Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
ಮಾತು, ಮತಕ್ಕೆ ಸಂಬಂಧಿಸಿದಂತೆ ಅಲ್ಲಿನ ಸದಸ್ಯರಿಗೆ ಸಾಂವಿಧಾನಿಕ ರಕ್ಷಣೆಯಿದೆ
Team Udayavani, Dec 24, 2024, 7:03 AM IST
ಬೆಂಗಳೂರು: ಸಿ.ಟಿ. ರವಿ ಅವರು ಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ವಿರುದ್ಧ ಅವಾಚ್ಯ ಪದ ಬಳಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಪೋಲಿಸ್ ತನಿಖೆಯ ಮುಂದುವರಿಕೆಗೆ ಸಂಬಂಧಿಸಿದಂತೆ ಸಭಾಪತಿ ಅವರ ತೀರ್ಮಾನವೇ ಅಂತಿಮ ಎಂದು ಹಿರಿಯ ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಸನ ಸಭೆಯಲ್ಲಿನ ಮಾತು ಮತ್ತು ಮತಕ್ಕೆ ಸಂಬಂಧಿಸಿದಂತೆ ಅಲ್ಲಿನ ಸದಸ್ಯರಿಗೆ ಸಾಂವಿಧಾನಿಕ ರಕ್ಷಣೆಯಿದೆ. ಸಿ.ಟಿ. ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ನಡೆದಿರುವ ಮಾತಿನ ಚಕಮಕಿ ಸಂವಿಧಾನ ನೀಡಿರುವ ವಾಕ್ ರಕ್ಷಣೆಯ ವ್ಯಾಪ್ತಿಯೊಳಗೆಯೇ ಬರುತ್ತದೆ ಎಂಬುದು ಕಾನೂನು ತಜ್ಞರ ಖಚಿತ ಅಭಿಪ್ರಾಯ.
ಸಭಾಪತಿಯೇ ಅಂತಿಮ: ಅಶೋಕ್ ಹಾರನಹಳ್ಳಿ
ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಅವರು, ಸದನದೊಳಗಿನ ಮಾತು ಮತ್ತು ಮತದಾನದ ಬಗ್ಗೆ ಅಲ್ಲಿನ ಸದಸ್ಯರಿಗೆ ಸಾಂವಿಧಾನಿಕ ರಕ್ಷಣೆಯಿದೆ. ಹಾಗೆಯೇ ಸದನದೊಳಗೆ ನಡೆದಿರುವ ಮಾತಿಗೆ ಸಂಬಂಧಿಸಿದಂತೆ ಸದನದ ಸುಪರ್ದಿ ಹೊತ್ತಿರುವ ಸ್ಪೀಕರ್ ಅಥವಾ ಸಭಾಪತಿ ಅವರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಹೇಳುತ್ತಾರೆ.
ಒಂದು ವೇಳೆ ಸ್ಪೀಕರ್ ಪೊಲೀಸರಿಗೆ ಸದನದ ಒಳಗೆ ಬಂದು ಸ್ಥಳ ಮಹಜರು ನಡೆಸಲು ಅವಕಾಶ ಮಾಡಿಕೊಟ್ಟರೆ, ಅದು ಅವರ ಅಧಿಕಾರವನ್ನು ಮೊಟಕು ಮಾಡಿದಂತೆಯೇ ಸರಿ. ಇದೇ ಪ್ರಕರಣವನ್ನು ಉದಾಹರಿಸಿ ಹೇಳುವುದಾದರೆ ರವಿ ಅವರನ್ನು ಲಕ್ಷ್ಮೀ ಹೆಬ್ಟಾಳ್ಕರ್ ಕೊಲೆಗಡುಕ ಎಂದು ಹೇಳಿದ್ದಾರೆ ಎಂಬ ವಾದವೂ ಇದೆ. ಈ ಬಗ್ಗೆ ರವಿ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದೇ ಆದಲ್ಲಿ ಆಗಲೂ ಸ್ಥಳ ಮಹಜರು ನಡೆಸಬೇಕಾಗುತ್ತದೆ. ಹೀಗೆ ಪ್ರಕರಣಗಳ ಸರಣಿ ಮುಂದುವರಿಯಬಹುದು. ಇದು ಸ್ಪೀಕರ್ ಅವರ ಸಂವಿಧಾನದತ್ತ ಅಧಿಕಾರವನ್ನು ಸಡಿಲಗೊಳಿಸಬಹುದು ಎಂದು ಅವರು ಹೇಳುತ್ತಾರೆ.
