La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?


Team Udayavani, Oct 18, 2024, 6:35 PM IST

3

ಮೊದಲೆಲ್ಲಾ ಒಂದು ಪದ್ದತಿಯಿತ್ತು. ಊರಲ್ಲಿ ಯಾರಾದರು ಮಾಡಬಾರದ ಅಪರಾಧವನ್ನು ಮಾಡಿದರೆ ಒಂದಾ ಅವರ ತಲೆ ಬೋಳಿಸಿ ಊರಲ್ಲಿ ಮೆರವಣಿಗೆ ನಡೆಸುತ್ತಿದ್ದರು, ಇಲ್ಲಾ ಅವರನ್ನು ಕತ್ತೆಯ ಮೇಲೆ ಕೂರಿಸಿ ಮೊಟ್ಟೆಯಿಂದ ಹೊಡೆಯುತ್ತಿದ್ದರು. ಅಂತಹ ಅವಮಾನ ನಡೆದರೆ ಆ ವ್ಯಕ್ತಿಗೆ ಬದುಕುವುದೇ ಬೇಡವೆನ್ನುವಷ್ಟು ಜೀವನದಲ್ಲಿ ಜಿಗುಪ್ಸೆ ಮೂಡುವುದು ಸಹಜ. ಒಟ್ಟಾರೆ ಟೊಮ್ಯಾಟೋ ಕೂಡಾ ಈ ಅವಮಾನ ಮಾಡೋ ಕಾರ್ಯದಲ್ಲಿ ಒಂದು ಪಾತ್ರ ವಹಿಸುವುದಂತೂ ಸುಳ್ಳಲ್ಲ. ಆದರೆ ಇಲ್ಲೊಂದು ಕಡೆ ಟೊಮೆಟೋ ವನ್ನು ಒಬ್ಬರ ಮೇಲೆ ಮತ್ತೊಬ್ಬರು ಎಸೆಯುವುದನ್ನೇ ಹಬ್ಬವಾಗಿ ಆಚರಿಸುತ್ತಾರೆ. ಇಲ್ಲಿ ಟೊಮೆಟೋ ಹೊಡೆಸಿಕೊಳ್ಳುವುದು ಅಪರಾಧಕ್ಕಲ್ಲಾ, ಇದು ಅವಮಾನವೂ ಅಲ್ಲ. ಹಾಗಾದರೆ ಏನಿದು ಟೊಮೆಟೋ ಎಸೆಯೋ ಹಬ್ಬ?, ಆಚರಿಸುವುದಾದರೂ ಎಲ್ಲಿ? ಎಂಬೆಲ್ಲಾ ಪ್ರಶ್ನೆಗೆ ವಿವರಣೆ ಇಲ್ಲಿದೆ.

ವಯಸ್ಸಿನ ಭೇದವಿಲ್ಲದೆ ಸಿಕ್ಕಸಿಕ್ಕವರಿಗೆ ಮೈಮೇಲೆಲ್ಲಾ ಟೊಮೆಟೋಗಳನ್ನು ಎಸೆಯುತ್ತಾ ನಗುನಗುತ್ತಲ್ಲೇ ಟೊಮೆಟೋಗಳಿಂದ ಹೊಡೆಸಿಕೊಳ್ಳುತ್ತಾ ಆಟವಾಡೋ ಈ ಟೊಮೆಟೋ ಹಬ್ಬವನ್ನು ಲಾ ಟೊಮೆಟಿನಾ (La Tomatina) ಎಂದು ಕರೆಯುತ್ತಾರೆ. ಈ ಹಬ್ಬವನ್ನು ವಿಶ್ವದ ಸಾರ್ವಭೌಮ ರಾಷ್ಟ್ರಗಳಲ್ಲೊಂದು ಸ್ಪೇನ್‌ (Spain) ನ ಬುನೊಲ್‌ ಎಂಬ ಪಟ್ಟಣದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಪ್ರತೀ ವರ್ಷ ಆಗಸ್ಟ್‌ ತಿಂಗಳ ಕೊನೆಯ ಬುಧವಾರದಲ್ಲಿ ಆಚರಿಸಲಾಗುತ್ತದೆ. ಹಲವಾರು ಊರುಗಳಿಂದ, ದೇಶಗಳಿಂದ ಸುಮಾರು 20,000-30,000 ದಷ್ಟು ಪ್ರವಾಸಿಗರು ಈ ಹಬ್ಬಕ್ಕೆಂದೇ ಆಗಮಿಸುತ್ತಾರೆ.

