ಕುಣಿಗಲ್ : ಕ್ಷುಲಕ ಕಾರಣಕ್ಕೆ ಯುವಕರ ನಡುವೆ ವಾಗ್ವಾದ : ಚಾಕು ಇರಿತ, ಓರ್ವನ ಬಂಧನ
Team Udayavani, Jun 21, 2022, 10:07 PM IST
ಕುಣಿಗಲ್ : ಕ್ಷುಲಕ ಕಾರಣಕ್ಕೆ ಯುವಕರ ನಡುವೆ ವಾಗ್ವಾದ ನಡೆದು, ಯುವಕನ ಹೊಟ್ಟೆಗೆ ಚಾಕುವಿನಿಂದ ಇರಿದ ಘಟನೆ ಪಟ್ಟಣದ ನೇಗೆರರ ಬೀದಿಯಲ್ಲಿ ನಡೆದಿದ್ದು. ಘಟನೆಗೆ ಸಂಬಂಧಿಸಿದಂತೆ ಆರೋಪಿ ಓರ್ವನ್ನು ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ತಿಗಳರ ಬೀದಿ ವಾಸಿ ಗಜೇಂದ್ರಕುಮಾರ್ ಗಾಯಗೊಂಡ ಯುವಕ.
ಘಟನೆ ವಿವರ : ಗಜೇಂದ್ರಕುಮಾರ್ ಕಳೆದ ರಾತ್ರಿ ತನ್ನ ಸ್ನೇಹಿತನನ್ನು ನೋಡಲೆಂದು ನೆಗೇರರ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರ ಬೇಕಾದರೆ ಬೈಕ್ನಲ್ಲಿ ಎದುರಿಗೆ ಬಂದ ಜುನಾಯಿದ್ ಮತ್ತು ಆತನ ಸ್ನೇಹಿತರು ಗಜೇಂದ್ರಕುಮಾರ್ನ ಮೇಲೆ ಬೈಕ್ ಬಿಡುವ ರೀತಿಯಲ್ಲಿ ಬಂದಿದ್ದಾರೆ ಎನ್ನಲಾಗಿದ್ದು ಈ ನಡುವೆ ಜುನಾಯಿದ್ ಹಾಗೂ ಗಜೇಂದ್ರಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದ್ದು ಬಳಿಕ ಮೂರು ಮಂದಿ ಆರೋಪಿಗಳು ಬೈಕ್ನಲ್ಲಿ ತೆರಳಿದರು ಗಜೇಂದ್ರಕುಮಾರ್ ಮನೆಗೆ ಬಂದು ಊಟ ಮಾಡಿ ಮನೆಯಿಂದ ಹೊರಗೆ ಬಂದ ವೇಳೆಯಲ್ಲಿ ಮತ್ತೆ ಅಲ್ಲಿಗೆ ಬಂದ ಜುನಾಯಿತ್ ಹಾಗೂ ಆತನ ಇಬ್ಬರು ಸಹಚರರು ಮತ್ತೆ ಗಜೇಂದ್ರಕುಮಾರನೊಂದಿಗೆ ವಾಗ್ವಾದಕ್ಕೆ ಇಳಿದು ಬಳಿಕ ಗಜೇಂದ್ರಕುಮಾರನ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯಗೊಂಡ ಗಜೇಂದ್ರಕುಮಾರ್ ನನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆ ನಂತರ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮೆಜಸ್ಟಿಕ್ ಹತ್ತಿರವಿರುವ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ
ಪ್ರಕರಣ ದಾಖಲಿಸಿಕೊಂಡ ಪಟ್ಟಣದ ಪೊಲೀಸರು ಓರ್ವ ಆರೋಪಿಯನ್ನು ಬಂದಿಸಿ, ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
Renukaswamy Case: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Jogging: ಬೆಳಗಾವಿಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೈಟ್ ರನ್ನಿಂಗ್, ಜಾಗಿಂಗ್
Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ
MUST WATCH
ಹೊಸ ಸೇರ್ಪಡೆ
Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
Beguru Colony Movie: ಟೀಸರ್ನಲ್ಲಿ ಬೇಗೂರು ಕಾಲೋನಿ
ಸಾಕಿದ ನಾಯಿಗಾಗಿ ಬಾಯ್ ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಪರ್ಧಿ
Udupi: ಅಂಬಲಪಾಡಿ ಓವರ್ಪಾಸ್ ಕಾಮಗಾರಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.