ನಾವು ಬಳಲಿದ್ದೇವೆ, ವೈರಸ್ ಅಲ್ಲ…: ಸಾರ್ವಜನಿಕರಿಗೆ ಅರೋಗ್ಯ ಸಚಿವಾಲಯದ ಎಚ್ಚರಿಕೆಯ ಹೇಳಿಕೆ
Team Udayavani, May 1, 2021, 7:00 AM IST
ಹೊಸದಿಲ್ಲಿ: “ದೇಶದ ಜನರು ಒಂದು ವಿಚಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದೇನೆಂದರೆ – ನಾವು ಬಳಲಿದ್ದೇವೆ… ವೈರಸ್ ಅಲ್ಲ…’
ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ನೀಡಿರುವ ಎಚ್ಚರಿಕೆಭರಿತ ಹೇಳಿಕೆಯಿದು.
ನಾವು ಕಳೆದೊಂದು ವರ್ಷದಿಂದಲೂ ಕೊರೊನಾವನ್ನು ನೋಡುತ್ತಿದ್ದೇವೆ. ಕೆಲವರು ಈ ವಿಚಾರದಲ್ಲಿ ಭಂಡ ಧೈರ್ಯ ಪ್ರದರ್ಶಿಸುತ್ತಿದ್ದಾರೆ. ಕೊರೊನಾ ಎನ್ನುವುದೇ ಒಂದು ದೊಡ್ಡ ಹಗರಣ, ನನಗೆ ಮಾಸ್ಕ್ ಬೇಕಿಲ್ಲ, ಕೊರೊನಾ ಹೊರತಾದ ಬದುಕು ಕೂಡ ಇದೆ… ಎಂದೆಲ್ಲ ಹೇಳಿಕೊಳ್ಳುವವರು ನಮ್ಮ ಸುತ್ತಮುತ್ತಲೂ ಇದ್ದಾರೆ. ಆದರೆ ಒಂದಂತೂ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಮಗೆಲ್ಲರಿಗೂ ಈ ಕೊರೊನಾದಿಂದ ಸಾಕು ಸಾಕಾಗಿದೆ. ಆದರೆ ವೈರಸ್ ಮಾತ್ರ ಇನ್ನೂ ಬಳಲಿಲ್ಲ. ಅದು ಸಕ್ರಿಯವಾಗಿದ್ದುಕೊಂಡು, ಹಲವು ರೂಪಗಳನ್ನು ತಾಳುತ್ತಿದೆ ಎಂದು ವಿವರಿಸಿದ್ದಾರೆ ಅಗರ್ವಾಲ್.
ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಕಳೆದ 4 ವಾರಗಳಿಂದ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಳೆದ ಬಾರಿಯಂತೆಯೇ ಮತ್ತೂಮ್ಮೆ ಕೋವಿಡ್ ಶಂಕಿತರ ವಾರ್ಡ್‌ಗಳನ್ನು ನಿರ್ಮಿಸಬೇಕಾಗುತ್ತದೆ ಎಂದೂ ಹೇಳಿದ್ದಾರೆ.
ಆಡಿಯೋ, ವೀಡಿಯೋ ಸೌಲಭ್ಯ: ಸೋಂಕಿತರು ಮತ್ತು ಅವರ ಕುಟುಂಬ ಸದಸ್ಯರ ನಡುವೆ ಮಾತುಕತೆಗೆ ಆಸ್ಪತ್ರೆಗಳು ಆಡಿಯೋ ಅಥವಾ ವೀಡಿಯೋ ಕರೆಯ ಸೌಲಭ್ಯವನ್ನು ಒದಗಿಸಬೇಕು. ಆಗ ಸೋಂಕಿತರು ಹಾಗೂ ಕುಟುಂಬಸ್ಥರಲ್ಲಿರುವ ಭಯದ ವಾತಾವರಣ ಸ್ವಲ್ಪ ಮಟ್ಟಿಗೆ ದೂರವಾಗುತ್ತದೆ.
ಆಕ್ಸಿಜನ್ ವೇಸ್ಟ್ ಮಾಡದಿರಿ: ವೈದ್ಯಕೀಯ ಆಮ್ಲಜನಕವನ್ನು ಅತ್ಯಂತ ಜಾಗರೂಕತೆಯಿಂದ ಬಳಸಿ. ಅದೊಂದು ಅತ್ಯವಶ್ಯಕ ಆರೋಗ್ಯ ಸರಕಾಗಿದ್ದು, ಅದು ಯಾವುದೇ ಕಾರಣಕ್ಕೂ ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚಿಸಿದೆ. ಜತೆಗೆ ದೇಶದಲ್ಲಿ ದ್ರವೀಕೃತ ಆಕ್ಸಿಜನ್ ಸಂಗ್ರಹ ಸಾಕಷ್ಟಿದೆ. ಅದನ್ನು ದಿನದ 24 ಗಂಟೆಯೂ ಸರಬರಾಜು ಮಾಡಲು ಯತ್ನಿಸುತ್ತಿದ್ದೇವೆ. ನೈಟ್ರೋ ಜನ್ ಅನಿಲ ಸರಬರಾಜು ಮಾಡುವ ಶೇ.50ರಷ್ಟು ಟ್ಯಾಂಕರ್‌ಗಳನ್ನು ಆಕ್ಸಿಜನ್ ಹೊತ್ತೂಯ್ಯುವ ವಾಹನಗಳಾಗಿ ಪರಿವರ್ತಿಸುವಂತೆ ರಾಜ್ಯಗಳಿಗೆ ಸೂಚಿಸಿದ್ದೇವೆ ಎಂದು ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಪೀಯೂಶ್ ಗೋಯಲ್ ತಿಳಿಸಿದ್ದಾರೆ.
ಸೋಂಕು, ಸಾವಿನಲ್ಲಿ ದಾಖಲೆ: ಗುರುವಾರದಿಂದ ಶುಕ್ರವಾರದವರೆಗೆ ದೇಶಾದ್ಯಂತ 3.86 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದ್ದು, 3,498 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 31 ಲಕ್ಷದ ಗಡಿ ದಾಟಿದೆ. ಸಾವಿನ ಸಂಖ್ಯೆ 2,08,330ಕ್ಕೇರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
MUST WATCH
ಹೊಸ ಸೇರ್ಪಡೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.