1945ರಲ್ಲಿ ಈ ಪಟ್ಟಣದಲ್ಲಿ ಮೆರವಣಿಗೆಯ ಸಂದರ್ಭ ಸ್ಥಳೀಯ ನಿಯಮಗಳು ಹಾಗೂ ಅತಿಯಾದ ಸಾಮಾಜಿಕ ಸಾಂಪ್ರದಾಯಗಳಿಗೆ ಬೇಸತ್ತ ಅಲ್ಲಿನ ಯುವಕರು ಪಟ್ಟಣದ ಅಧಿಕಾರಿಗಳ ವಿರುದ್ಧ ಪ್ರತಿಭಟನೆಯನ್ನು ನಡೆಸುವ ಸಲುವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದವರ ಮೇಲೆ ಸಮೀಪವಿರುವ ತರಕಾರಿ ಅಂಗಡಿಯಲ್ಲಿ ಮಾರಾಟಕ್ಕೆಂದು ಇರಿಸಲಾದ ಟೊಮೆಟೋ ಹಣ್ಣುಗಳನ್ನು ಎಸೆದಿದ್ದರು. ಈ ಟೊಮೆಟೋ ಎಸೆತವನ್ನೇ ಆಟವಾಗಿಸಿಕೊಂಡು, ದೊಡ್ಡ ಹಬ್ಬವನ್ನಾಗಿಸಿ ಆಚರಿಸಿಕೊಂಡು ಬರುತ್ತಿದ್ದಾರೆ ಸ್ಪೇನ್‌ ನ ಜನರು. ಅಲ್ಲಿನ ಯುವಕರು ಟೊಮೆಟೋದಲ್ಲಿ ಆಡಿದ ಜಗಳವು ಇಂದು ದೊಡ್ಡ ಹಬ್ಬವಾಗಿ ನಮ್ಮ ನಡುವೆ ಪ್ರಸಿದ್ಧಿಯನ್ನು ಪಡೆಯುತ್ತಿದೆ.

ಟೊಮೆಟೋಗಳು ವ್ಯರ್ಥವಾಗುವ ಕಾರಣದಿಂದ ಹಾಗೂ ಸಾಮಾಜಿಕ ಹಿತಚಿಂತನೆಯಿಂದಾಗಿ 1950ರಲ್ಲಿ ಈ ಲಾ ಟೊಮಾಟಿನಾ ಹಬ್ಬವನ್ನು ನಿಷೇಧಿಸಲಾಗಿತ್ತು. ಆದರೆ 1980ರ ದಶಕದಲ್ಲಿ ಅಧಿಕೃತವಾಗಿ ನಿಷೇಧವನ್ನು ಹಿಂತೆಗೆಯುವವರೆಗೆ ಸ್ಥಳೀಯರು ರಹಸ್ಯವಾಗಿಯೇ ಟೊಮೆಟೋ ಹಬ್ಬವನ್ನು ಆಚರಿಸುತ್ತಿದ್ದರು.

ಹಬ್ಬವು ಬೆಳಗ್ಗಿನ ತಿಂಡಿಗೆ ಟೌನ್‌ ಹಾಲ್‌ ನಲ್ಲಿ ಆಯೋಜಿಸಲಾದ ಪೇಸ್ಟ್ರೀಸ್‌ ಹಾಗು ರೋಲ್ಸ್‌ ಗಳನ್ನು ಹಂಚುವ ಮೂಲಕ ಪ್ರಾರಂಭವಾಗುತ್ತದೆ. ನಂತರ ಪಟ್ಟಣದಲ್ಲಿ ಒಂದು ಕಂಬದ ತುದಿಯಲ್ಲಿ ಮಾಂಸದ ತುಂಡನ್ನು (ham leg) ಇಟ್ಟು ಕಂಬ ಪೂರ್ತಿ ಗ್ರೀಸ್‌ ಹಾಕುತ್ತಾರೆ. ಜನರು ಮಾಂಸದ ತುಂಡನ್ನು ಪಡೆಯುವ ಸಲುವಾಗಿ ಕಂಬವನ್ನು ಹತ್ತಲು ಪ್ರಯತ್ನಿಸುತ್ತಾರೆ. ಬೆಳಗ್ಗೆ 11 ಗಂಟೆಯ ಸಮಯಕ್ಕೆ ಪ್ರಾರಂಭವಾಗುವ ಟೊಮೆಟೋ ಹಬ್ಬವನ್ನು ಒಂದು ಗಂಟೆಯಷ್ಟು ಹೊತ್ತು ಆಚರಿಸಲಾಗುತ್ತದೆ.

