Lavender Fields: ಎಂತಹ ರಮಣೀಯ ದೃಶ್ಯ…ಭೂಲೋಕದ ಸ್ವರ್ಗ ಕಸ್ಟೆಲ್ಲಿನ ಮಾರಿತ್ತಿಮ

ಕಣ್ಣು ಹಾಯಿಸಿವಷ್ಟು ಲ್ಯಾವೆಂಡರ್‌ ತೋಟಗಳು, ಮೂಗಿಗೆ ಹೂಗಳ ಸುವಾಸನೆ...

Team Udayavani, Sep 1, 2024, 9:20 AM IST

Lavender Fields: ಎಂತಹ ರಮಣೀಯ ದೃಶ್ಯ…ಭೂಲೋಕದ ಸ್ವರ್ಗ ಕಸ್ಟೆಲ್ಲಿನ ಮಾರಿತ್ತಿಮ

ಈ ಪುಟ್ಟ ಊರಿನ ಸೌಂದರ್ಯ ಇಟಲಿಯ ತೊಸ್ಕನ ಪ್ರಾಂತದ ಸೊಬಗಿಗೆ ಸೇರಿದ್ದು. ಬೇಸಗೆಯ ಒಂದು ರವಿವಾರ, ಮಟಮಟ ಮಧ್ಯಾಹ್ನ, ಬೇಸಗೆಯ ಸುಡುಬಿಸಿಲು ಯಾವುದನ್ನೂ ಲೆಕ್ಕಿಸದೆ ಭೂಲೋಕದ ಸ್ವರ್ಗದ ಕಡೆ ಸ್ನೇಹಿತೆಯರೊಂದಿಗೆ ಹೊರಟೆ. ಅಲ್ಲಿಗೆ ತಲುಪಲು ಸುಲಭ ಸಾಧ್ಯವಾಗಿರಲಿಲ್ಲ, ಆವಾಗಲೇ ಎಂದುಕೊಂಡೆ ಸ್ವರ್ಗಕ್ಕೆ ದಾರಿ ಸುಲಭವಲ್ಲ ಎಂದು. ಆದರೂ ಪ್ರಯಾಣ ಸುಗಮವಾಗಿತ್ತು. ಕಾರು ವೇಗವಾಗಿ ಓಡುತ್ತಿದ್ದಂತೆ ಸುತ್ತುವರಿದ ಬೆಟ್ಟಗಳು ಪ್ರಕೃತಿ ಸೊಬಗು ಕಣ್ಣಿಗೆ ಹಬ್ಬವಾಗಿತ್ತು.

ಕಾರು ಗುಡ್ಡ ಹತ್ತಲು ಆರಂಭಿಸಿತು, ಒಂದು ತಾಸು ಕಳೆದ ಅನಂತರ ಅಲ್ಲಿ ತಲುಪಿದೆವು. ನನ್ನ ಕಲ್ಪನೆ ಒಂದು ಭವನಕ್ಕೆ ಹೋಗಿ ತಂಪಾಗಿ ನೀರು ಕುಡಿದು ಆರಾಮವಾಗಿರುತ್ತೇವೆ ಎಂದು. ಆದರೆ …..ಏರಿಳಿತದ ರಸ್ತೆಯಲ್ಲಿ, ಸುಡುವ ಬಿಸಿಲಿನ ನಡುವೆ ನಡೆದೇ ಆ ಜಾಗಕ್ಕೆ ಹೋಗಬೇಕಿತ್ತು. ಕಾರಿನಿಂದ ಇಳಿದ ತತ್‌ಕ್ಷಣ ಒಂದು ಕಡೆಯಿಂದ ಲ್ಯಾವೆಂಡರ್‌ ಹೂಗಳ ಸುವಾಸನೆ ಆನಂದಿಸುತ್ತಿದ್ದಂತೆ ನಾಲ್ಕು ನಾಯಿಗಳು ಬೊಗಳುತ್ತ ಸುತ್ತುವರಿದವು. ಹೆದರಿಕೆಯಿಂದ ಅರಿವಿಲ್ಲದಂತೆ ಕಿರಿಚಿದಾಗ ನಾಯಿಗಳು ತಮ್ಮ ದಾರಿ ಹಿಡಿದವು.

ನಮ್ಮ ನಡಿಗೆ ಮುಂದುವರಿಯಿತು. ರವಿಯ ಬಿಸಿಲು ತಡೆಯಲಾರದೆ ಓಂ ಸಾಯಿರಾಂ ಅಂದಾಗ ಒಂದು ಜೀಪ್‌ ಮುಂದೆ ನಿಂತಿತು. ಅವರು ಅಂದಿನ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು, ನಿಲ್ಲಿಸಿ ಹತ್ತಿಸಿಕೊಂಡರು. ಜೀಪ್‌ ಹತ್ತಿ ಇಳಿದು ಕೊನೆಗೆ ಅಲ್ಲಿ ತಲುಪಿದೆವು. ಇಳಿದ ತತ್‌ಕ್ಷಣ ಎಂತಹ ರಮಣೀಯ ದೃಶ್ಯ. ಕಣ್ಣು ಹಾಯಿಸಿವಷ್ಟು ಲ್ಯಾವೆಂಡರ್‌ ತೋಟಗಳು, ಮೂಗಿಗೆ ಹೂಗಳ ಸುವಾಸನೆ, ಕಿವಿಗಳಿಗೆ ನೂರಾರು ದುಂಬಿಗಳ ಸಂಗೀತ ! ನಡುವೆ ಬೆಂಚುಗಳು, ಒಂದು ವೇದಿಕೆ ಸಾರಿದವು ಸಂಗೀತ ನಡೆಯುತ್ತದೆ ಇಲ್ಲಿ ಎಂದು!.

