ಕಟಪಾಡಿ: ಬ್ಯಾರಿಕೇಡ್ -ಸರ್ವೀಸ್ ರಸ್ತೆಯ ಗುಂಡಿಗೆ ಮುಕ್ತಿ: ಹೆದ್ದಾರಿ ಇಲಾಖೆಯಿಂದ ಸ್ಪಂದನೆ
Team Udayavani, Apr 25, 2021, 6:00 AM IST
ಕಟಪಾಡಿ: ಮಂಗಳೂರಿನತ್ತ ತೆರಳುವ ಪೂರ್ವ ಪಾರ್ಶ್ವದ ಸರ್ವೀಸ್ ರಸ್ತೆಯಲ್ಲಿ ಕಳೆದ ಸುಮಾರು 8 ತಿಂಗಳಿನಿಂದ ಸೃಷ್ಟಿಯಾಗಿದ್ದ ದೊಡ್ಡ ಗಾತ್ರದ ಗುಂಡಿಯೊಂದನ್ನು ಹೆದ್ದಾರಿ ಇಲಾಖೆಯು ಎ.24ರಂದು ಡಾಮರೀಕರಣ ನಡೆಸಿದ್ದು, ಆ ಮೂಲಕ ಈ ಭಾಗದಲ್ಲಿ ತಲೆದೋರಿದ್ದ ಗುಂಡಿಯನ್ನು ಮುಚ್ಚಿ ಇಲ್ಲಿ ಇಡಲಾಗಿದ್ದ ಬ್ಯಾರಿಕೇಡ್‌ಗೆ ಮುಕ್ತಿಯನ್ನು ಕಲ್ಪಿಸಿದೆ.
ಸದಾ ವಾಹನ ದಟ್ಟಣೆ, ಜನನಿಬಿಡ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ಬಳಿಯಲ್ಲಿನ ಈ ರಸ್ತೆಯು ಬಸ್‌ಗಳ ತಂಗುದಾಣವನ್ನು ಹೊಂದಿದ್ದು, ಸದಾ ವಾಹನ, ಜನದಟ್ಟಣೆಯಿಂದ ಕೂಡಿದ್ದು, ಈ ಗುಂಡಿಯಿಂದಾಗಿ ಸಮಸ್ಯೆ ಸೃಷ್ಟಿಯಾಗುತ್ತಿದೆ. ತ್ಯಾಜ್ಯದ ಗುಂಡಿಯಾಗಿಯೂ ಪರಿವರ್ತನೆ ಗೊಳ್ಳುತ್ತಿದೆ. ಜನ ಸಂಚಾರಕ್ಕೂ ತೊಡಕು ಉಂಟಾಗುತ್ತಿದೆ ಎಂಬ ಸಾರ್ವಜನಿಕರ, ವಾಹನ ಸವಾರರ ದೂರಿನ ಬಗ್ಗೆ ಜನಪರ ಕಾಳಜಿಯ ವರದಿಯನ್ನು “ಉದಯವಾಣಿ ಸುದಿನವು’ ಎ.22ರಂದು
ಪ್ರಕಟಿಸಿತ್ತು.
ಈ ಗುಂಡಿಯನ್ನು ಮುಚ್ಚಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿದ ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣ ಗುತ್ತಿಗೆದಾರರ, ಇಲಾಖಾಧಿಕಾರಿಗಳ ತುರ್ತು ಸ್ಪಂದನೆಗೆ ವಾಹನ ಸವಾರರು, ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.