Case:ಅರಗಿನ ಅರಮನೆ ಸ್ಥಳ ಹಿಂದೂಗಳಿಗೆ ಸೇರಿದ್ದು; 53 ವರ್ಷಗಳ ಕಾನೂನು ಸಮರ, ಏನಿದು ವಿವಾದ?

ಕೋರ್ಟ್‌ ಆದೇಶದ ಬೆನ್ನಲ್ಲೇ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ

Team Udayavani, Feb 6, 2024, 11:44 AM IST

Case:ಅರಗಿನ ಅರಮನೆ ಸ್ಥಳ ಹಿಂದೂಗಳಿಗೆ ಸೇರಿದ್ದು; 53 ವರ್ಷಗಳ ಕಾನೂನು ಸಮರ, ಏನಿದು ವಿವಾದ?

ಲಕ್ನೋ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ವಾರಾಣಸಿ ಕೋರ್ಟ್‌ ಅನುಮತಿ ನೀಡಿದ್ದ ಬೆನ್ನಲ್ಲೇ ಉತ್ತರಪ್ರದೇಶ ಬರ್ನಾವಾದಲ್ಲಿರುವ ಬದ್ರುದ್ದೀನ್‌ ಗೋರಿ ಸ್ಥಳ ಮಹಾಭಾರತ ಕಾಲದ ಲಕ್ಷಗೃಹ (ಅರಗಿನ ಅರಮನೆ) ಪ್ರದೇಶವಾಗಿದೆ ಎಂಬ ಹಿಂದೂ ಅರ್ಜಿದಾರರ ವಾದಕ್ಕೆ ಬಾಗ್‌ ಪತ್‌ ಕೋರ್ಟ್‌ ಮನ್ನಣೆ ನೀಡಿದ್ದು, ಇದರೊಂದಿಗೆ ಕಳೆದ 53 ವರ್ಷಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಇದನ್ನೂ ಓದಿ:

ಪುರಾತನ ದಿಬ್ಬವನ್ನು ಲಕ್ಷಗೃಹ(ಅರಗಿನ ಅರಮನೆ ಸ್ಥಳ) ಎಂಬ ಕಕ್ಷಿದಾರ ಕೃಷ್ಣದತ್‌ ಜಿ ಮಹಾರಾಜ್‌ ಅವರ ವಾದವನ್ನು ಬಾಗ್‌ ಪತ್‌ ಕೋರ್ಟ್‌ ಪುರಸ್ಕರಿಸಿದ್ದು, ಆ ಸ್ಥಳ ದರ್ಗಾ ಮತ್ತು ಸ್ಮಶಾನ ಎಂಬ ಮುಸ್ಲಿಂ ಕಕ್ಷಿದಾರರ ವಾದವನ್ನು ತಳ್ಳಿಹಾಕಿದೆ.

ಲಕ್ಷ ಗೃಹ ಹಿಂದೂಗಳಿಗೆ ಸೇರಿದ್ದು ಎಂಬ ಕೋರ್ಟ್‌ ಆದೇಶದ ಬೆನ್ನಲ್ಲೇ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

ಏನಿದು ಲಕ್ಷಗೃಹ ವಿವಾದ?

ಮಹಾಭಾರತ ಕಾಲದಲ್ಲಿ ಕೌರವರು ನಿರ್ಮಿಸಿದ್ದ ಐಶಾರಾಮಿ ಅರಗಿನ ಅರಮನೆಯೇ ಲಕ್ಷಗೃಹ. ಅರಗು ತಕ್ಷಣವೇ ಬೆಂಕಿ ಹಿಡಿಯಬಲ್ಲ ವಸ್ತುವಾಗಿದೆ. ಮಹಾಭಾರತದ ಕಥೆಯ ಪ್ರಕಾರ, ರಾಜಕುಮಾರ ದುರ್ಯೋಧನ ತನ್ನ ಸೋದರ ಸಂಬಂಧಿಗಳಾದ ಪಾಂಡವರನ್ನು ಕೊಲ್ಲಲು ಯೋಜಿಸಿ ಈ ಅರಮನೆಯನ್ನು ನಿರ್ಮಿಸಿದ್ದ. ಅರಗನ್ನು ಬಳಸಿ ಅರಮನೆ ನಿರ್ಮಿಸಲು ವಾಸ್ತುಶಿಲ್ಪಿ ಪುರೋಚನಿಗೆ ಸೂಚಿಸಲಾಗಿತ್ತು. ಪೂರ್ವ ಯೋಜನೆಯಂತೆ ಪಾಂಡವರು ಅರಗಿನ ಅರಮನೆಯಲ್ಲಿ ವಾಸವಾಗಿರುವಂತೆ ಕೌರವ ಆಹ್ವಾನ ನೀಡಿದ್ದ. ಅರಮನೆಯಲ್ಲಿ ಪಾಂಡವರು ವಾಸವಾಗಿದ್ದ ವೇಳೆ ರಹಸ್ಯವಾಗಿ ಬೆಂಕಿ ಹಚ್ಚಿ ಕೊಲ್ಲುವುದು ದುರ್ಯೋಧನನ ಸಂಚು ಹೂಡಿದ್ದ. ಆದರೆ ವಿದುರನ ಉಪಾಯದಿಂದ ಪಾಂಡವರು ಸುರಂಗ ಕೊರೆದು ಪ್ರಾಣಾಪಾಯದಿಂದ ಪಾರಾಗಿದ್ದರು.

