ನೆದರ್‌ಲ್ಯಾಂಡ್ಸ್‌ನ ಕುಕೇಂಹೊಫ್ ಟುಲಿಪ್‌ ತೋಟ: ಕಣ್ಣು ಹಾಯಿಸಿದಷ್ಟೂ ಬಣ್ಣಬಣ್ಣದ ಸುಂದರ ನೋಟ!

ರೈಲಿನ ವ್ಯವಸ್ಥೆಯು ಇದೆ ಅಥವಾ ಕಾರಿನ ಮೂಲಕವೂ ಹೋಗಬಹುದು

Team Udayavani, Jun 22, 2024, 11:55 AM IST

ನೆದರ್‌ಲ್ಯಾಂಡ್ಸ್‌ನ ಕುಕೇಂಹೊಫ್ ಟುಲಿಪ್‌ ತೋಟ: ಕಣ್ಣು ಹಾಯಿಸಿದಷ್ಟೂ ಬಣ್ಣಬಣ್ಣದ ಸುಂದರ ನೋಟ!

ಹೂವು ನೋಡುವುದಕ್ಕೂ ಬೇಕು ಮುಡಿಯುವುದಕ್ಕೂ ಬೇಕು, ದೇವರ ಮುಡಿಪುಗು ಬೇಕು ಮದುವೆ ಮುಂಜಿಗಳಿಗೂ ಬೇಕು, ಹಬ್ಬ ಹಾಡಿಗಳಲ್ಲೂ, ಜನನ ಮರಣದಲ್ಲೂ, ರಾಜಕೀಯದಲ್ಲೂ, ಪ್ರೇಮಿಗಳ ಪ್ರೇಮದಲ್ಲೂ, ಎಲ್ಲೆಲ್ಲೂ ಸಡಗರದ ಸಂಕೇತ ತರುವ ಒಂದು ಚೆಲುವಾದ ವಸ್ತು ಈ ಹೂವು. ಚಿಕ್ಕವರು -ದೊಡ್ಡವರು, ಮತಗಳು – ಕ್ಷೇತ್ರಗಳು ಎಂಬ ಭೇದಭಾವವಿಲ್ಲದೆ ಎಲ್ಲರ ಮನಸ್ಸಿಗೆ ಮುದ ನೀಡುವ ವಸ್ತು ಈ ಹೂವು.

ಈ ಹೂವುಗಳಲ್ಲಿ ಕಂಪು ಬೀರುವವು ಉಂಟು ಕಂಪು ಬೀರದೆ ಸುಮ್ಮನೆ ನೋಟಕ್ಕೆ ಚೆಂದವಾಗಿರುವವು ಕೂಡ ಉಂಟು. ಹಾಗೆಯೇ ಔಷಧಕಾರಿ ಹಾಗೂ ವಿಷಕಾರಿ ಹೂವುಗಳು ಕೂಡ ಅಸ್ತಿತ್ವದಲ್ಲಿವೇ. ಪ್ರಪಂಚದ ಅನೇಕ ಪ್ರದೇಶಗಳಲ್ಲಿ ಅನೇಕ ವಿವಿಧ ರೀತಿಯ ಜಾತಿಯ ಹೂವುಗಳು ಲಭ್ಯವಾಗುತ್ತದೆ. ಈ ಹೂವುಗಳು ಆಯಾ ಪ್ರಾದೇಶಿಕದ ಪ್ರಕಾರ ತಮ್ಮ ಬಣ್ಣ, ರೂಪ ಹಾಗೂ ಆಕಾರಗಳನ್ನು, ಸ್ವಭಾವವನ್ನು ಹೊಂದಿರುತ್ತದೆ. ಇವುಗಳ ಜತೆ ಟುಲಿಪ್‌ ಎಂಬ ಹೂವಿನ ಬಗ್ಗೆ ಬಹಳಷ್ಟು ಮಂದಿಗೆ ಪರಿಚಯವಿರುವುದಿಲ್ಲ. ಟುಲಿಪ್‌ ಎಂಬ ಹೂವನ್ನು ಅಲಂಕಾರಗಳಲ್ಲಿ, ಬೊಕ್ಕೆಗಳಲ್ಲಿ ನೋಡಿರುತ್ತಾರೆ ಹಾಗೂ ಅದರ ಹೆಸರನ್ನು ಕೇಳಿರುತ್ತಾರೆ ಬಿಟ್ಟರೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದಿರುವವರು ಕಡಿಮೆಯೇ.


