ಸ್ಪೀಕರ್ ಕಾಗೇರಿಗೆ ಎದುರಾದ ಚಿರತೆ! ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಘಟನೆ
Team Udayavani, Apr 7, 2022, 10:04 PM IST
ಶಿರಸಿ: ಕಾರ್ಯಕ್ರಮ ಮುಗಿಸಿ ಸ್ವಗ್ರಾಮ ಕಾಗೇರಿಗೆ ತೆರಳುತ್ತಿದ್ದ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಾಹನಕ್ಕೆ ಸುಮಾರು ನಾಲ್ಕೈದು ಅಡಿ ಎತ್ತರದ ಚಿರತೆಯೊಂದು ಎದುರಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಶಿರಸಿ ಪೇಟೆಯಿಂದ ೮ ಕಿಮಿ ದೂರದ ಕಾಗೇರಿಗೆ ಬರೂರು ಮಾರ್ಗದಲ್ಲಿ ತೆರಳಬೇಕು. ಈ ಹಿಂದೆ ಕೂಡ ಚಿರತೆ ಇತ್ತೆಂದು ಹೇಳಲಾಗಿತ್ತು. ಆದರೆ, ಈಗ ಕ್ಯಾಮೆರಾದಲ್ಲಿಯೂ ಸೆರೆಯಾಗಿದೆ.
ಕಾಗೇರಿ ಅವರ ವಾಹನ ಚಾಲಕ ಕಿರಣ್ ಹೆಗಡೆ ಅವರು ಸ್ಪೀಕರ್ ಅವರನ್ನು ಮನೆಗೆ ಬಿಡುವಾಗ ಕಾಗೇರಿ ಸಮೀಪದ ನೇಗಾರ ಕತ್ರಿಯ ಬಳಿ ರಸ್ತೆಯ ಮೇಲೆ ಇತ್ತು. ವಾಹನದ ಬೆಳಕನ್ನು ನೋಡಿ ಕಾಡಿನತ್ತ ಓಡಿತ್ತು. ಆದರೆ, ಕಿರಣ್ ವಾಪಸ್ ಬರುವಾಗ ಮರೆಯಲ್ಲಿ ಅಡಗಿ ಕುಳಿತಿದ್ದನ್ನು ಪೊಟೊದಲ್ಲಿ ಕ್ಲಿಕ್ಕಿಸಿದ್ದಾರೆ.
ಈ ಚಿರತೆ ಇದೀಗ ಕಾನಮೂಲೆ, ಕಾಗೇರಿ, ಪಡಿಗೇರೆ, ದೀಗೊಪ್ಪ, ಯಡಹಳ್ಳಿ, ಬೆಟ್ಟಕೊಪ್ಪ, ಅರಸಿಕೆರೆ, ಕುಳವೆ, ಬರಗಾರ, ಬೆಳಖಂಡ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ : ಪಿಯು ಪರೀಕ್ಷೆಗೂ ಸಮವಸ್ತ್ರ ಕಡ್ಡಾಯ : ಪದವಿಪೂರ್ವ ಶಿಕ್ಷಣ ಇಲಾಖೆಯ ಆದೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
Belagavi; ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಮಾಜಿ ಪ್ರಧಾನಿ ನಿಧನದಿಂದ ಆಘಾತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.