ಕುಂದಾಪುರ: ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ವಿಶೇಷ ಸಭೆ
Team Udayavani, Apr 17, 2021, 5:00 AM IST
ಕುಂದಾಪುರ: ನಗರದೊಳಗಿನ ಪಾರ್ಕಿಂಗ್ ಸಮಸ್ಯೆ ಕುರಿತು “ಸುದಿನ’ ಪ್ರಕಟಿಸಿದ “ಕುಂದಾಪುರ ನಗರ ಪಾರ್ಕಿಂಗ್ ಅವಸ್ಥೆ: ಸ್ವಾಮಿ ಸ್ವಲ್ಪ ಜಾಗ ಬಿಡಿ’ ಸರಣಿ ವರದಿಗೆ ಆಡಳಿತದಿಂದ ಹಾಗೂ ಓದುಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಸಮಸ್ಯೆ ಇತ್ಯರ್ಥವಾಗಲೇಬೇಕೆಂಬ ಪತ್ರಿಕೆಯ ಕಾಳಜಿಯನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ. ಅಂತೆಯೇ ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ತೆಗೆದುಕೊಂಡು ಇದಕ್ಕೊಂದು ಪರಿಹಾರಕ್ಕಾಗಿ ಶ್ರಮ ಪಡಲಾರಂಭಿಸಿದ್ದಾರೆ. ಸಣ್ಣದಾದ ನಗರ, ಹೆಚ್ಚಾದ ಜನಸಾಂದ್ರತೆ ಯಿಂದಾಗಿ ಎಷ್ಟು ವ್ಯವಸ್ಥೆ ಮಾಡಿದರೂ ಬೇಗನೇ ಕರಗಿಬಿಡುತ್ತದೆ. ಈ ಹಿಂದೆಯೂ ರಸ್ತೆಯ ಒಂದೊಂದು ಬದಿ ಒಂದೊಂದು ದಿನ ವಾಹನ ನಿಲುಗಡೆ ಎಂದು ನಿಶ್ಚಯಿಸಲಾಗಿತ್ತು. ಅದು ಹೆಚ್ಚು ಸಮಯ ಬಾಳಿಕೆ ಬರಲಿಲ್ಲ.
ಬಸ್‌ಗಳ ಪಾರ್ಕಿಂಗ್‌ಗೆ ವ್ಯವಸ್ಥೆ
ಬಸ್ಸುಗಳ ಪಾರ್ಕಿಂಗ್‌ಗೆ ಫೆರ್ರಿರೋಡ್‌ನಲ್ಲಿ ಪುರಸಭೆ ವತಿಯಿಂದ ವ್ಯವಸ್ಥೆ ಮಾಡಿಕೊಡ ಲಾಗಿದೆ. ಶಾಸ್ತ್ರಿ ಪಾರ್ಕ್ ಬಳಿ ರಿಕ್ಷಾ ತಂಗುದಾಣ, ದ್ವಿಚಕ್ರ ವಾಹನ ನಿಲುಗಡೆ, ಕೋರ್ಟ್ ಎದುರು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದೆ. ಸುದಿನದಲ್ಲಿ ಪಾರ್ಕಿಂಗ್ ಸರಣಿ ಆರಂಭವಾದ ಬಳಿಕ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಜಿ.ಕೆ. ಗಿರೀಶ್ ಅವರು ವಿಷಯ ಪ್ರಸ್ತಾವನೆ ಮಾಡಿದ್ದು ಅದಕ್ಕೆ ಸದಸ್ಯರಾದ ಮೋಹನದಾಸ ಶೆಣೈ, ಚಂದ್ರಶೇಖರ ಖಾರ್ವಿ, ಸಂತೋಷ್ ಕುಮಾರ್ ಶೆಟ್ಟಿ, ಪ್ರಭಾಕರ್ ವಿ., ಪ್ರಭಾವತಿ ಶೆಟ್ಟಿ, ಶ್ರೀಧರ ಶೇರೆಗಾರ್, ದೇವಕಿ ಪಿ. ಸಣ್ಣಯ್ಯ, ಅಶ#³ಕ್ ಕೋಡಿ ಮೊದಲಾದವರು ಮಾತನಾಡಿದ್ದರು. ನಗರದ ಒಳಗೆ ವಾಹನ ದಟ್ಟಣೆ ಹೆಚ್ಚಾಗಿದೆ. ಪಾರ್ಕಿಂಗ್‌ಗೆ ಜಾಗ ಇಲ್ಲ. ಅಂಗಡಿ ಮಾಲಕರು ಇದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
ಅಂಗಡಿಯವರ ಮೇಲೆ ಕ್ರಮ ಯಾಕಿಲ್ಲ?