1970ರ ಮಾರ್ಚ್‌ 31ರಂದು ಬರ್ನಾವಾ ಗ್ರಾಮದ ಮುಕೀಂ ಖಾನ್‌ ಎಂಬವರು ಈ ದಿಬ್ಬ ಶೇಖ್‌ ಬದ್ರುದ್ದೀನ್‌ ಅವರ ಗೋರಿಯಾಗಿದ್ದು, ಇದು ಸ್ಮಶಾನ ಸ್ಥಳವಾಗಿದೆ ಎಂದು ಮೀರತ್‌ ಜಿಲ್ಲಾ ಕೋರ್ಟ್‌ ನಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಕೃಷ್ಣದತ್ತ ಜೀ ಮಹಾರಾಜ್‌ ಅವರು ಇದು ಸ್ಮಶಾನ ಜಾಗವಲ್ಲ, ಪುರಾತನ ಅರಗಿನ ಅರಮನೆ ಇದ್ದ ಸ್ಥಳವಾಗಿದ್ದು, ಹಿಂದೂಗಳ ಯಾತ್ರಾ ಪ್ರದೇಶವಾಗಿದೆ ಎಂದು ಪ್ರತಿವಾದ ಮಂಡಿಸಿದ್ದರು.

ಹಿಂದೂ ಮತ್ತು ಮುಸ್ಲಿಂ ಕಡೆಯ ವಾದ, ಪ್ರತಿವಾದ ಆಲಿಸಿದ ಕೋರ್ಟ್‌ ನ ಜಡ್ಜ್‌ ಶಿವಂ ದ್ವಿವೇದಿ ಅವರು ಸಾಕ್ಷ್ಯಗಳ ಆಧಾರದ ಮೇಲೆ ಬರ್ನಾವಾದಲ್ಲಿರುವ ದಿಬ್ಬ ಲಕ್ಷಗೃಹ ಎಂದು ತೀರ್ಪು ನೀಡಿದ್ದರು.

ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಕೋರ್ಟ್‌, 108 ಎಕರೆ ಪ್ರದೇಶ ಸ್ಮಶಾನವಾಗಿತ್ತು ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂಬುದನ್ನು ತಿಳಿಸಿ, ಮುಸ್ಲಿಂ ಕಕ್ಷಿದಾರರ ವಾದವನ್ನು ತಳ್ಳಿಹಾಕಿದೆ. ಮತ್ತೊಂದೆಡೆ ಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವುದಾಗಿ ಮುಸ್ಲಿಂ ಕಕ್ಷಿದಾರರ ಪರ ವಕೀಲ ಶಾಹೀದ್‌ ಖಾನ್‌ ತಿಳಿಸಿದ್ದಾರೆ.

ಎಎಸ್‌ ಐ ದಾಖಲೆ:

ಭಾರತೀಯ ಪುರಾತತ್ತ್ವ ಇಲಾಖೆಯ ವರದಿಯ ಪ್ರಕಾರ, ಐತಿಹಾಸಿಕ ಸ್ಥಳದಲ್ಲಿ ಲಕ್ಷಗೃಹ ಇದ್ದಿರುವುದನ್ನು ಖಚಿತಪಡಿಸಿದೆ. ಬರ್ನಾವಾ ಗ್ರಾಮದಲ್ಲಿನ ಪುರಾತನ ದಿಬ್ಬ ಇದ್ದ ಸ್ಥಳದಲ್ಲಿ ಎಎಸ್‌ ಐ ಉತ್ಖನನ ನಡೆಸಿದ್ದು, ಸುಮಾರು 4,500 ವರ್ಷಗಳಷ್ಟು ಹಳೆಯ ಸುರಂಗ ಮಾರ್ಗವನ್ನು ಪತ್ತೆ ಹಚ್ಚಿತ್ತು.

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.