ಕಾಯ್ದಿರಿಸಿದ ರೂಂ ಕ್ಯಾನ್ಸಲ್ ಮಾಡಿದ ಹೋಟೆಲ್ ವಿರುದ್ಧ ಕಾನೂನು ಸಮರ: ಡಿಕೆ ಶಿವಕುಮಾರ್
Team Udayavani, Jul 11, 2019, 11:10 AM IST
ಬೆಂಗಳೂರು: ನಾವು ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿಯೇ ಅಧಿಕೃತವಾಗಿ ಮುಂಬೈಗೆ ಹೋಗಿದ್ದು, ಹೋಟೆಲ್ ನ ರೂಂ ಬುಕ್ ಮಾಡಿದ್ದೇವು. ಆದರೆ ರೂಮ್ ಅನ್ನು ಕ್ಯಾನ್ಸಲ್ ಮಾಡಿ, ಹೋಟೆಲ್ ಒಳಗೆ ಹೋಗದಂತೆ ತಡೆಯಲಾಯಿತು. ಈ ಸಂಬಂಧ ನಾನು ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಕೆಕೆ ಗೆಸ್ಟ್ ಹೌಸ್ ಬಳಿ ಸುದ್ದಿಗಾರರ ಜತೆ ಮಾತನಾಡಿದ ,ಅವರು ಹೋಟೆಲ್ ಆಡಳಿತ ಮಂಡಳಿ ಬುಕ್ ಮಾಡಿದ್ದ ರೂಂ ಅನ್ನು ಕ್ಯಾನ್ಸಲ್ ಮಾಡಿದ ಮೇಲೆ ಪೊಲೀಸರು ನನ್ನ ಬೆಂಗಳೂರಿಗೆ ಕಳುಹಿಸಿದ್ದರು.
ನಿನ್ನೆ ರಾತ್ರಿಯೇ ನಾನು ಬೆಂಗಳೂರು ತಲುಪಿದ್ದೇನೆ. ನಮ್ಮ ಶಾಸಕರನ್ನೂ ಭೇಟಿಯಾಗಲೂ ಅವಕಾಶ ಕೊಡಲಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ದೂರಿದರು.
ರಾಜೀನಾಮೆ ಸಲ್ಲಿಸಿ ಮುಂಬೈ ಹೋಟೆಲ್ ನಲ್ಲಿರುವ ಅತೃಪ್ತ ಶಾಸಕ ಮನವೊಲಿಕೆ ಮಾಡಲು ಹೋಗಿದ್ದ ಸಚಿವ ಡಿಕೆ ಶಿವಕುಮಾರ್ ಮುಂಬೈಗೆ ತೆರಳಿದ್ದ ಸಂದರ್ಭದಲ್ಲಿ ಹೈಡ್ರಾಮಾ ನಡೆದಿತ್ತು. ಶಾಸಕರನ್ನು ಮಾತನಾಡಿಸಲು ಅವಕಾಶ ನೀಡದ ಕಾರಣ 6ಗಂಟೆ ಪ್ರತಿಭಟನೆ ನಡೆಸಿ, ಬಳಿಕ ಪೊಲೀಸ್ ವಶಕ್ಕೆ ಒಳಗಾಗಿ ಕೊನೆಗೆ ಬೆಂಗಳೂರಿಗೆ ವಾಪಸ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.