ಸುಮಾರು 1 ಗಂಟೆಯಷ್ಟು ಸಮಯ ಆಚರಿಲಾಗುವ ಈ ಹಬ್ಬಕ್ಕೆಂದೇ ಬರೋಬ್ಬರಿ 150000 ಕೆಜಿ ಗಳಷ್ಟು ಟೊಮೇಟೋವನ್ನು ಬಳಸಲಾಗುತ್ತದೆ. ಸುಮಾರು 6 ಟ್ರಕ್‌ ಗಳಲ್ಲಿ ತರುವ ಟೊಮೆಟೋಗಳನ್ನು ಈ ಆಚರಣೆ ನಡೆಯುವ ದಾರಿಯುದ್ದಕ್ಕೂ ಸಮನಾಗಿ ವಿತರಿಸಲಾಗುತ್ತದೆ. ಬೇಕಾದರೆ ಭಾಗವಹಿಸುವವರು ತೆಗೆದುಕೊಂಡು ಹೋಗಬಹುದು. ಆಟವಾಡುವಾಗ ಅವರವರ ಸುರಕ್ಷತೆಯ ಸಲುವಾಗಿ ಭಾಗವಹಿಸುವವರು ಕನ್ನಡಕವನ್ನು, ತಲೆಗೆ ಬಟ್ಟೆಯನ್ನೋ ಅಥವಾ ಇತರ ಕವರ್‌ ಗಳನ್ನು ಬಳಸಬೇಕಗುತ್ತದೆ.

ಆಚರಣೆಯ ಮೊದಲೂ ಮತ್ತು ಆಚರಣೆಯ ಬಳಿಕವೂ ಆಹಾರ ಹಾಡು, ಕುಣಿತ ಇದ್ದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪರೇಡ್‌, ಜಾನಪದ ಹಾಡು, ಪಟಾಕಿಗಳನ್ನು ಉರಿಸಿ ಸಂಭ್ರಮಿಸಲಾಗುವುದು.

ವಿಶೇಷವೆಂದರೆ ಎಲ್ಲ ಸಂಭ್ರಮ ಆಚರಣೆ ಮುಗಿದ ಬಳಿಕ ಅಲ್ಲಿನ ಸ್ಥಳೀಯರು ಹಾಗೂ ಫೈರ್ ಫೈಟರ್ಸ್ ಸೇರಿಕೊಂಡು ಈ ಪ್ರದೇಶವನ್ನು ಶುಚಿಗೊಳಿಸುತ್ತಾರೆ.

-ಪೂರ್ಣಶ್ರೀ. ಕೆ

ಟಾಪ್ ನ್ಯೂಸ್

1-JMM

Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?

1-dog

Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Tulu theater: ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

1-yekanath

Maharashtra Poll; ”ತ್ಯಾಗ” ಮಾಡಲು ಸಿದ್ಧರಾಗಬೇಕು.. ಶಿಂಧೆಗೆ ಬಿಜೆಪಿ ಸ್ಪಷ್ಟ ಸಂದೇಶ!

5-lips-4

Beauty Tips: ನೈಸರ್ಗಿಕವಾಗಿ ಗುಲಾಬಿ ಬಣ್ಣದ ತುಟಿ ನಿಮ್ಮದಾಗಲು ಈ ಟಿಪ್ಸ್‌ ಬಳಸಿ

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

1

2025ಕ್ಕೆ ಬಾಲಿವುಡ್‌ಗೆ ಸೀಕ್ವೆಲ್‌ಗಳೇ ಜೀವಾಳ.. ಇಲ್ಲಿದೆ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-JMM

Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ

Mangaluru: ಡಿಜಿಟಲ್‌ ಸ್ವರೂಪದ ತುಳು ಮಕ್ಕಳಿಗೆ ಆಪ್ತ: ತಾರಾನಾಥ್‌ ಗಟ್ಟಿ ಕಾಪಿಕಾಡ್‌

Mangaluru: ಡಿಜಿಟಲ್‌ ಸ್ವರೂಪದ ತುಳು ಮಕ್ಕಳಿಗೆ ಆಪ್ತ: ತಾರಾನಾಥ್‌ ಗಟ್ಟಿ ಕಾಪಿಕಾಡ್‌

fraudd

Kasaragod: ಉದ್ಯೋಗ ಭರವಸೆ ನೀಡಿ ವಂಚನೆ; ಸಚಿತಾ ರೈ

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

Udupi: ವಂಚನೆ ಪ್ರಕರಣ: ಅ.21ಕ್ಕೆ ಜಾಮೀನು ಅರ್ಜಿ ವಿಚಾರಣೆ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.