ಗೆಸ್ಟ್ ಹೌಸ್ನಲ್ಲಿ ಕೋವಿಡ್-19 ಲಸಿಕೆ : ಕುಲದೀಪ್ ವಿರುದ್ಧ ತನಿಖೆಗೆ ಆದೇಶ
Team Udayavani, May 19, 2021, 11:25 PM IST
ಕಾನ್ಪುರ: ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ ಗೆಸ್ಟ್ಹೌಸ್ನಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಕಾನ್ಪುರ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.
ಕುಲದೀಪ್ ಯಾದವ್ ಅವರು ಉತ್ತರಪ್ರದೇಶದ ಕಾನ್ಪುರದ ಗೋವಿಂದ ನಗರದಲ್ಲಿರುವ ಜಾಗೇಶ್ವರ್ ಆಸ್ಪತ್ರೆಯಲ್ಲಿ ಕೋವಿಡ್-19 ಮೊದಲ ಡೋಸ್ ತೆಗೆದುಕೊಳ್ಳಲು ನೋಂದಣಿ ಮಾಡಿಸಿ, ಕಾನ್ಪುರ ನಿಗಮ್ ಗೆಸ್ಟ್ಹೌಸ್ನಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರು ಆಸ್ಪತ್ರೆಯವರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಶೀಘ್ರ ವರದಿ ನೀಡುವಂತೆ ಕಾನ್ಪುರ ಜಿಲ್ಲಾಧಿಕಾರಿ ಅಲೋಕ್ ತಿವಾರಿ ಸೂಚಿಸಿದ್ದಾರೆ.
ಮೇ 15ರಂದು ಕುಲದೀಪ್ ಯಾದವ್ ಕೋವಿಡ್ ಲಸಿಕೆ ಪಡೆದಿದ್ದರು. ಇದರ ಚಿತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು ಎಂದು ಹೇಳಿದ್ದರು. ಈ ಫೋಟೋ ವೈರಲ್ ಆದ ಬಳಿಕ ತನಿಖೆಗೆ ಆದೇಶಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.