ಈ ಟುಲಿಪ್‌ ಹೂವು ಅತ್ಯಂತ ಮೃದು ಹಾಗೂ ಸೂಕ್ಷ್ಮ ಸ್ವಭಾವದ ಹೂವಾಗಿದ್ದು, ಇದು ತಂಪು ವಾತಾವರಣದಲ್ಲೇ ಹೆಚ್ಚಾಗಿ ವಸಂತ ಋತುವಿನಲ್ಲಿ ಹುಟ್ಟಿ ಬೆಳೆಯುತ್ತವೆ. ಆದ್ದರಿಂದ ಇವು ಹವಾಮಾನ ತಾಪಮಾನ ಕಡಿಮೆ ಇರುವ ಪ್ರದೇಶಗಳಾದಂತಹ ಕಾಶ್ಮೀರ, ನೆದರ್‌ಲ್ಯಾಂಡ್ಸ್‌ ಮತ್ತು ಯುನೈಟೆಡ್‌ ಕಿಂಗ್ಡಮ್‌ಗಳಲ್ಲಿ ಹೇರಳವಾಗಿ ದೊರೆಯುತ್ತವೆ. ಹಾಗಾಗಿ ಇವು ವರುಷದಲ್ಲಿ ಕೇವಲ ಎಪ್ರಿಲ್‌ ಮತ್ತು ಮೇ ತಿಂಗಳುಗಳಲ್ಲಿ ಮಾತ್ರವೇ ಲಭ್ಯವಿರುತ್ತದೆ.

ಇನ್ನೊಂದು ವಿಷಯ ನಿಮಗೆ ಗೊತ್ತೇ? ಟುಲಿಪ್‌ ಹೂವಿಗೆ ಕನ್ನಡ ಅಥವಾ ಭಾರತದ ಯಾವುದೇ ಸ್ಥಳೀಯ ಭಾಷೆಯ ಹೆಸರಿಲ್ಲ ಏಕೆಂದರೆ ಇದು ಹೆಚ್ಚಾಗಿ ಪಶ್ಚಿಮ ದಿಕ್ಕಿನ ತಂಪಿನ ರಾಷ್ಟ್ರಗಳ ಗಿಡ. ಇದನ್ನು ಈಗೀಗ ಭಾರತದಲ್ಲಿಯೂ ಕೂಡ ಪರಿಚಯಿಸಲಾಗುತ್ತದೆ. ನೆದರ್‌ಲ್ಯಾಂಡ್ಸ್‌ನಲ್ಲಿ ಕುಕೇಂಹೊಫ್ ಎಂಬ ಟುಲಿಪ್‌ ಹೂವಿನ ಅತೀದೊಡ್ಡ ತೋಟವಿದ್ದು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಆದರೆ ಹಲವರಿಗೆ ಗೊತ್ತಿರದ ವಿಚಾರವೆಂದರೆ ನಮ್ಮ ಯುನೈಟೆಡ್‌ ಕಿಂಗ್ಡಮ್‌ನಲ್ಲೂ ಸಹ ಹಲವೆಡೆ ಈ ತೋಟಗಳನ್ನು ಕೃಷಿ ಮಾಡುತ್ತಿದ್ದು ಚಿಕ್ಕ ಗಾತ್ರದ್ದೇ ಆದರೂ ಹಲವು ಜಾಗಗಳಲ್ಲಿ ಲಭ್ಯವಾಗುವಂತೆ ಅನುವು ಮಾಡಿಕೊಡುತ್ತಿದ್ದಾರೆ.

