‍್ಸ್, ಕುಷ್ಟಗಿ ತಾಲೂಕಿನ ತಾವರಗೇರಾದ 63 ವರ್ಷದ ವ್ಯಕ್ತಿ, ಗಂಗಾವತಿ 54 ವರ್ಷದ ವ್ಯಕ್ತಿ, ಕಾರಟಗಿಯ 35 ವರ್ಷದ ವ್ಯಕ್ತಿ, 70 ವರ್ಷದ ಮಹಿಳೆ, ಯಲಬುರ್ಗಾದ ಯರೆಹಂಚಿನಾಳ ಗ್ರಾಮದ 34 ವರ್ಷದ ಪ್ರಂಟ್‌ಲೈನ್ ವರ್ಕರ‍್ಸ್, ಕುಷ್ಟಗಿಯ ತುಗ್ಗಲದೋಣಿಯ 40 ವರ್ಷದ ವ್ಯಕ್ತಿಯು ಸೇರಿದಂತೆ ಒಟ್ಟು 15 ಜನರಿಗೆ ಸೋಂಕು ದೃಢಪಟ್ಟಿದೆ.
ಇವರಲ್ಲಿ ಇಬ್ಬರು ಅನ್ಯ ಜಿಲ್ಲೆಯಿಂದ ಪ್ರವಾಸ ಮಾಡಿದ್ದರೆ, ಐವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿಯಿಲ್ಲ. ಮೂವರ ಟ್ರಾವೆಲ್ ಹಿಸ್ಟರಿ ಪತ್ತೆ ಕಾರ್ಯ ನಡೆದಿದೆ. ಇಬ್ಬರು ಐಎಲ್‌ಐ ಕೇಸ್‌ನಡಿ ಸೋಂಕಿಗೆ ತುತ್ತಾಗಿದ್ದರೆ, ಇಬ್ಬರು ಕೋವಿಡ್ ಪ್ರಂಟ್‌ಲೈನ್ ವರ್ಕರ್ಸ್‌ಗೆ ಸೋಂಕು ತಗುಲಿದೆ.
ಸೋಂಕಿತರ ಸಂಖ್ಯೆ 446ಕ್ಕೆ ಏರಿಕೆ : ಜಿಲ್ಲೆಯಲ್ಲಿ ಶುಕ್ರವಾರದ ಅಂತ್ಯಕ್ಕೆ 431 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಆದರೆ ಶನಿವಾರ ಮತ್ತೆ 15 ಜನರಿಗೆ ಸೋಂಕು ತಗುಲಿದ್ದು, ಒಟ್ಟಾರೆ ಈ ವರೆಗು 446 ಜನರಿಗೆ ಸೋಂಕು ತಗುಲಿದಂತಾಗಿದೆ. ಇವರಲ್ಲಿ ಶನಿವಾರ 17 ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಾರಂಭಿಸಿದ್ದರೆ, 34 ಜನರು ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಒಟ್ಟಾರೆ ಈ ವರೆಗು 282 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸಾವಿನ ಸಂಖ್ಯೆಯು 10ಕ್ಕೆ ಏರಿಕೆ : ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಕಾರಟಗಿಯ 53 ವರ್ಷದ ವೃದ್ಧನೋರ್ವ ಸೋಂಕಿನಿಂದ ಬಳಲಿ ಮೃತಪಟ್ಟಿದ್ದು, ಶನಿವಾರ ಜಿಲ್ಲಾಡಳಿತ ಇದನ್ನು ದೃಢಪಡಿಸಿದೆ. ಈ ಮೂಲಕ ಸಾವಿನ ಸಂಖ್ಯೆಯು 10ಕ್ಕೆ ಏರಿಕೆಯಾದಂತಾಗಿದೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ. ಆದರೆ ಸೋಂಕಿನಿಂದ ಬಳಲುವ ಜನರು ಬೇಗನೆ ಗುಣಮುಖರಾಗಿ ಮನೆಗೆ ವಾಪಸ್ಸಾಗುತ್ತಿರುವುದು ಸ್ವಲ್ಪ ಸಮಾಧಾನದ ಸಂಗತಿ. ಒಟ್ಟು 282 ಜನರು ಮನೆಗೆ ಆಗಮಿಸಿದ್ದರೆ, 154 ಜನರು ಸಕ್ರಿಯ ಕೇಸ್‌ನಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.