ಸಾಹಿತ್ಯದ ಓದು ಬಾಲ್ಯದಿಂದಲೇ ಆರಂಭವಾಗಲಿ


Team Udayavani, Jun 9, 2021, 6:40 AM IST

ಸಾಹಿತ್ಯದ ಓದು ಬಾಲ್ಯದಿಂದಲೇ ಆರಂಭವಾಗಲಿ

ಅನೇಕ ಒತ್ತಡ, ಧಾವಂತಗಳಿಂದ ಮಾನಸಿಕವಾಗಿ ಕುಗ್ಗುತ್ತಿರುವ ಇಂದಿನ ದಿನಗಳಲ್ಲಿ ಸಾಹಿತ್ಯಾಸಕ್ತ ಮನಸ್ಸುಗಳು ತಮ್ಮ ಬರೆಹ, ಲೇಖನ ಗಳ ಮೂಲಕ ಒಂದಷ್ಟು ಭಾವನೆಗಳನ್ನು ಹೊರಚೆಲ್ಲಬಹುದು. ಒಂದು ಸುಸಂಸ್ಕೃತವಾದ ಸಂತೋಷವನ್ನು ಅಕ್ಷರ ರೂಪದಲ್ಲಿ ಅಭಿವ್ಯಕ್ತಿಸುವುದು ಸಾಹಿತ್ಯ ಎಂದೆನಿಸಬಹುದು. ಸಾಹಿತ್ಯವೆಂದರೆ ಭಾವನೆಗಳ ಪ್ರತಿಬಿಂಬ, ಸೌಂದರ್ಯದ ಹೂರಣ, ಅರಿವಿನ ಅಂತರಾಳ, ಜ್ಞಾನದ ಪ್ರತಿನಿಧಿ, ಅನುಭವದ ಮೊತ್ತ, ಸೃಜನಶೀಲತೆಯ ಸಾಕ್ಷಿ, ಸಂಸ್ಕೃತಿಯ ಭಂಡಾರ. ಅಂತೂ ಸಾಹಿತ್ಯವಿದ್ದರೆ ಬದುಕಿಗೊಂದು ಲಾಲಿತ್ಯ.

ಸಾಹಿತ್ಯ ಮನೋಭಾವ ಬೆಳೆಸಿಕೊಳ್ಳದವ ಹತ್ತರಲ್ಲಿ ಹನ್ನೊಂದರಂತೆ ಬಾಳುತ್ತಾನೆ ಅಷ್ಟೆ. ಸಾಹಿತ್ಯದಿಂದ ಸಿಗುವ ಅನುಭವ ಆನಂದವನ್ನು ಗದ್ಯವಾಗಿ ವಿವರಿಸಲಾಗದು. ಪದ್ಯವಾಗಿ ಕಟ್ಟಲಾಗದು. ಅದನ್ನು ಆಸ್ವಾದಿಸಿ, ತಮ್ಮಷ್ಟಕ್ಕೆ ಸಂತೃಪ್ತಿಗೊಂಡು ಪುನೀತ ಭಾವನೆಯಲ್ಲಿ ಮಿಂದೇಳಬೇಕು. ಕಾಟಾಚಾರಕ್ಕಾಗಿ ಓದುವುದಾದರೆ ನಿರ್ಲಿಪ್ತವಾಗಿರುವುದೇ ಲೇಸು. ಸಾಹಿತ್ಯದ ಅನುಭವವೆಂದರೆ “ಓದುವಿಕೆ’. ಇದು ಪ್ರಬಲವಾದಷ್ಟು ಬರೆಯುವಿಕೆ ನಾಜೂಕಾಗುತ್ತದೆ.