ಇವುಗಳಲ್ಲಿ ಅತೀ ದೊಡ್ಡ ಟುಲಿಪ್‌ ತೋಟವು ಪೂರ್ವ ಯುಕೆಯ ನಾರ್ಫೋಕ್‌ನ ಕಿಂಗ್ಸ್‌ಲಿನ್‌ ಎಂಬ ಜಾಗದಲ್ಲಿ ಇರುತ್ತದೆ. ಪ್ರತೀ ವರುಷವು ಎಪ್ರಿಲ್‌ ತಿಂಗಳ ಕೊನೆ ಅಥವಾ ಮೇ ತಿಂಗಳ ಮೊದಲನೇ ವಾರಗಳಲ್ಲಿ ಭಿನ್ನ ಭಿನ್ನವಾದ ಟುಲಿಪ್‌ ಹೂವುಗಳ ವಿಶೇಷ ಪ್ರದರ್ಶನವಿರುತ್ತದೆ. ಇಲ್ಲಿಗೆ ಫ‌ಸ್ಟ್‌ ಕಮ್‌ ಫ‌ಸ್ಟ್‌ ಸರ್ವ್‌ ಎಂಬ ವ್ಯವಸ್ಥೆಯಲ್ಲಿ ಟಿಕೆಟ್‌ಗಳ ವ್ಯವಸ್ಥೆ ಇದ್ದು ಇವುಗಳನ್ನು ಅಂರ್ತಜಾಲದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಹೂವುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಎರಡು ವಾರಗಳ ಮುನ್ನ ಟಿಕೆಟ್‌ಗಳು ಲಭ್ಯವಿದ್ದು ಜನರು ಚಾತಕ ಪಕ್ಷಿಗಳಂತೆ ಕಾದು ತಮ್ಮ ಟಿಕೆಟ್‌ಗಳನ್ನೂ ಖರೀದಿಸುತ್ತಾರೆ. ಪರಿಸರ ಸಂರಕ್ಷಣೆಗಾಗಿ ಈ ತೋಟದ ನಿರ್ವಾಹಕರು ಹೆಚ್ಚು ಸಂಖ್ಯೆಯಲ್ಲಿ ಜನರು ಬಂದು ಹೂವುಗಳಿಗೆ ತೊಂದರೆ ನೀಡದಂತೆ ಎಚ್ಚರ ವಹಿಸಿ ನಿಗದಿತ ಸಂಖ್ಯೆಯಲ್ಲಿ ಟಿಕೆಟ್‌ಗಳನ್ನೂ ಬಿಡುಗಡೆಗೊಳಿಸುತ್ತಾರೆ. ಎಷ್ಟೇ ಆದರೂ ಇವರಿಗೆ ಈ ಹೂವುಗಳು ಸಣ್ಣ ಮಕ್ಕಳಿನಂತೆಯೇ ಅಲ್ಲವೇ? ಇವುಗಳನ್ನು ಕೂಡ ಅಷ್ಟೇ ಜೋಪಾನವಾಗಿ ಕಾದು ಸಂರಕ್ಷಿಸಿ, ಜನರಿಗೂ ಅವುಗಳ ಆನಂದ ನೀಡುವ ಒಂದು ಸಣ್ಣ ಪ್ರಯತ್ನ ಇವರದ್ದಾಗಿದೆ.

ಈ ಟುಲಿಪ್‌ ಹೂವುಗಳನ್ನು ಅನೇಕ ಬಣ್ಣಗಳಲ್ಲಿ ಬೆಳೆಯಲಾಗುತ್ತದೆ. ಕೆಲವು ಅವುಗಳ ನೈಸರ್ಗಿಕ ಬಣ್ಣವಾದರೆ ಇನ್ನು ಕೆಲುವು ಹೈಬ್ರಿಡ್‌ ವಿಧವಾದವು. ಕೆಂಪು, ಹಳದಿ, ಕೇಸರಿ, ಗುಲಾಬಿ, ಬಿಳಿ, ಮಿಶ್ರಿತ ಬಣ್ಣಗಳನ್ನು ಇವು ಹೊಂದಿರುತ್ತವೆ. ಅಷ್ಟೇ ಅಲ್ಲದೆ ಪ್ಯಾರೋಟ್‌ ಟುಲಿಪ್‌, ಗಾರ್ಡನ್‌ ಟುಲಿಪ್‌, ಲೇಡಿ ಟುಲಿಪ್‌, ರೆಡ್‌ ಕ್ರಾಸ್‌ ಟುಲಿಪ್‌ ಹೀಗೆ ಅನೇಕ ಜಾತಿಯ ಹೂವುಗಳು ಕೂಡ ದೊರೆಯುತ್ತವೆ. ಈ ಹೂವಿನ ಇನ್ನೊಂದು ವಿಶೇಷವೆಂದರೆ ಇವುಗಳಲ್ಲಿ ಯಾವುದೇ ತರಹದ ಸುವಾಸನೆ ಇರುವುದಿಲ್ಲ ಆದರೆ ನೋಡುವುದಕ್ಕೆ ಮಾತ್ರ ಬಲು ಅಂದ.