ಅಂಗಡಿಯವರು ಸೆಕ್ಯುರಿಟಿಯವರನ್ನಿಟ್ಟು ಪುರಸಭೆ ಜಾಗದಲ್ಲೂ ಯಾವುದೇ ವಾಹನ ಗಳನ್ನು ನಿಲ್ಲಿಸಲು ಬಿಡುತ್ತಿಲ್ಲ. ಇದ್ದಬದ್ದಲ್ಲೆಲ್ಲ ನೋ ಪಾರ್ಕಿಂಗ್ ಬೋರ್ಡ್ ಹಾಕಲಾಗಿದೆ. ಕಟ್ಟಡ ಪರವಾನಿಗೆ ಮಂಜೂರಾತಿ ಸಂದರ್ಭ ಪಾರ್ಕಿಂಗ್ ಜಾಗ ತೋರಿಸಿ ಅನಂತರ ಅದರಲ್ಲೂ ಅಂಗಡಿ ಮಾಡಿದವರ ಮೇಲೆ ಕ್ರಮ ಯಾಕಿಲ್ಲ? ಎಂದು ಸದಸ್ಯರು ಪ್ರಶ್ನಿಸಿದ್ದರು. ಇದೀಗ ಸರಣಿಯ ಫಲವಾಗಿ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆರಂಭವಾಗಿದೆ.
ಜಾಗ ಇದ್ದಲ್ಲಿ ವ್ಯವಸ್ಥೆ
ಸಣ್ಣನಗರ, ಹೆಚ್ಚು ಜನ ಹಾಗಾಗಿ ವಾಹನ ಇಡಲು ಸ್ಥಳದ ಅಭಾವ. ಪಾರ್ಕಿಂಗ್‌ಗೆ ಜಾಗ ಗುರುತಿಸುವ ಪ್ರಕ್ರಿಯೆ ನಡೆಸಲಾಗುವುದು. ಸಾಧ್ಯವಿರುವಲ್ಲಿ ಇಂಟರ್‌ಲಾಕ್ ಅಳವಡಿಸಿ ವ್ಯವಸ್ಥೆ ಮಾಡಲಾಗುವುದು. ಸದಸ್ಯರ ಬೇಡಿಕೆ ಮೇರೆಗೆ ವಿಶೇಷ ಸಭೆ ಕರೆದು ಅದರಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಣೆ ಕುರಿತು ಚರ್ಚಿಸಲಾಗುವುದು.
