ಕ್ರೀಡಾಲೋಕದ ಮೇಲೆ ಮತ್ತೆ ಕೆಂಗಣ್ಣು ಬೀರಿದ ಕೋವಿಡ್
Team Udayavani, Feb 28, 2021, 11:44 PM IST
ಹೊಸದಿಲ್ಲಿ: ಕ್ರೀಡಾಲೋಕದ ಮೇಲೆ ಮತ್ತೆ ಕೊರೊನಾ ಕೆಂಗಣ್ಣು ಬೀರಿದಂತಿದೆ. ಭಾರತದ ಶೂಟಿಂಗ್ ಕೋಚ್, ಪ್ಯಾರಾ ಆ್ಯತ್ಲೀಟ್ ನಿಶಾದ್ ಕುಮಾರ್, ಸ್ಪೇನಿನ ಟೆನಿಸ್ ಆಟಗಾರ್ತಿ ಗಾರ್ಬಿನ್ ಮುಗುರುಜಾ ಅವರ ಕೋಚ್ ಕೊಂಚಿಟಾ ಮಾರ್ಟಿನೆಸ್ ಅವರಿಗೆ ಈ ಸೋಂಕು ದೃಢಪಟ್ಟಿದೆ.
ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಟೂರ್ನಿಗಾಗಿ ಕೈರೋದಲ್ಲಿರುವ ಭಾರತದ ಶಾಟ್‌ಗನ್ ತಂಡವೊಂದರ ಕೋಚ್‌ಗೆ ಕೊರೊನಾ ಸೋಂಕು ತಗುಲಿದೆ. ಇವರ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.
ಈಜಿಪ್ಟ್ಗೆ ಬಂದಿಳಿದ ಬಳಿಕ ಎಲ್ಲರನ್ನೂ ಸತತ ವಾಗಿ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗು ತ್ತಿದೆ. ಕೋಚ್ ಒಬ್ಬರನ್ನು ಹೊರತುಪಡಿಸಿ ಉಳಿ ದವರೆಲ್ಲರ ಫಲಿತಾಂಶ ನೆಗೆಟಿವ್ ಬಂದಿದೆ. ಸದ್ಯ ಇವರು ಕ್ವಾರಂಟೈನ್‌ನಲ್ಲಿದ್ದು, ಶೀಘ್ರವೇ ಇನ್ನೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ.
ನಿಶಾದ್ ಆಸ್ಪತ್ರೆಗೆ ದಾಖಲು
ಪ್ಯಾರಾ ಆ್ಯತ್ಲೀಟ್ ನಿಶಾದ್ ಕುಮಾರ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ತಿಂಗಳು ದುಬಾೖಯಲ್ಲಿ ಮುಗಿದ “ಫಾಝಾ ವರ್ಲ್ಡ್ ಪ್ಯಾರಾ ಆ್ಯತ್ಲೆಟಿಕ್ಸ್ ಗ್ರ್ಯಾನ್‌ಪ್ರೀ’ ಕೂಟದ ಟಿ46/47 ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ನಿಶಾದ್ ಚಿನ್ನದ ಪದಕ ಜಯಿಸಿದ್ದರು.
ನಿಶಾದ್ ಕುಮಾರ್ 4 ದಿನಗಳ ಹಿಂದೆ ಬೆಂಗ ಳೂರಿನ ಸಾಯ್ ಕ್ಯಾಂಪಸ್‌ಗೆ ಆಗಮಿಸಿದ್ದರು. ಪ್ಯಾರಾ ಆ್ಯತ್ಲೆಟಿಕ್ಸ್ ಕೋಚ್ ಸತ್ಯನಾರಾಯಣ ಅವರಲ್ಲೂ ಕಳೆದ ವಾರ ಕೊರೊನಾ ಕಂಡುಬಂದಿತ್ತು.
ದೋಹಾದಲ್ಲಿ ಕೋವಿಡ್ ಪ್ರಕರಣ
ಸೋಮವಾರದಿಂದ ಆರಂಭವಾಗಲಿರುವ “ಕತಾರ್ ಓಪನ್’ ಟೆನಿಸ್ ಪಂದ್ಯಾವಳಿಗಾಗಿ ದೋಹಾಕ್ಕೆ ಬಂದಿಳಿದ ಬಳಿಕ ಕೊಂಚಿಟಾ ಮಾರ್ಟಿನೆಸ್ ಅವರಲ್ಲಿ ಕೋವಿಡ್-19 ದೃಢಪಟ್ಟಿದೆ. ಮಾಜಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಮಾರ್ಟಿನೆಸ್ ಅವರನ್ನೀಗ ಇಲ್ಲಿನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.