ಇನ್ನು ಕಿಂಗ್ಸ್‌ಲಿನ್‌ ತೋಟದಲ್ಲಿ ಗಾರ್ಡನ್‌ ಟುಲಿಪ್‌ ಮತ್ತು ಟುಲಿಪ್‌ ಬಲ್ಬ್ಗಳನ್ನೂ ಹೆಚ್ಚಾಗಿ ಬೆಳೆಯುತ್ತಾರೆ. ಲಂಡನ್‌ ನಿಂದ ಸುಮಾರು 150 ಮೈಲಿ ದೂರದಲ್ಲಿ ಈ ಜಾಗವಿದ್ದು, ಇಲ್ಲಿಗೆ ಹೋಗಲು ರೈಲಿನ ವ್ಯವಸ್ಥೆಯು ಇದೆ ಅಥವಾ ಕಾರಿನ ಮೂಲಕವೂ ಹೋಗಬಹುದು. ಕಾರಿನಲ್ಲಿ ಸುಮಾರು ಎರಡುವರೆ ತಾಸಿನಲ್ಲಿ ಹೋಗಿ ಮುಟ್ಟಬಹುದು. ಭೂಮಿಯನ್ನು ತಿರುಗಿಸುವ ಸಲುವಾಗಿ ಈ ತೋಟವು ಅದೇ ಪ್ರದೇಶದಲ್ಲಿ ಹಲವು ಬೇರೆ ಬೇರೆ ತೋಟದಲ್ಲಿ ಬೆಳೆಯುತ್ತಾರೆ. ಈ ಜಾಗದ ಪೋಸ್ಟ್‌ಕೋಡ್‌ ಅನ್ನು ಟಿಕೆಟ್‌ ಖರೀದಿಸಿದವರಿಗೆ ಮಾತ್ರ ನೀಡಲಾಗುತ್ತದೆ. ಸಾರ್ವಜನಿಕವಾಗಿ ಹೇಳಿಬಿಟ್ಟರೆ ಮತ್ತೆ ಜನರ ನೂಕು ನುಗ್ಗಲನ್ನು ತಪ್ಪಿಸಲು ಸಾಧ್ಯವಿಲ್ಲವೆಂದು ಈ ತಂತ್ರವನ್ನು ಉಪಯೋಗಿಸುತ್ತಾರೆ ಅನಿಸುತ್ತದೆ !