ಕತೆ, ಕವನ, ಲೇಖನ, ಪ್ರಬಂಧ, ನಾಟಕ, ಕಾದಂಬರಿ, ಪ್ರವಾಸಕಥನ, ವೈಜ್ಞಾನಿಕ ಕತೆಗಳು, ಸಂಶೋಧನ ಪ್ರಬಂಧ, ವ್ಯಕ್ತಿ ಪರಿಚಯ, ಜೀವನ ಚರಿತ್ರೆ, ಜನಪದ ಕತೆ, ವೈಚಾರಿಕ ಪ್ರಬಂಧಗಳು, ವಿಮಶಾì ಲೇಖನ, ಆತ್ಮಕತೆ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ ಬರೆಹ, ರೂಪಕ, ಗೀತಾಸಾಹಿತ್ಯ ಇತ್ಯಾದಿಯಾಗಿ ಒಟ್ಟಿನಲ್ಲಿ ಗದ್ಯ ಮತ್ತು ಪದ್ಯರೂಪದ ಎಲ್ಲ ಪ್ರಕಾರಗಳನ್ನು ಸಾಹಿತ್ಯ ಸಂಚಿಯಲ್ಲಿ ತುಂಬಿಸಿಕೊಂಡಿದ್ದೇವೆ. ಹುಟ್ಟಿದವರೆಲ್ಲರೂ ಓದುಗರಾಗಬೇಕಿಲ್ಲ. ಓದುಗರೆಲ್ಲರೂ ಸಾಹಿತಿಗಳಾಗ ಬೇಕಿಲ್ಲ. ಒಬ್ಬ ಒಳ್ಳೆಯ ಓದುಗ ಚೆನ್ನಾಗಿ ಮಾತನಾಡಬಲ್ಲ. ಆಳವಾಗಿ ವಿಮರ್ಶಿಸಬಲ್ಲ. ಆದರೆ ಬರೆದು ಸಾಹಿತಿಯಾಗಬೇಕೆಂದಿಲ್ಲ. ಒಳ್ಳೆಯ ಬರೆಹ ಬರೆಯುವ ಸಾಹಿತಿ ಸಾರ್ವಜನಿಕವಾಗಿ ನಿರ್ಭಿಡೆಯಿಂದ ಮಾತನಾಡಲಾಗದೆ ಒದ್ದಾಡುವ ಎಷ್ಟೋ ಸಂದರ್ಭಗಳಿವೆ.

ಕವಿಯಾಗಿ ಅಕ್ಷರಗಳ ಮೂಲಕ ಕಲ್ಪನೆಗಳ ಮಾಲೆ ನೇಯ್ದು ನಮ್ಮನ್ನು ಮನರಂಜಿಸಿದವ ತನ್ನ ಮಾತುಗಳ ಮೂಲಕ ಕಟ್ಟಿಹಾಕಲು ಅಸಮರ್ಥನಾಗಬಹುದು. ಆದರೆ ಬಹುಪಾಲು ಸಾಹಿತಿಗಳು ಒಳ್ಳೆಯ ಮಾತುಗಾರರು ಎಂಬುದು ಸುಳ್ಳಲ್ಲ. ಈ ಎಲ್ಲ ಸಾಹಿತ್ಯದ ಗೀಳು ಹುಟ್ಟಿಕೊಳ್ಳಬೇಕಾದರೆ ನಾವು ಬೆಳೆದು ಬಂದ ಮನೆಯ ಸಂಸ್ಕೃತಿ, ಪರಿಸರ, ಗೆಳೆಯರು ಮತ್ತು ಅವಕಾಶಗಳು ಮುಖ್ಯವಾದ ಕಾರಣಗಳಾಗುತ್ತವೆೆ.

