ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ವಾಂಟೆಡ್ ಕ್ರಿಮಿನಲ್ ಪವನ್ ಸೋಲಂಕಿ ಗೋವಾದಲ್ಲಿ ಬಂಧನ
Team Udayavani, Mar 18, 2023, 2:21 PM IST
ಪಣಜಿ: ಜೋಧ್‍ಪುರದಲ್ಲಿರುವ ಜೆಸರಾಂ ಅವರ ಕಚೇರಿಗೆ ನುಗ್ಗಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಲಕ್ಷಾಂತರ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಟೆಡ್ ಕ್ರಿಮಿನಲ್ ಪವನ್ ಸೋಲಂಕಿಯನ್ನು ಪಣಜಿ ಪೊಲೀಸರು ಬಂಧಿಸಿದ್ದಾರೆ.
ಪಣಜಿ ಪೋಲಿಸ್ ಬಂಧಿಸಿದ ಈ ಅಪರಾಧಿಯನ್ನು ಸರ್ದಾರ್ ಪುರ ಪೊಲೀಸರು ಆತನನ್ನು ವಶಕ್ಕೆ ಪಡೆದು ಜೋಧಪುರಕ್ಕೆ ತೆರಳಿದ್ದಾರೆ ಎಂದು ಗೋವಾ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಾಲ್ಸನ್ ತಿಳಿಸಿದ್ದಾರೆ. ಶಂಕಿತ ಆರೋಪಿ ಪವನ್ ಸೋಲಂಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಎನ್ನಲಾಗಿದೆ.
ಈ ಗ್ಯಾಂಗ್ ನ ನಾಯಕನ ಸೂಚನೆ ಮೇರೆಗೆ ಜೋಡುಪಾಲದಲ್ಲಿ ಸುಲಿಗೆ, ಲೂಟಿ, ಕಳ್ಳತನ ಮುಂದುವರಿದಿದೆ. ಮಾರ್ಚ್ 4 ರಂದು ಗ್ಯಾಂಗ್‍ನ ಕೆಲವು ಸದಸ್ಯರು ಮುಖವಾಡ ಧರಿಸಿ ಜೆಸರಾಂ ಕಚೇರಿಗೆ ಪ್ರವೇಶಿಸಿದ್ದರು. ಆತನನ್ನು ಥಳಿಸಿ, ಕೈಕಾಲು ಕಟ್ಟಿ ಕಛೇರಿಯನ್ನು ದೋಚಿದ್ದರು. ಸರ್ದಾರ್ ಪುರ ಪೊಲೀಸರು ಈ ಪ್ರಕರಣದಲ್ಲಿ ಗ್ಯಾಂಗ್ ಯಾರನ್ನೂ ಬಂಧಿಸಲಿಲ್ಲ, ಆದರೆ ಪವನ್ ಓಡಿಬಂದು ಗೋವಾದಲ್ಲಿ ಆಶ್ರಯ ಪಡೆದಿದ್ದ.
ಈತನಿಗಾಗಿ ಹುಡುಕಾಟ ನಡೆಸಿದಾಗ ಸರ್ದಾರ್ ಪುರ ಪೋಲಿಸರಿಗೆ ಗೋವಾದಲ್ಲಿ ಆರೋಪಿಯು ಕ್ಯಾಸಿನೋದಲ್ಲಿ ಜೂಜಾಡಲು ಹೋಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯನ್ನಾಧರಿಸಿ ಗೋವಾ ಪೋಲಿಸರ ಸಹಕಾರದೊಂದಿಗೆ ಗೋವಾದಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಸರ್ದಾರಪುರ ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂದು ಗೋವಾ ಪೋಲಿಸರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.