ಈ ಟಿಕೆಟ್‌ನಲ್ಲಿ ಪ್ರವೇಶದ ಸಮಯವನ್ನು ಸಹ ತಿಳಿಸಲಾಗುತ್ತದೆ. ಈ ನಿಗದಿತ ಸಮಯದಲ್ಲಿ ಪ್ರವೇಶವನ್ನು ಪಡೆದು ತೋಟದಲ್ಲಿ ಎಷ್ಟು ಸಮಯ ಬೇಕಾದರೂ ಕಳೆಯಬಹುದು. ಪಾರ್ಕಿಂಗ್‌ ಕೂಡ ಯಥೇಚ್ಛವಾಗಿದ್ದು ಶುಲ್ಕ ರಹಿತವಾಗಿರುತ್ತದೆ. ತೋಟವು ಬಹಳ ದೊಡ್ಡದಾಗಿದ್ದು ಸರಿಯಾಗಿ ಟುಲಿಪ್‌ ಗಳನ್ನು ನೋಡಿ ಆನಂದಿಸಿ ಛಾಯಾಚಿತ್ರಗಳನ್ನು ತೆಗೆದೊಕೊಳ್ಳುವುದಕ್ಕೆ 3 ರಿಂದ 4ತಾಸುಗಳು ಹಿಡಿದೇ ಹಿಡಿಯುತ್ತದೆ. ಹಾಂ! ಇಲ್ಲಿ ಹೋಗುವವರಿಗೆ ತುಂಬಾ ಮುಖ್ಯವಾದ ಸಲಹೆಯೆಂದರೆ ಸರಿಯಾದ ಪಾದರಕ್ಷೆಗಳನ್ನು ಹಾಕುವುದು. ಗಟ್ಟಿಮುಟ್ಟಾದ ಫ್ಲಾಟ್‌ ಚಪ್ಪಲಿ ಅಥವಾ ಶೂವನ್ನು ಹಾಕುವುದು ಅತ್ಯಂತ ಉತ್ತಮ ಏಕೆಂದರೆ ತೋಟದಲ್ಲಿ ಉಬ್ಬು ತಗ್ಗುಗಳು ಅಲ್ಲಲ್ಲಿ ಗಿಡ ಗಂಟೆಗಳು ಇರುತ್ತವೆ. ಇನ್ನು ಮಳೆಯೇನಾದರೂ ಬಂದಿದ್ದರೆ ಭೂಮಿಯು ಕೊಂಚ ಒದ್ದೆಯಾಗಿದ್ದು ಕುಸಿಯುವ ಸಂಭವವಿರುತ್ತದೆ. ಹಾಗಾಗಿ ಚೂಪಾದ ಹೀಲ್‌ ಚಪ್ಪಲಿ, ಓಪನ್‌ ಟೊಎಡ್‌ ಚಪ್ಪಲಿ ಅಥವಾ ಫ್ಯಾನ್ಸಿ ಚಪ್ಪಲಿಗಳನ್ನು ಮನೆಯಲ್ಲಿ ಬಿಟ್ಟು ಬರುವುದು ಒಳ್ಳೆಯ ಉಪಾಯ. ಇನ್ನು ಇಲ್ಲೇ ಅಡ್ಡಾಡಿ ಸುಸ್ತಾದರೆ ಅಲ್ಲೇ ಬಿಸಿ ಕಾಫಿ ಚಹಾ ಮತ್ತು ಲಘು ಉಪಹಾರ ದೊರೆಯುವ ಸಣ್ಣ ಕಿಯೋಸ್ಕ್‌ ಗಳು ಲಭ್ಯವಿರುತ್ತವೆ.

ಈ ಟುಲಿಪ್‌ ತೋಟವನ್ನು ಕಣ್ತುಂಬ ನೋಡಿಯಾದ ಮೇಲೆ ಇನ್ನು ಓಡಾಡುವ ಶಕ್ತಿ ಹಾಗೂ ಇಚ್ಛೆ ಇದ್ದರೆ, ಕೇವಲ 4 ಮೈಲಿಯಲ್ಲಿ ಇರುವ ಸಂಡ್ರಿಂಗ್ರಾಮ್‌ ಎಸ್ಟೇಟ್‌ ಅನ್ನು ನೋಡಿ ಬರಬಹುದು. ಇದು ಮೂರನೇ ಚಾರ್ಲ್ಸ್‌ ರಾಜ ಮನೆತನದವರ ನಿವಾಸಗಳಲ್ಲಿ ಒಂದಾಗಿದ್ದು, ಅವರ ಅಜ್ಜ, ಜಾರ್ಜ್‌ VI ಮತ್ತು ಮುತ್ತಜ್ಜ, ಜಾರ್ಜ್‌ V, ಇಬ್ಬರೂ ಅಲ್ಲಿ ನಿಧನರಾದರು. ಈ ಬಂಗಲೆಯು 20,000 ಎಕ್ರೆ ಜಾಗದಲ್ಲಿ ನಿರ್ಮಾಣಗೊಳಿಸಲಾಗಿದೆ. 1977ರಲ್ಲಿ, ತನ್ನ ರಜತ ಮಹೋತ್ಸವವನ್ನು ಗುರುತಿಸಲು, ರಾಣಿ ಮೊದಲ ಬಾರಿಗೆ ಮನೆ ಮತ್ತು ಮೈದಾನವನ್ನು ಸಾರ್ವಜನಿಕರಿಗೆ ತೆರೆದರು. ಇದು ಇಂಗ್ಲೆಂಡ್‌ನ‌ ರಾಣಿ ಎಲಿಜಬೆತ್‌ IIಗೆ ಹಸ್ತಾಂತರಗೊಂಡಿದ್ದು, 2022ರಲ್ಲಿ, ರಾಣಿಯ ಮರಣದ ಅನಂತರ, ಸ್ಯಾಂಡ್ರಿಂಗ್ರಾಮ್‌ ತನ್ನ ಮಗ ಮತ್ತು ಉತ್ತರಾಧಿಕಾರಿ ಚಾರ್ಲ್ಸ್ IIIಗೆ ವರ್ಗಾಯಿಸಲಾಯಿತು.