ಬಾಲ್ಯದಲ್ಲಿ ನಾವು ಓದುತ್ತಿದ್ದ ಸಾಹಿತ್ಯಗಳನ್ನು ಒಮ್ಮೆ ನೆನಪಿಸಿಕೊಳ್ಳುವ. ಅಂದು ಓದಿ ಕಲ್ಪನೆಯಲ್ಲಿ ತೇಲಿ ಖುಷಿಪಟ್ಟ ಪುಸ್ತಕಗಳನ್ನು ಮರೆಯಲು ಸಾಧ್ಯವೆ? ಚಂದಮಾಮ, ಬಾಲಮಿತ್ರ, ಪುಟಾಣಿ, ಬಾಲ ಮಂಗಳ, ಇತ್ಯಾದಿ ಪುಸ್ತಕಗಳನ್ನು ಹುಚ್ಚರಂತೆ ಕಾದು ಕುಳಿತು ಓದಿದವರಿದ್ದೇವೆ. ಉಳ್ಳವರ ಮನೆಯಲ್ಲಿದ್ದ ಹಳೆಯ ದಿನಪತ್ರಿಕೆಗಳನ್ನು ತಂದು ಓದಿದ್ದೇವೆ. ಮೆಣಸು, ಅವಲಕ್ಕಿ ಕಟಿxತಂದ ಪೇಪರನ್ನು ಸರಿಯಾಗಿ ಬಿಡಿಸಿ ನೆಲದ ಮೇಲೆ ಬೋರಲಾಗಿ ಬಿದ್ದುಕೊಂಡು ಓದಿದ್ದೇವೆ.

ಬೆಳೆದಂತೆ ಶಾಲಾ ಗ್ರಂಥಾಲಯದಲ್ಲಿ ವೈಚಾರಿಕ ವಿಚಾರಗಳ ಕುರಿತು ಅಥವಾ ಕತೆ ಕಾದಂಬರಿಗಳನ್ನು ಓದಿದ್ದೇವೆ. ಅಂದಿನ ಕಾಲೇಜು ಹೆಣ್ಣುಮಕ್ಕಳಂತೂ ಸಾಯಿಸುತೆ, ತ್ರಿವೇಣಿ, ಮುಕ್ತಾ, ಅನುಪಮಾ ನಿರಂಜನ್‌, ಜಯಲಕ್ಷ್ಮೀ, ಉಷಾ ನವರತ್ನ ರಾವ್‌ ಇವರ ಕಾದಂಬರಿಗಳನ್ನು ನಿ¨ªೆಗೆಟ್ಟು ರಾತ್ರಿಯಿಡೀ ಕುಳಿತು ಓದಿದವರಿ¨ªಾರೆ. ಶಾಲಾ ದಿನಗಳಲ್ಲಿ ಮನೆಯಲ್ಲಿ ಹಿರಿಯರ ಕತೆಗಳನ್ನು ಬಿಟ್ಟ ಕಣ್ಣುಗಳಿಂದ ಮೈಯೆಲ್ಲ ಕಿವಿಯಾಗಿ ಕೇಳಿದವರಿದ್ದೇವೆ. ಭಾಗವತ, ಪುರಾಣ ಪ್ರವಚನ, ಯಕ್ಷಗಾನ, ಹರಿಕಥೆ, ಭಜನೆ ಇವನ್ನೆಲ್ಲ ಕೇಳಿಕೊಂಡು, ಹೇಳಿಕೊಂಡು ಸಾಹಿತ್ಯದ ಆನಂದವನ್ನು ಸವಿದುಕೊಂಡು ಬಂದವರು. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯರು ಕುಣಿದುಕೊಂಡು ಕಲಿಸುತ್ತಿದ್ದ ಧರಣಿಮಂಡಲ…. ವೆಂಬ ಕಥನಕವನ, ಅಭಿನಯ ಗೀತೆಗಳು ನಮ್ಮ ಕಣ್ಣ ಮುಂದೆ ಇನ್ನೂ ಹಸುರಾಗಿವೆ.

