ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಪ್ರಕರಣ : ಕುಷ್ಟಗಿ ಬಂದ್, ಪ್ರಯಾಣಿಕರ ಪರದಾಟ
Team Udayavani, Feb 2, 2022, 11:03 AM IST
ಕುಷ್ಟಗಿ: ರಾಯಚೂರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವರ್ತನೆ ಪ್ರಕರಣ ಖಂಡಿಸಿ ಮಂಗಳವಾರ ಕುಷ್ಟಗಿ ಬಂದ್ ಇಂದು ಬೆಳಗ್ಗಿನಿಂದಲೇ ಬಿಗುವಿನ ವಾತಾವರಣ.
ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಕುಷ್ಟಗಿ ಬಂದ್ ಗೆ ಎರಡ್ಮೂರು ದಿನಗಳ ಮೊದಲೇ ಘೋಷಣೆ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು ಜನ ಸಂಚಾರ ವಿರಳವಾಗಿದ್ದು, ಬೆಳಗ್ಗೆ 6 ಗಂಟೆಯಿಂದ 7 ರವರೆಗೆ ಆಯಾ ಮಾರ್ಗದ ಬಸ್ ಗಳು ನಿಲ್ದಾಣದಿಂದ ನಿರ್ಗಮಿಸಿದವು. ಹೊರಗಿನಿಂದ ಬರುವ ಬಸ್ಸುಗಳು ಪಟ್ಟಣ ಪ್ರವೇಶಿಸದೇ ಹೊರವಲಯದಲ್ಲಿ ಪ್ರಯಾಣಿಕರನ್ನು ಇಳಿಸಿದ್ದರಿಂದ ಪ್ರಯಾಣಿಕರು ಲಗೇಜ್ ಹೊತ್ತು ಪಟ್ಟಣದೆಡೆಗೆ ಬರಲು ಪರದಾಡಿದರು. ಮತ್ತೊಂದು ಊರಿಗೆ ಹೋಗುವ ಪ್ರಯಾಣಿಕರಿಗೆ ಬಸ್ ಸಿಗದೇ ಚಡಪಡಿಸಿದರು.
ಬಸ್ ಡಿಪೋದಲ್ಲಿ ಬಹುತೇಕ ಬಸ್ಸುಗಳು ನಿಲ್ದಾಣ ಬಿಟ್ಟು ಹೊರಗೆ ಬರಲಿಲ್ಲ. ಹೀಗಾಗಿ ಬಸ್ ನಿಲ್ದಾಣ ಭಣಗುಡುತ್ತಿತ್ತು. ಇನ್ನೂ ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಸಂಚಾರ ವ್ಯತ್ಯಯದಿಂದಾಗಿ ಅಸ್ತವ್ಯಸ್ತಕ್ಕೆ ಕಾರಣವಾಯಿತು.
ಇದನ್ನೂ ಓದಿ : ನೀಟ್ ಪರೀಕ್ಷೆ: ಪ್ರಥಮ ರ್ಯಾಂಕ್ ಗಳಿಸಿದ ರನ್ನಬೆಳಗಲಿಯ ಚಿದಾನಂದ ಕಲ್ಲಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.