ದ್ವಿತೀಯ ಹಂತದ ನಾಯಕತ್ವಕ್ಕೆ ಪಂಚತಂತ್ರ! ಸವದಿ, ಅಶೋಕ್, ಬೊಮ್ಮಾಯಿ, ಬೈರತಿ, ಸುಧಾಕರ್ ತಂಡ
Team Udayavani, Jun 22, 2021, 7:10 AM IST
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸಿಎಂ ಬಿಎಸ್‌ವೈ ಬಳಿಕ ನಾಯಕತ್ವದ ಪ್ರಶ್ನೆಗೆ ಉತ್ತರ ಹುಡುಕಲು ಐವರು ನಾಯಕರು ಸಂಘಟಿತ ಪ್ರಯತ್ನಕ್ಕೆ ತೊಡಗಿದ್ದಾರೆ.
ದ್ವಿತೀಯ ಹಂತದ ಸಮರ್ಥ ನಾಯಕತ್ವದ ಕೊರತೆ ನೀಗಿಸಲು ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಡಾ| ಸುಧಾಕರ್ ಮತ್ತು ಬೈರತಿ ಬಸವರಾಜ್ ತಂಡ ಕಟ್ಟಿಕೊಂಡಿ ದ್ದಾರೆ ಎಂದು ತಿಳಿದುಬಂದಿದೆ.
ಪಕ್ಷದಲ್ಲಿ ನಾಯಕತ್ವದ ಕೊರತೆ ನೀಗಿಸಲು ಏಕಾಂಗಿಯಾಗಿ ಪೈಪೋಟಿ ನಡೆಸುವುದರಿಂದ ಪ್ರಯೋಜನ ಇಲ್ಲ ಎಂಬ ಲೆಕ್ಕಾಚಾರದಲ್ಲಿ ಇವ ರಿದ್ದಾರೆ ಎನ್ನಲಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡಿದರೆ, ಪಕ್ಷ ಯಾರನ್ನಾದರೂ ಗುರುತಿಸಿ ಜವಾಬ್ದಾರಿ ನೀಡುತ್ತದೆ ಎಂಬ ವಿಶ್ವಾಸ ದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಕಂದಾಯ ಸಚಿವ ಆರ್. ಅಶೋಕ್ ಅವರ ಪದ್ಮನಾಭ ನಗರ ಕ್ಷೇತ್ರದಲ್ಲಿ ಕೊರೊನಾ ದಿಂದ ಸಾವೀಗೀಡಾದವರ ಮನೆಗಳಿಗೆ ಎಲ್ಲರೂ ಒಟ್ಟಾಗಿ ಭೇಟಿ ನೀಡಿ ವೈಯಕ್ತಿಕ ಆರ್ಥಿಕ ಸಹಾಯ ನೀಡಿದ್ದರು. ಮುಂದುವರಿದ ಭಾಗ ವಾಗಿ ಮುಂದಿನ ದಿನಗಳಲ್ಲಿ ಇನ್ನಿತರ ನಾಲ್ವರ ಕ್ಷೇತ್ರಗಳಲ್ಲಿ ಇದೇ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸ ಲಾಗಿದೆ. ಮುಂದಿನ ದಿನಗಳಲ್ಲಿ ಇತರ ನಾಯಕರನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ಸಾಮೂಹಿಕ ನಾಯಕತ್ವದ ದಾರಿ ಕಂಡುಕೊಳ್ಳಲು ಪ್ರಯತ್ನಿಸುತ್ತಿ ದ್ದಾರೆ ಎಂದು ತಿಳಿದುಬಂದಿದೆ.
ಲಕ್ಷ್ಮಣ ಸವದಿ ಆಲೋಚನೆ
ಈ ಹೊಸ ಆಲೋಚನೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಯವರದ್ದು ಎಂದು ಹೇಳಲಾಗುತ್ತಿದೆ. ಈ ಕುರಿತು ಒಂದು ತಿಂಗಳ ಹಿಂದೆ ಈ ಐವರು ಸಚಿವರು ಚರ್ಚಿಸಿದ್ದು, ಒಗ್ಗಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಮೊದಲ ಹೆಜ್ಜೆಯಾಗಿ ಈ ಸಚಿವರು ಪರಸ್ಪರ ಜತೆಗೂಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದ್ದಾರೆ.
ಜಾತಿ ನಾಯಕತ್ವಕ್ಕೆ ಪರ್ಯಾಯ
ಮುಂದಿನ ದಿನಗಳಲ್ಲಿ ಪಕ್ಷ ಒಂದೇ ಜಾತಿಯ ನಾಯಕತ್ವಕ್ಕೆ ಸೀಮಿತ ಆಗಬಾರದು ಎನ್ನುವ ಕಾರಣದಿಂದ ಬೇರೆ ಬೇರೆ ಸಮುದಾಯದವರಾಗಿರುವ ಈ ನಾಯಕರು ತಂಡ ಕಟ್ಟಿಕೊಂಡಿದ್ದಾರೆ. ಈಗ ಎದ್ದಿರುವ ನಾಯಕತ್ವ ಗೊಂದಲದ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುವುದರಿಂದ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮುಂದಿನ ದಿನಗಳಲ್ಲಿ ಎರಡನೇ ಹಂತದ ನಾಯಕತ್ವದ ಮೇಲೆ ಕಣ್ಣಿಟ್ಟು ಈ ಪಂಚ ಸಚಿವರ ಪಡೆ ಅಖಾಡಕ್ಕಿಳಿದಿದೆ ಎಂದು ಹೇಳಲಾಗುತ್ತಿದೆ.
– ಶಂಕರ ಪಾಗೋಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.