ಈಸೋಪನ ಕತೆಗಳು, ರಾಜರಾಣಿಯರ ಕತೆಗಳು, ಜನಪದ ಕತೆಗಳು, ರಾಕ್ಷಸರ ಕತೆಗಳು, ರಾಮಾಯಣ, ಮಹಾಭಾರತದ ಉಪಕತೆಗಳು ನಮ್ಮನ್ನು ಅಲೌಕಿಕ ಪ್ರಪಂಚದೆಡೆ ಕೊಂಡೊಯ್ಯುತ್ತಿತ್ತು. ನೋಡಿದ ನಾಟಕ, ಯಕ್ಷಗಾನ ಕೇಳಿದ ಕತೆಗಳ ಪಾತ್ರವಾಗಿ ನಮ್ಮಷ್ಟಕ್ಕೇ ಪರಕಾಯ ಪ್ರವೇಶ ಮಾಡಿ ಪಾತ್ರಧಾರಿಗಳು ನಾವೇ ಆದ ಒಂದು ಮುಗ್ಧ ಮನಸ್ಸು ನಮ್ಮ ನೆನಪಿನ ಬುತ್ತಿಯಲ್ಲಿ ಇಲ್ಲವೆ? ಎಲ್ಲ ಮಕ್ಕಳಿಗೂ ಈ ಸುಖವಿತ್ತೆ? ಎಲ್ಲರಿಗೂ ಕತೆ, ಪುಸ್ತಕಗಳು ತಂದು ಕೊಡುವ, ನಾಟಕಗಳಿಗೆ ಕರೆದು ಕೊಂಡು ಹೋಗುವವರು, ಅಜ್ಜಿಕತೆಗಳನ್ನು ಹೇಳಿಕೊಡುವ ಹಿರಿಯರು, ಭಜನೆ ಕಲಿಸಿದ ಪೋಷಕರು ಇರುವರೆ? ಇರುವುದು ಹೌದಾದರೆ ನಾವು ಸಾಹಿತ್ಯಾತ್ಮಕವಾಗಿ ಆ ಮಕ್ಕಳನ್ನು ಅಣಿಮಾಡುತ್ತಿದ್ದೇವೆ ಎಂದರ್ಥ.

ಹದಗೊಂಡ ನೆಲದಲ್ಲಷ್ಟೇ ಬಿತ್ತನೆ ಫ‌ಲಿತವಾಗಬಹುದು. ಮಗುವಿಗೆ ಕತೆ, ನಾಟಕ ಇತ್ಯಾದಿ ವಿಚಾರಗಳ ಬಗ್ಗೆ ಪುಸ್ತಕ ತೆಗೆದುಕೊಡುವ ಎಷ್ಟು ಪೋಷಕರಿದ್ದಾರೆ? ಹೆಚ್ಚಿನವರು ಜಾತ್ರೆ, ಸಮ್ಮೇಳನಗಳಿಗೆ ಹೋಗಿ ಮಕ್ಕಳಿಗೆ ಚರುಮುರಿ, ಗೋಬಿ ಮಂಚೂರಿ, ಆಟದ ಸಾಮಗ್ರಿಗಳನ್ನು ಮಾತ್ರ ತೆಗೆದುಕೊಡುತ್ತಾರೆ. ಮನೋರಂಜನೆಗೆ ತಿರುಗುವ ಗಾಲಿಯ ಮೋಜು ಮಾಡಿಸುತ್ತಾರೆಯೇ ಹೊರತು ಪುಸ್ತಕದ ಮಳಿಗೆಯಿಂದ ಒಂದೆರಡು ಪುಸ್ತಕಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಅಂದು ಮಕ್ಕಳಿಗೆ ಬೇಕಾಗುವ ನೀತಿಕತೆಗಳು, ವೀರರ, ಸಾಧಕರ ಪರಿಚಯದ ಪುಸ್ತಕ, ಪಂಚ ತಂತ್ರದ, ವಿಕ್ರಮ ಬೇತಾಳರ ಕತೆಗಳು, ಆಲಿಬಾಬ ಮತ್ತು ನಲ್ವತ್ತು ಕಳ್ಳರು, ಅಕºರ್‌ ಬೀರಬಲ್ಲರ, ತೆನಾಲಿ ರಾಮಕೃಷ್ಣನ ಕತೆಗಳು ಇವೆಲ್ಲವನ್ನೂ ಓದಿಕೊಂಡು ಬೆಳೆದವರೇ ಬಹುಶಃ ಇಂದು ಸಾಹಿತ್ಯದ ಮನೋಭಾವವನ್ನು ಬೆಳೆಸಿಕೊಂಡು ಸಾಹಿತಿಗಳು ಎನಿಸಿಕೊಂಡಿದ್ದಾರೆ.