– ವೀಣಾ ಭಾಸ್ಕರ ಮೆಂಡನ್, ಅಧ್ಯಕ್ಷೆ, ಪುರಸಭೆ
ಬಹುಮಹಡಿ ಕಟ್ಟಡ
ಪಾರ್ಕಿಂಗ್‌ಗೆ ದತ್ತಾತ್ರೇಯ ದೇವಸ್ಥಾನ ಬಳಿ ಬಹುಮಹಡಿ ಕಟ್ಟಡ ಕಟ್ಟಿಸುವ ಕುರಿತು, ಜಾಗ ಖರೀದಿಸುವ ಕುರಿತು ವಿಶೇಷ ಸಭೆಯಲ್ಲಿ ಚರ್ಚಿಸಲಾಗುವುದು. ಹಳೆನಗರವಾದ ಕಾರಣ ಜಾಗದ ಕೊರತೆಯಿದೆ. ರಾಮಮಂದಿರ ರಸ್ತೆಯಿಂದ ಪನೀರ್ ಜುವೆಲರ್ಸ್‌ವರೆಗೆ ವಾಹನ ನಿಲ್ಲುವಂತೆ ಇಂಟರ್‌ಲಾಕ್ ಹಾಕಲಾಗುವುದು. ಈಗಾಗಲೇ ಕೆಲವು ಕಡೆ ಪಾರ್ಕಿಂಗ್‌ಗೆ ಜಾಗ ನೀಡಲಾಗಿದೆ. ಎಲ್ಲೆಲ್ಲಿ ಪಾರ್ಕಿಂಗ್ ಜಾಗ ಎಂದು ಪೊಲೀಸರ ಸಹಕಾರದಿಂದ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. -ಗೋಪಾಲಕೃಷ್ಣ ಶೆಟ್ಟಿ ಮುಖ್ಯಾಧಿಕಾರಿ, ಪುರಸಭೆ
ಸಾರ್ವಜನಿಕ ಸಭೆ
ಹೆದ್ದಾರಿ ಕಾಮಗಾರಿ ಮುಗಿದು ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ಕೂಡಲೇ ಸಾರ್ವಜನಿಕ ಸಭೆ ಕರೆಯಲಾಗುವುದು. ಫ್ಲೈಓವರ್ ಕೆಳಗೂ ವಾಹನ ನಿಲ್ಲಿಸಲು ಅನುವು ಮಾಡಿಕೊಡಲಾಗುವುದು. ಸಾರ್ವಜನಿಕರ ಸಲಹೆ, ಸೂಚನೆ ಮೇರೆಗೆ ಇನ್ನಷ್ಟು ಕಡೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಎಲ್ಲೆಲ್ಲಿ ಸಮಸ್ಯೆ ಇದೆ ಎಂದು ತಿಳಿದುಕೊಳ್ಳಲಾಗುವುದು. ನೋ ಪಾರ್ಕಿಂಗ್ ತಾಣ ಗುರುತಿಸಿ ಡಿಸಿ ಮೂಲಕ ಅಧಿಸೂಚನೆ ಹೊರಡಿಸಿ ಫಲಕ ಅಳವಡಿಸಲಾಗುವುದು.
-ಕೆ. ಶ್ರೀಕಾಂತ್, ಡಿವೈಎಸ್‌ಪಿ, ಕುಂದಾಪುರ ಉಪವಿಭಾಗ
ಮಾರ್ಕಿಂಗ್‌ಗೆ ಬರೆಯಲಾಗಿದೆ
ರಸ್ತೆ ಬದಿ ಬಿಳಿಗೆರೆಯ ಒಳಗೆ ವಾಹನ ನಿಲ್ಲಿಸಲು ಅನುವಾಗುವಂತೆ ಬಿಳಿ ಮಾರ್ಕಿಂಗ್ ಮಾಡಿಕೊಡಲು ಪುರಸಭೆಗೆ ಬರೆಯಲಾಗಿದೆ. ಬಸ್ ಪಾರ್ಕಿಂಗ್‌ಗೆ ಪತ್ರ ಬರೆಯಲಾಗಿದ್ದು ಪುರಸಭೆ ಜಾಗ ನೀಡಿ ಅಲ್ಲಿ ಬಸ್‌ಗಳು ನಿಲ್ಲುತ್ತಿವೆ. ಇತರೆಡೆ ಇದ್ದ ಜಾಗದಲ್ಲಿಯೇ ಆಯ್ಕೆ ಮಾಡಿ ಗುರುತಿಸಿ ಮುಂದಿನ ಪ್ರಕ್ರಿಯೆ ನಡೆಸಲಾಗುವುದು. ಝೀಬ್ರಾ ಕ್ರಾಸಿಂಗ್ ಇತ್ಯಾದಿಗೆ ಪುರಸಭೆಗೆ ಬರೆಯಲಾಗಿದೆ.
-ಸುದರ್ಶನ್, ಎಸ್‌ಐ, ಸಂಚಾರ ಠಾಣೆ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.