ಈ ಜಾಗದಲ್ಲಿ ಬಂಗಲೆ ಹಾಗೂ ತೋಟಗಳಿದ್ದು ಅವುಗಳನ್ನು ನೋಡುವುದಕ್ಕೂ ಸಹ 3-4 ಘಂಟೆಗಳು ಹಿಡಿಯುತ್ತವೆ. ಪಾರ್ಕಿಂಗ್‌ ಇಂದ ಬಂಗಲೆಯ ವರೆಗೂ ಸುಮಾರು 30 ನಿಮಿಷ ನಡೆಯಬೇಕು. ನೀವು ಟುಲಿಪ್‌ ಗಾರ್ಡನ್‌ಗೆ ಹಾಕಿದ ಗಟ್ಟಿ ಚಪ್ಪಲಿಯೂ ಇಲ್ಲಿಯೂ ಸಹ ಕೆಲಸಕ್ಕೆ ಬರುವುದರಲ್ಲಿ ಸಂದೇಹವಿಲ್ಲ! ಇಲ್ಲಿಯ ಪ್ರವೇಶ ಶುಲ್ಕ ಹಾಗೂ ಪಾರ್ಕಿಂಗ್‌ ಶುಲ್ಕಗಳು ಇರುತ್ತವೆ. ಪ್ರವೇಶ ಶುಲ್ಕವನ್ನು ಮೊದಲೇ ಕಾಯ್ದಿರಿಸಬಹುದು. ಈ ರೀತಿ ಒಂದು ಇಡೀ ದಿನದಲ್ಲಿ ಮನಮೋಹಕ ಹೂವುಗಳಿಂದ ಹಿಡಿದು ರಾಯಲ್‌ ಮನೆತನದವರೆಗೂ ಎಲ್ಲವನ್ನು ನೋಡುವ ಆಸೆಯುಳ್ಳವವರು, ಸ್ಥಳೀಯರು ಮತ್ತು ಪ್ರವಾಸಿಗರು, ದೊಡ್ಡವರು ಚಿಕ್ಕವರು. ಎಲ್ಲರೂ ನಾರ್ಫೋಕ್‌ಗೆ ಖಂಡಿತ ಭೇಟಿ ನೀಡಲೇಬೇಕು.

ರಜನಿ, ಲಂಡನ್‌

ಟಾಪ್ ನ್ಯೂಸ್

Swamijis should talk to High command about CM change: Chaluvarayaswamy

CM ಬದಲಾವಣೆ ಬಗ್ಗೆ ಸ್ವಾಮೀಜಿಗಳು ಬೇಕಾದರೆ ವರಿಷ್ಠರ ಜತೆ ಮಾತನಾಡಲಿ: ಚಲುವರಾಯಸ್ವಾಮಿ‌

10

ಸ್ತನ ಕ್ಯಾನ್ಸರ್‌ ಕಾಡಿದ ಚಿತ್ರರಂಗದ ಸುಂದರಿಯರಿವರು.. ಕಾಯಿಲೆಯನ್ನೇ ಗೆದ್ದ ದಿಟ್ಟೆಯರು..