ಅಲ್ಲಿ ಕುಳಿತು ಒಂದು ತಾಸಿನ ಅನಂತರ ಗಾಯಕರ ಪ್ರತ್ಯಕ್ಷ ವಾದ್ಯಗಳ ಸಮೇತ, ಸ್ತ್ರೀಯರು ಭಾರತೀಯ ಉಡುಪನ್ನು ಧರಿಸಿ ಹಣೆಯಲ್ಲಿ ಕುಂಕುಮ, ಗಂಡಸರು ಪೈಜಾಮ ಜುಬ್ಬ ಧರಿಸಿ ವಿಭೂತಿ ಚುಕ್ಕೆ, ನಾನು ನನ್ನನ್ನೇ ಮರೆತೇ ಭಾರತ ಸಿಕ್ಕಿತ್ತಿಲ್ಲಿ ಎಂದು!. ಹೌದು ಅವರೆಲ್ಲ ಯೋಗಾನಂದ ಭಕ್ತರು ನನ್ನ ಸ್ನೇಹಿತರು, ನನ್ನ ನೋಡಿ ಸಂತಸ ಪಟ್ಟರು!.

ಕಾಲ ಮುಂದೂಡಿದಂತೆ ಸೂರ್ಯಾಸ್ತದ ಸಮಯ. ರವಿ ತನ್ನ ದಿನಚರಿ ಮುಗಿಸಿ ಸುಂದರ ಬಣ್ಣಗಳಿಂದ ಗಗನವ ಚಿತ್ರಿಸಿ ಹೊರಟಂತೆ ಬಿಸಿಲ ಬೇಗೆ ಮಾಯಾ ಬೆಟ್ಟಗಳಿಂದ ತಂಪಾದ ಗಾಳಿ, ದುಂಬಿಗಳು ಯಾರಿಗೂ ತೊಂದರೆ ಮಾಡದೆ ಗುನುಗುತ್ತ ಹೂಗಳ ಹೀರುತ್ತಿತ್ತು.

ಕ್ಷಣದಲ್ಲೇ ಗಾಯಕರು ಭಜನೆಗಳ ಹಾಡಲು ಕುಳಿತರಲ್ಲಿ, ವಾದ್ಯಗಳು ಶ್ರುತಿ ಸೇರಿದವು. ಆ ಸಣ್ಣ ಬೆಟ್ಟಗಳು ನನ್ನ ಪಾಲಿಗೆ ಹಿಮಾಲಯ ಆಗಿ ಕೈಲಾಸ ಕಂಡಂತೆ ಆಯಿತು. ಹಿಮ ಇರಲಿಲ್ಲ ! ಅಲ್ಲಿ ಭಜನೆಗಳು, ಓಂಕಾರ ಮೇಲೇರುತ್ತಿದ್ದಂತೆ ಶಿವೋಹಂ, ನಿರ್ವಾಣ ಶಟಕ ಶಿವ ಕಣ್ಮುಂದೆ ಇದ್ದಂತೆ ಭಾವನೆ. ಗಾಯಕರ ಭಕ್ತಿ ಹಾಗೆ ಇತ್ತು, ಗಾಯತ್ರಿ ಹಾಡಿದಾಗ ದಿಗಂತದ ಸೂರ್ಯ ಇಣುಕಿ ನೋಡಿದ, ಶೀತಲ ಕಿರಣಗಳೊಂದಿಗೆ ಅಬ್ಬಾ ಸ್ವರ್ಗ ಮೂರೇ ಗೇಣು ಅಂತ ಅನ್ನಿಸಿತು. ಎಂತಹ ದೈವಾನುಗ್ರಹ!
ಓಂ ನಮಃ ಶಿವಾಯ ಎಂದು ಮನೆ ಸೇರಿದಾಗ ಶರೀರ ಸುಸ್ತಾಗಿತ್ತು, ಆದರೆ ಮನಸ್ಸು ಸಂತಸದ ಕೊಡ ಆಗಿ ತುಂಬು ತುಳಕಿತು! ನೆನೆದವರ ಮನದಲ್ಲಿ ಭಗವಂತ ಪ್ರತ್ಯಕ್ಷ ಅನ್ನುವುದಕ್ಕೆ ಈ ಅನುಭವವೇ ಸಾಕ್ಷಿ.

*ಜಯಮೂರ್ತಿ, ಇಟಲಿ

ಟಾಪ್ ನ್ಯೂಸ್

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇಂದು ಕಿಂಗ್‌ ಸಾಮ್ರಾಜ್ಯದ ಕಥೆ

BGT: ವಿರಾಟ್‌ ಬಗ್ಗೆ ಆಸೀಸ್‌ ಜನರಿಗೆ ಯಾಕಿಷ್ಟು ಕುತೂಹಲ; ಇದು ಕಿಂಗ್‌ ಸಾಮ್ರಾಜ್ಯದ ಕಥೆ

palaniswami

AIADMK-BJP ಮರು ಮೈತ್ರಿ ಸುದ್ದಿ: ನಿರ್ಧಾರ ಬದಲಿಸುವರೇ ಪಳನಿಸ್ವಾಮಿ?

Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…

Recipe: ಚಟ್ ಪಟ್ ಅಂತ ಮಾಡಿ ಪನೀರ್ ಪಕೋಡಾ…

coco

Coconut Oil: ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಯಿರಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.