ಕೋಣಿ; ಮಲಗಿದಲ್ಲೇ ಯುವಕ ಸಾವು
ಶ್ರೀನಿವಾಸ ಅವರು ಎಂಬಿಎ ಪದವೀಧರರಾಗಿದ್ದು, ಕಳೆದ 2 ವರ್ಷಗಳಿಂದ ಮನೆಯಿಂದಲೇ ಕೆಲಸ ಮಾಡಿಕೊಂಡಿದ್ದರು
Team Udayavani, Mar 1, 2022, 9:55 AM IST
ಕುಂದಾಪುರ, ಫೆ. 28: ಯುವಕನೋರ್ವ ಮಲಗಿದಲ್ಲೇ ಸಾವನ್ನಪ್ಪಿದ ಘಟನೆ ಫೆ. 27ರಂದು ಕೋಣಿಯಲ್ಲಿ ಸಂಭವಿಸಿದೆ. ಕೋಣಿಯ ನಿವಾಸಿ ರಘು ಪೂಜಾರಿ ಅವರ ಪುತ್ರ ಶ್ರೀನಿವಾಸ (31) ಸಾವನ್ನಪ್ಪಿದ ಯುವಕ.
ಶ್ರೀನಿವಾಸ ಅವರು ಎಂಬಿಎ ಪದವೀಧರರಾಗಿದ್ದು, ಕಳೆದ 2 ವರ್ಷಗಳಿಂದ ಮನೆಯಿಂದಲೇ ಕೆಲಸ ಮಾಡಿಕೊಂಡಿದ್ದರು. ಫೆ. 27ರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಅಣ್ಣ ಮಂಜುನಾಥ ಅವರು ಮನೆಗೆ ಬಂದಾಗ ಶ್ರೀನಿವಾಸ ಮಲಗಿಕೊಂಡಿದ್ದರು. ಎಬ್ಬಿಸಲು ಹೋದಾಗ ಮಾತನಾಡದೇ ಇದ್ದು, ದೇಹ ತಣ್ಣಗಾಗಿತ್ತು.
ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಶ್ರೀನಿವಾಸ ಅವರು ಯಾವುದೋ ಆರೋಗ್ಯ ಸಮಸ್ಯೆ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಮಂಜುನಾಥ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸೆ ಮರದಿಂದ ಬಿದ್ದು ಸಾವು
ಕುಂದಾಪುರ, ಫೆ. 28: ಕನ್ಯಾನ ಗ್ರಾಮದ ಎಣ್ಣೆಬಾಳು ಕೂಡ್ಲು ಬಳಿಯ ನಿವಾಸಿ ಚಂದ್ರ ಪೂಜಾರಿ (26) ಅವರು ಫೆ.27ರಂದು ಹುಣಸೆ ಮರದಿಂದ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದಾರೆ.
ಫೆ. 27ರ ಬೆಳಗ್ಗೆ 10.15ರ ಸುಮಾರಿಗೆ ಮನೆ ಸಮೀಪದ ಹುಣಸೆ ಮರಕ್ಕೆ ಹುಣಸೆ ಕಾಯಿ ಕೊಯ್ಯಲು ಹತ್ತಿದ್ದು, ಈ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ರಿಕ್ಷಾದಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.