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

Hubballi Dharwad Municipal corporation: ಮೇಯರ್ ಆಗಿ ಬಿಜೆಪಿಯ ರಾಮಪ್ಪ ಬಡಿಗೇರ ಆಯ್ಕೆ

Hubballi Dharwad Municipal corporation: ಮೇಯರ್ ಆಗಿ ಬಿಜೆಪಿಯ ರಾಮಪ್ಪ ಬಡಿಗೇರ ಆಯ್ಕೆ

Ayodhya: ರಾಮಪಥದ ಕಳಪೆ ಕಾಮಗಾರಿ-6 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ

Ayodhya: ರಾಮಪಥದ ಕಳಪೆ ಕಾಮಗಾರಿ-6 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ

Mandya; ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಸಾರಿಗೆ ಬಸ್; ಹಲವರಿಗೆ ಗಾಯ

Mandya; ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಸಾರಿಗೆ ಬಸ್; ಹಲವರಿಗೆ ಗಾಯ

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

ಸ್ತನ ಕ್ಯಾನ್ಸರ್‌ ಕಾಡಿದ ಚಿತ್ರರಂಗದ ಸುಂದರಿಯರಿವರು.. ಕಾಯಿಲೆಯನ್ನೇ ಗೆದ್ದ ದಿಟ್ಟೆಯರು..

egg-lollipop

Egg Loli pop Recipes; ಅಬ್ಬಾ! ಏನ್ ರುಚಿ ಈ ಎಗ್‌ ಲಾಲಿಪಾಪ್‌

Why is the T20 World Cup failed in America despite spending crores of crores?

T20 World Cup; ಕೋಟಿ ಕೋಟಿ ಖರ್ಚು ಮಾಡಿದರೂ ಅಮೆರಿಕದಲ್ಲಿ ವಿಶ್ವಕಪ್ ವಿಫಲವಾಗಿದ್ಯಾಕೆ?

1-qweqewqe

Anegundi; ಕೆಂಪೇಗೌಡರನ್ನು ಬಂಧನದಲ್ಲಿಟ್ಟಿದ್ದ ಆನೆಗೊಂದಿ ಸೆರೆಮನೆ ಪತ್ತೆ

Juneteenth: ಜೂನ್‌ಟೀಂಥ್‌ ಅಮೆರಿಕದ ರಾಷ್ಟ್ರೀಯ ಸ್ವಾತಂತ್ರ್ಯ ದಿನ

Juneteenth: ಜೂನ್‌ಟೀಂಥ್‌ ಅಮೆರಿಕದ ರಾಷ್ಟ್ರೀಯ ಸ್ವಾತಂತ್ರ್ಯ ದಿನದ ಇತಿಹಾಸ…

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

No problem anyone comes in front of Martin…: Producer Uday Mehta

Martin ಮುಂದೆ ಯಾರೇ ಬರಲಿ ನೋ ಪ್ರಾಬ್ಲಂ…: ನಿರ್ಮಾಪಕ ಉದಯ್‌ ಮೆಹ್ತಾ

Swamijis should talk to High command about CM change: Chaluvarayaswamy

CM ಬದಲಾವಣೆ ಬಗ್ಗೆ ಸ್ವಾಮೀಜಿಗಳು ಬೇಕಾದರೆ ವರಿಷ್ಠರ ಜತೆ ಮಾತನಾಡಲಿ: ಚಲುವರಾಯಸ್ವಾಮಿ‌

10

ಸ್ತನ ಕ್ಯಾನ್ಸರ್‌ ಕಾಡಿದ ಚಿತ್ರರಂಗದ ಸುಂದರಿಯರಿವರು.. ಕಾಯಿಲೆಯನ್ನೇ ಗೆದ್ದ ದಿಟ್ಟೆಯರು..

12-thekkatte

ಯಡಾಡಿ ಮತ್ಯಾಡಿ(ಗುಡ್ಡೆಅಂಗಡಿ)ಸರಕಾರಿ ಹಿ.ಪ್ರಾ.ಶಾಲೆ:ನೂತನ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮ

BJP Protest; ರೈತರಿಗೆ ಬರೆ ಹಾಕುವ ಸರಕಾರದ ನೀತಿ ನಿರ್ಧಾರ ಬದಲಿಸಲಿ: ಎನ್.ರವಿಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.