Kota: ಮಣೂರಿನ ಮನೆಗೆ ಆಗಂತುಕರ ಭೇಟಿ ಪ್ರಕರಣ 3 ತಂಡಗಳಲ್ಲಿ ತನಿಖೆ ಚುರುಕು
Team Udayavani, Jul 31, 2024, 6:15 AM IST
ಕೋಟ: ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಮಣೂರಿನ ನಿವಾಸಿಯೋರ್ವರ ಮನೆಗೆ ಜು. 25ರಂದು ಬೆಳಗ್ಗೆ ಎರಡು ಕಾರುಗಳಲ್ಲಿ ಪೊಲೀಸರು ಹಾಗೂ ಅಧಿಕಾರಿಗಳ ಸೋಗಿನಲ್ಲಿ ಆಗಂತುಕರ ತಂಡವೊಂದು ಭೇಟಿ ನೀಡಿ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಉಡುಪಿ ಎಸ್‌ಪಿ ಡಾ| ಅರುಣ್ ಕುಮಾರ್ ನೇತೃತ್ವದಲ್ಲಿ ಕೋಟ ಪೊಲೀಸರು ಹಾಗೂ ಉನ್ನತ ಅಧಿಕಾರಿಗಳನ್ನೊಳಗೊಂಡು ಮೂರು ತಂಡಗಳನ್ನು ರಚಿಸಿದ್ದು ಮುಂಬಯಿ, ಶಿವಮೊಗ್ಗ, ಬೆಂಗಳೂರು ಮೊದ ಲಾದ ಕಡೆಗಳಲ್ಲಿ ತಂಡ ತನಿಖೆ ನಡೆಸುತ್ತಿದೆ.
ವ್ಯವಹಾರಕ್ಕೆ ಅಥವಾ ದರೋಡೆ ಸಂಚು
ಈ ಮನೆಯ ಯಜಮಾನ ಒಂದಷ್ಟು ವ್ಯವಹಾರಗಳನ್ನು ನಡೆಸುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಬೆದರಿಕೆಯೊಡ್ಡಲು ಅಥವಾ ಹಣವನ್ನು ದೋಚುವ ಸಲುವಾಗಿ ಈ ರೀತಿಯ ಸನ್ನಿವೇಶ ಸೃಷ್ಟಿಸಿರ ಬಹುದೇ ಎನ್ನುವ ಅನುಮಾನ ಒಂದು ಕಡೆಯಲ್ಲಿದ್ದರೆ ಮತ್ತೂಂದು ದೃಷ್ಟಿಕೋನದಲ್ಲಿ ದರೋಡೆ ಕೋರರು ಪೊಲೀಸರು, ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಬಂದು ಸಿನಿಮೀಯ ಮಾದರಿ ಯಲ್ಲಿ ಮನೆಯಲ್ಲಿರುವ ಚಿನ್ನ, ಹಣ ಮುಂತಾದ ಸಂಪತ್ತನ್ನು ಲೆಕ್ಕ ನೀಡುವಂತೆ ಹೇಳಿ ಅನಂತರ ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸುವ ಸಂಚನ್ನು ತಂಡ ಹೊಂದಿತ್ತೇ ಎನ್ನುವ ಅನುಮಾನ ಕೂಡ ಸ್ಥಳೀಯ ವಲಯದಲ್ಲಿದೆ.
ಕುತೂಹಲ
ಪ್ರಕರಣ ಸಂಪೂರ್ಣ ನಿಗೂಢ ವಾಗಿರುವುದರಿಂದ ಹಾಗೂ ಘಟನೆ ನಡೆದು 5 ದಿನಗಳು ಕಳೆದರೂ ಈ ಬಗ್ಗೆ ಯಾವುದೇ ಮಾಹಿತಿ ಹೊರಬೀಳದಿರುವುದರಿಂದ ತಂಡ ಯಾವ ಉದ್ದೇಶದಿಂದ ಈ ರೀತಿ ಮಾಡಿರಬಹುದು ಎನ್ನುವ ಕುತೂಹಲ ಸಾರ್ವಜನಿಕ ವಲಯದಲ್ಲಿದೆ. ಈ ಬಗ್ಗೆ ತನಿಖೆ ಚಾಲ್ತಿಯಲ್ಲಿದ್ದು ಹೆಚ್ಚಿನ ಮಾಹಿತಿ ದೊರೆತಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.