ಸಿಗದ ಚಿರತೆ; ತಪ್ಪದ ಆತಂಕ
Team Udayavani, Dec 5, 2022, 7:20 AM IST
ಬೆಂಗಳೂರು/ಮೈಸೂರು: ಚಿರತೆ ಕಂಡುಬಂದು ಆತಂಕಕ್ಕೆ ಗುರಿಯಾಗಿರುವ ಬೆಂಗಳೂರು, ಮೈಸೂರಿನಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಬೆಂಗಳೂರು ಪರಿಸರದ ಚಿರತೆ ಅರಣ್ಯ ಪ್ರದೇಶ ಸೇರಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಟಿ.ನರಸೀಪುರದಲ್ಲಿ ಇಬ್ಬರನ್ನು ಬಲಿ ಪಡೆದಿರುವ ಚಿರತೆಯನ್ನು ಸೆರೆ ಹಿಡಿಯಲು 13 ತಂಡಗಳನ್ನು ರಚಿಸಲಾಗಿದೆ. ಮೈಸೂರು, ಬಂಡೀಪುರದಿಂದ ವಿಶೇಷ ತಂಡಗಳನ್ನು ಕರೆಸಿಕೊಳ್ಳಲಾಗಿದ್ದು, ಇದರಲ್ಲಿ 120ಕ್ಕಿಂತ ಅಧಿಕ ಸಿಬಂದಿ ಇದ್ದಾರೆ. ಪ್ರತಿ ತಂಡದಲ್ಲಿ ಒಬ್ಬ ಶಾರ್ಪ್ ಶೂಟರ್ ಇದ್ದು, ಅವರಿಗೆ ಅಗತ್ಯ ಪರಿಕರ ನೀಡಲಾಗಿದೆ. 20 ಡ್ರೋನ್ ಕೆಮರಾ ತರಿಸಿಕೊಂಡು ಚಿರತೆ ಸಂಚಾರದ ಗ್ರಾಮಗಳಲ್ಲಿ ಅಳವಡಿಸಲಾಗಿದೆ.
ಕೆಮರಾ ಟ್ರ್ಯಾಪ್‌ನಲ್ಲಿ ಸೆರೆ?:
ಚಿರತೆ ಮೊದಲ ಬಲಿ ಪಡೆದ ಪ್ರದೇಶದಲ್ಲಿ ಇಲಾಖೆ ಇರಿಸಿದ್ದ ಕೆಮರಾ ಟ್ರ್ಯಾಪ್‌ನಲ್ಲಿ ಚಿರತೆಯ ಚಲನವಲನ ಸೆರೆಯಾಗಿದೆ. ಅದರ ಹೆಜ್ಜೆ ಗುರುತು, ಎರಡೂ ಘಟನೆಗಳಲ್ಲಿ ಕಂಡುಬಂದ ಹೆಜ್ಜೆ ಗುರುತುಗಳಲ್ಲಿ ಸಾಮ್ಯತೆ ಇರುವುದರಿಂದ ಅದುವೇ ಮನುಷ್ಯಹಂತಕ ಚಿರತೆ ಎನ್ನಲಾಗಿದೆ. ಚಿರತೆ ಇರುವ ಸ್ಥಳವನ್ನು ಇಲಾಖೆ ಖಾತ್ರಿಪಡಿಸಿಕೊಂಡಿದ್ದು, ಒಂದೆರೆಡು ದಿನ
ಗಳಲ್ಲಿ ಅದನ್ನು ಸೆರೆ ಹಿಡಿಯುವ ನಿರೀಕ್ಷೆ ಇದೆ. ಇನ್ನೊಂದೆಡೆ, ಚಿರತೆ ಬೋನಿಗೆ ಬೀಳದೇ ಇದ್ದರೆ ಗುಂಡು ಹಾರಿಸಿ ಕೊಲ್ಲುವ ಆದೇಶದ ಬಗ್ಗೆ ಪ್ರಾಣಿ ಪ್ರಿಯರು ಆಕ್ಷೇಪಿಸಿದ್ದಾರೆ.
ಬೆಂಗಳೂರಿನಲ್ಲಿ ಚಿರತೆಯ ಶೋಧಕ್ಕಾಗಿ 3 ದಿನಗಳಿಂದ ಪ್ರಯತ್ನಿಸಲಾಗುತ್ತಿದೆ. ತುರಹಳ್ಳಿ, ದೇವನಹಳ್ಳಿಯ ಐಟಿಸಿ ಕಾರ್ಖಾನೆ ಪ್ರದೇಶ ಹಾಗೂ ಕೆಂಗೇರಿಯ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಚಿರತೆಯನ್ನು ಪತ್ತೆ ಹಚ್ಚಲು 30ಕ್ಕೂ ಅಧಿಕ ಅರಣ್ಯ ಸಿಬಂದಿಯ ತಂಡವು ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಚಿರತೆಯು ಬನ್ನೇರುಘಟ್ಟದ ಕಾಡಿಗೆ ಹೋಗಿರುವ ಸಾಧ್ಯತೆಗಳಿವೆ. ಬೇರೆ ಕಾಡಿಗೆ ಸಂಚರಿಸುತ್ತಿದ್ದಾಗ ಆಹಾರಕ್ಕಾಗಿ ನಗರ ಪ್ರದೇಶಕ್ಕೆ ಬಂದಿರುವ ಸಾಧ್ಯತೆಗಳಿವೆ ಎಂದು ಅರಣ್ಯ ಇಲಾಖೆ ಸಿಬಂದಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಕಾಡುಗಳಿಗೆ ಹೊಂದಿಕೊಂಡಿರುವ ನಗರಗಳಿಗೆ ಹಿಂದೆಯೂ ಚಿರತೆಗಳು ಬರುತ್ತಿದ್ದವು. ಇದು ಹೊಸ ವಿಚಾರವಲ್ಲ. ತುರಹಳ್ಳಿ, ಐಟಿಸಿ ಕಾರ್ಖಾನೆ ಬಳಿ ಹಿಂದೆ ಕುರುಚಲು ಗಿಡ, ಕಾಡುಗಳಿತ್ತು. ಅದೇ ಪ್ರದೇಶಗಳಲ್ಲಿ ಜನ ಸಾಮಾನ್ಯರು ಬಡಾವಣೆ ಮಾಡಿದ್ದಾರೆ. ಹೀಗಾಗಿ ಚಿರತೆ ಕೆಲವೊಮ್ಮೆ ಬಂದು ಹೋಗುವುದು ಸಹಜವಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಮನುಷ್ಯನನ್ನು ಚಿರತೆ ಕೊಂದ ಪ್ರಕರಣಗಳು ವಿರಳ.– ಚರಣ್, ಸಹಾಯಕ ಅರಣ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.