![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 5, 2023, 5:06 PM IST
ವಿಶಾಖಪಟ್ಟಣ: ಆನೆಯೊಂದು ಏಕಾಏಕಿ ಖಾಸಗಿ ಬಸ್ ವೊಂದರ ಮೇಲೆ ದಾಳಿ ನಡೆಸಿರುವ ಘಟನೆ ಆಂಧ್ರಪ್ರದೇಶದ ಪಾರ್ವತಿಪುರಂನ ಮಾನ್ಯಂ ಜಿಲ್ಲೆಯ ಅರ್ಥಮ್ ಗ್ರಾಮದಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Nidumamidi Mutt: ಸಾಹಿತ್ಯಕ್ಕೆ ನಿಡುಮಾಮಿಡಿ ಮಠದ ಕೊಡುಗೆ ಅಪಾರ
ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ. ಆಕ್ರೋಶಗೊಂಡಿದ್ದ ಗಜರಾಜ ರಸ್ತೆಮಧ್ಯೆ ನಿಂತ ಪರಿಣಾಮ ವಾಹನಗಳು ಮುಂದಕ್ಕೆ ಚಲಿಸದೇ ನಿಂತಿದ್ದು, ಸುತ್ತ-ಮುತ್ತ ನಿಂತಿದ್ದ ಜನರನ್ನು ಅಟ್ಟಾಡಿಸಿರುವ ದೃಶ್ಯ ವಿಡಿಯೋದಲ್ಲಿದೆ.
ಆನೆ ಏಕಾಏಕಿ ಬಸ್ ನ ಮುಂಭಾಗದ ಗಾಜನ್ನು ಸೊಂಡಿಲಿನಿಂದ ಒಡೆದು ಹಾಕಿದ್ದು, ಇದರಿಂದ ಗಾಬರಿಗೊಂಡ ಪ್ರಯಾಣಿಕರು ಬಸ್ ನಿಂದ ಕೆಳಗಿಳಿದಿದ್ದರು. ಈ ವೇಳೆ ಪ್ರಯಾಣಿಕರು ಭಯದಿಂದ ಓಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
#BreakingNews: Elephant goes on rampage in Parvathipuram Manyam district of #AndhraPradesh. Head butts a private bus and charges locals. Forest officials trying to capture the animal. Huge traffic jam as vehicles stopped near Manna Gate of Komarada Mandal. @newstapTweets pic.twitter.com/2d9EunWrZQ
— Krishnamurthy (@krishna0302) September 4, 2023
ಅಪಾಯವನ್ನ ಅರಿತ ಚಾಲಕ ಬಸ್ ಅನ್ನು ರಿವರ್ಸ್ ತೆಗೆದುಕೊಂಡು ಹೋಗಿದ್ದ. ಕೊನೆಗೆ ಆನೆ ತುಂಬಾ ದೂರ ಹೋದ ನಂತರ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿತ್ತು.
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…
Jamui: ಸಾಲ ರಿಕವರಿಗೆ ಬಂದ ಏಜೆಂಟ್ ನನ್ನೇ ಮದುವೆಯಾದ ವಿವಾಹಿತ ಮಹಿಳೆ!
Video: ಕಾರು ಚಲಾಯಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ… ಮಹಿಳೆಗೆ ಬಿತ್ತು ದಂಡ
Malaysia; ಭಾರತ ಮೂಲದ ಮಹಿಳೆಯಿಂದ ಕೆಲಸಕ್ಕಾಗಿ ಪ್ರತಿದಿನ 700 ಕಿ.ಮೀ. ವಿಮಾನ ಯಾನ!
You seem to have an Ad Blocker on.
To continue reading, please turn it off or whitelist Udayavani.