ಕೆ.ಎಸ್.ಆರ್.ಟಿ.ಸಿ/ ಸೊಸೈಟಿ; CM ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 26.98 ಕೋಟಿ ರೂ. ಚೆಕ್
Team Udayavani, May 9, 2019, 2:18 PM IST
ಬೆಂಗಳೂರು: ಕೆ.ಎಸ್.ಆರ್.ಟಿ.ಸಿ.ಯಿಂದ ಮಡಿಕೇರಿ ಪ್ರವಾಹ ಸಂತ್ರಸ್ಥರಿಗಾಗಿ ಸಂಗ್ರಹಿಸಲಾದ ಒಟ್ಟು 9.17 ಕೋಟಿ ರೂಗಳ ಚೆಕ್ ಅನ್ನು (ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ) ಸಿಎಂ ಕುಮಾರಸ್ವಾಮಿ ಗುರುವಾರ ತಮ್ಮ ಕಚೇರಿಯಲ್ಲಿ ಸ್ವೀಕರಿಸಿದರು.
ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಅಧಿಕಾರಿ ಹಾಗೂ ಸಿಬ್ಬಂದಿಗಳ ಒಂದು ದಿನದ ಸಂಬಳದಿಂದ ಸಂಗ್ರಹವಾದ ಹಣವನ್ನು ಮಡಿಕೇರಿ ಸಂತ್ರಸ್ಥರ ನೆರವಿಗಾಗಿ ನೀಡಿದ್ದರು.
ಈ ಸಂದರ್ಭದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶಾಸಕರಾದ ಶಿವಲಿಂಗೇಗೌಡ, ಸತ್ಯನಾರಾಯಣ, ಕೆ.ಎಸ್.ಆರ್.ಟಿ.ಸಿ. ಹಿರಿಯ ಅಧಿಕಾರಿಗಳಾದ ಬಸವರಾಜು, ಶಿವಯೋಗಿ ಕಳಸದ, ಎನ್.ವಿ.ಪ್ರಸಾದ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಸಂಗ್ರಹವಾದ 17.81 ಲಕ್ಷ ರೂ.ಗಳ ಪರಿಹಾರ ನಿಧಿ ಚೆಕ್ ಅನ್ನು ಸಿಎಂ ಸ್ವೀಕರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.