ಪೊಲೀಸರಿಗೆ ಹೈಕೋರ್ಟಿಗೆ ಹೋಗಲು ಮಾತ್ರ ಅವಕಾಶ: ಹಿರಿಯ ವಕೀಲ ಕೆ.ವಿ. ಧನಂಜಯ
ಸಿ.ಟಿ. ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ಶಾಸನ ಸಭೆ ಮುಂದೂಡಿಕೆ ಆಗಿದ್ದರೂ ಅಲ್ಲಿ ನಡೆದ ಮಾತಿನ ಚಕಮಕಿಯು ಕಾರ್ಯಕಲಾಪದ ಮುಂದುವರಿದ ಭಾಗವೇ ಆಗಿತ್ತು. ಆದ್ದರಿಂದ ಶಾಸಕರಿಗೆ ಸಂವಿಧಾನದ ರಕ್ಷಣೆಯಿದೆ. ಆದರೆ, ಪೊಲೀಸರು ಇಲ್ಲವೇ ದೂರುದಾರರು ಹೈಕೋರ್ಟ್‌ಗೆ ಹೋಗಲು ಅವಕಾಶ ಇದೆ ಎಂದು ಹಿರಿಯ ವಕೀಲ ಕೆ.ವಿ. ಧನಂಜಯ ಅಭಿಪ್ರಾಯಪಟ್ಟಿದ್ದಾರೆ.
ಶಾಸನ ಸಭೆಯಲ್ಲಿ ಚರ್ಚೆ, ಮಾತಿನ ಚಕಮಕಿ ನಡೆಯುತ್ತಿದ್ದಾಗ ಸ್ಪೀಕರ್ ಅಥವಾ ಸಭಾಪತಿ ಕಲಾಪವನ್ನು ಮುಂದೂಡಿದ ಮೇಲೆಯೂ ಚರ್ಚೆ ಮುಂದುವರಿಸಿ ಹೇಳುವ ಮಾತಿಗೆ ರಕ್ಷಣೆಯಿದೆ ಎಂದು ನಾನು ಭಾವಿಸುತ್ತೇನೆ. ಈ ಪ್ರಕರಣದಲ್ಲಿ ಸದಸ್ಯನಿಗೆ ಸಂವಿಧಾನದ ರಕ್ಷಣೆಯಿದ್ದ ಸಂದರ್ಭದಲ್ಲಿ ಆಡಿದ ಮಾತಿಗೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ಮುಂದುವರಿಸಲು ಇಚ್ಚಿಸಿದರೆ ಹೈಕೋರ್ಟ್‌ಗೆ ಹೋಗಿ ಅಲ್ಲಿಂದ ನಿರ್ದೇಶನ ಪಡೆಯಬೇಕಾಗುತ್ತದೆ. ಇಲ್ಲವೇ ಪ್ರಕರಣದ ದೂರುದಾರೆ ಹೈಕೋರ್ಟ್ ಮೊರೆ ಹೋಗಬೇಕಾಗುವುದು. ಸಭಾಪತಿಯ ತೀರ್ಪನ್ನು ಉಲ್ಲಂಘಿಸಿ ಸದನ ಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಶಾಸಕ, ಸಂಸದರ ಸದನದೊಳಗಿನ ಮಾತಿಗೆ ಸಂವಿಧಾನದ ಸಂಪೂರ್ಣ ರಕ್ಷಣೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.