ಕೊರಟಗೆರೆ: ಹೊಳವನಹಳ್ಳಿ ಬಸ್ ನಿಲ್ದಾಣದಲ್ಲಿ ನಾಲ್ಕು ತಾಸು ಬಸ್‌ಗಳನ್ನು ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
Team Udayavani, Jan 3, 2023, 8:26 PM IST
ಕೊರಟಗೆರೆ: ನಿಗಧಿತ ಸಮಯಕ್ಕೆ ಬಸ್ ಬಾರದೆ ಆಗ್ರಹಿಸಿ ನೂರಾರು ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಹೊಳವನಹಳ್ಳಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಹೊಳವನಹಳ್ಳಿ ಬಸ್ ನಿಲ್ದಾಣದಲ್ಲಿ ತುಮಕೂರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆ ಹಾಗೂ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಸುಮಾರು ನಾಲ್ಕು ತಾಸು ಬಸ್‌ಗಳನ್ನು ತಡೆದು ಹೆಚ್ಚುವರಿ ಬಸ್‌ಗಾಗಿ ಪ್ರತಿಭಟನೆ ನಡೆಸಿದರು.ವಿದ್ಯಾರ್ಥಿಗಳು ಪ್ರತಿದಿನ ಅರಸಾಪುರ, ಬೈರೇನಹಳ್ಳಿ, ಅಕ್ಕಿರಾಂಪುರ, ಹೊಳವನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಂದ ಸುಮಾರು 500 ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ.ಅದರೆ ಸರ್ಕಾರಿ ಸಾರಿಗೆ ಬಸ್ ಪಾಸ್ ಗಳನ್ನು ಪಡೆದಿದ್ದರೂ, ಕೇವಲ ಒಂದು ಬಸ್ ಮಾತ್ರ ಬಿಟ್ಟಿದ್ದಾರೆ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಕೊರಟಗೆರೆ ಸೇರಿದಂತೆ ತುಮಕೂರು ನಗರಕ್ಕೆ ನೂರಾರು ವಿದ್ಯಾರ್ಥಿಗಳು ಸಾರಿಗೆ ಬಸ್ ನಂಬಿ ಪಾಸ್ ಪಡೆದಿದ್ದಾರೆ. ಆದರೆ ಸಮಯಕ್ಕೆ ಸರಿ ಯಾಗಿ ಬಸ್ ಬಾರದೇ ಬಸ್‌ಗಳಲ್ಲಿ ಜೋತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇರುವ ಒಂದು ಸರ್ಕಾರಿ ಸಾರಿಗೆ ಬಸ್ಸು ಅರಸಾಪುರ, ಬೈರೇನಹಳ್ಳಿ ಗ್ರಾಮಗಳಲ್ಲಿ ಬಸ್ ಭರ್ತಿಯಾಗಿ ಬರುತ್ತದೆ. ಭರ್ತಿಯಾದ ಹಿನ್ನೆಲೆ ಉಳಿದ ಗ್ರಾಮಗಳಲ್ಲಿ ಬಸ್ಸು ನಿಲ್ಲಸದೇ ಹೋಗುತ್ತಾರೆ ಎಂದು ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ವಿರುದ್ಧ ದೂರಿದರು.
ನಾಳೆಯಿಂದ ಬಸ್‌ಗಳ ಸಂಖ್ಯೆ ಹೆಚ್ಚಿಸಿ ಸಮಯಕ್ಕೆ ಸರಿಯಾಗಿ ಬಸ್ ಬರುವಂತೆ ವಿದ್ಯಾರ್ಥಿಗಳು ಆಗ್ರಹಿಸುವುದರ ಜೊತೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪುಪಾಟೀಲ್ ಆಗ್ರಹಿಸಿದರು.
ವಿದ್ಯಾರ್ಥಿ ಚೈತ್ರಾ ಮಾತನಾಡಿ ಹೋಬಳಿಯ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಮಕೂರು ಹಾಗೂ ಕೊರಟಗೆರೆ ಕಾಲೇಜುಗಳಿಗೆ ಹೋಗಲು ಬರಲು ಸಾರಿಗೆ ಬಸ್ ಗಳು ಇಲ್ಲದೆ ತೊಂದರೆ ಉಂಟಾಗಿದೆ. ಈ ಹಿಂದೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಅಧಿಕಾರಿಗಳು ಬಸ್‌ಗಳ ವ್ಯವಸ್ಥೆ ಮಾಡಿರುವುದಿಲ್ಲ. ಅದಕ್ಕಾಗಿ ವಿದ್ಯಾರ್ಥಿ ಪರಿಷತ್ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಬಸ್ ತಡೆದು ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮೇಘನಾ ಕಾಲೇಜು ವಿದ್ಯಾರ್ಥಿನಿ ಮಾತನಾಡಿ ಕೆಲವು ದಿನಗಳ ಹಿಂದೆಯೂ ಸಹ ಇದೆ ರೀತಿ ಪ್ರತಿಭಟನೆ ಮಾಡಿದ್ದೇವು,ನಂತರ ಕೆಲ ದಿನಗಳು ಮಾತ್ರ ಸರಿಯಾದ ಸಮಯಕ್ಕೆ ಬಸ್ ಬರುತ್ತಿದ್ದವು, ಆದರೆ ಈಗ ಶಾಲಾ ಸಮಯಕ್ಕೆ ಒಂದು ಬಸ್ ಮಾತ್ರ ಬರುತ್ತಿದೆ. ಆ ಬಸ್ ತುಂಬಿದರೆ ಮತ್ತೆ ಯಾವುದೇ ಬಸ್ ಬರುವುದಿಲ್ಲ. ಕೆಲವೊಮ್ಮೆ ಬಸ್ ನಿಲ್ಲಸದ ಕಾರಣ ವಾಪಸ್ಸು ಮನೆಗೆ ಮರಳಿ ಹೋಗಿದ್ದೇವೆ . ಕಾಲೇಜಿನ ಸಮಯಕ್ಕೆ ಸರಿಯಾಗಿ ಹೋಗದೇ ಪ್ರಾಂಶುಪಾಲರು ಶಾಲೆಯಿಂದ ಹೊರಗಡೆ ಕಳಿಸಿರುತ್ತಾರೆ. ನಾವು ಬಸ್ ಪಾಸ್ ಪಡೆದು ಆಟೋ ಹಾಗೂ ಖಾಸಗಿ ಬಸ್‌ನಲ್ಲಿ ಹಣ ನೀಡಿ ಹೋಗುತ್ತಿದ್ದೇವೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.