ಆದರೆ ಇಂದಿನ ಮಕ್ಕಳಿಗೆ ಈ ಸಂಸ್ಕೃತಿಯ ಪರಿಚಯ ಇದೆಯೆ? ಜಾತ್ರೆಗೆ ಕರೆದೊಯ್ಯಲು ಪೋಷಕರಿಗೆ ಸಮಯವಿಲ್ಲ. ಟಿ.ವಿ. ಧಾರಾವಾಹಿಗಳ ಬಲೆಯಲ್ಲಿ ಕೆಲವು ತಾಯಂದಿರು ಇದ್ದರೆ ಉದ್ಯೋಗದ ಒತ್ತಡದಲ್ಲಿ ಇನ್ನು ಕೆಲವರು. ಹಾಗಂತ ಎಲ್ಲರೂ ಹೀಗೆಯೇ ಎನ್ನಲಾಗದು. ಎಲ್ಲ ಸಮಯವನ್ನು ಇತ್ತೀಚಿನ 3-4 ದಶಕಗಳಿಂದ ಟಿ.ವಿ. ಎಂಬ ಮಾಯಾಪೆಟ್ಟಿಗೆ ನುಂಗಿಬಿಡುತ್ತಿತ್ತು. ಬಾಲ್ಯವೆಲ್ಲ ಈ ಟಿ.ವಿ. ಯ ಮುಂದೆ ಕಳೆದು ಹೋಗುತ್ತಿತ್ತು. ದಶಕದಿಂದೀಚೆಗೆ ಮೊಬೈಲ್‌ ಎಂಬ ಭೂತ ಮಕ್ಕಳ ಸಮಯವನ್ನು ಸ್ವಲ್ಪಮಟ್ಟಿಗೆ ಕಸಿದುಕೊಂಡಿದ್ದರೆ, ಇತ್ತೀಚಿನ ನಾಲ್ಕೈದು ವರ್ಷಗಳಿಂದ ಮೊಬೈಲ್‌ನ ಗುಲಾಮರೇ ಆಗಿ ಬಿಡುವಷ್ಟು ಮಕ್ಕಳ ಬಾಲ್ಯ ಹರಿದು ಛಿದ್ರವಾಗುತ್ತಿದೆ.

ಪೋಷಕರಾಗಿ, ಬಂಧುಗಳಾಗಿ, ಆಪ್ತರಾಗಿ, ಶಿಕ್ಷಕರಾಗಿ ಮಕ್ಕಳಿಗೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವಲ್ಲಿ ನಮ್ಮ ಪಾತ್ರವಿದೆ. ನಮ್ಮ ಮನೆಯ ಮಕ್ಕಳಿಗೆ ಮತ್ತೆ ಹಿಂದಿನ ಕಾಲದ ಕಥಾ ಪ್ರಪಂಚಕ್ಕೆ ಅವಕಾಶ ಮಾಡಿಕೊಡೋಣ ಅದರೊಂದಿಗೆ ಜನಪದ ಸಾಹಿತ್ಯದ ಅರಿವನ್ನೂ ತೆರೆದಿಡಬೇಕಾಗಿದೆ. ನಾವೂ ಮಕ್ಕಳೊಡನೆ ಸಾಹಿತ್ಯವನ್ನು ಓದುವ ಅಭ್ಯಾಸ ಬೆಳೆಸಿಕೊಂಡಾಗ ಮಕ್ಕಳೂ ನಮ್ಮನ್ನು ಅನುಸರಿಸುವುದು ಖಂಡಿತ. ಒಂದಷ್ಟು ಪುಸ್ತಕಗಳು, ಕತೆ, ಕವನ, ನಾಟಕ ಇತ್ಯಾದಿ ಪುಸ್ತಕಗಳು ಮಕ್ಕಳಿಗೆ ಕೈಗೆ ಸಿಗುವಂತಿರಲಿ. ಪುಟ ತಿರುಗಿಸುವಾಗಲಾದರೂ ಮಕ್ಕಳಿಗೆ ಓದುವ ಆಸಕ್ತಿ ಹುಟ್ಟಬಹುದು. ಪುಸ್ತಕ ಖರೀದಿಸಿ ಚಂದದ ಶೋಕೇಸಿನೊಳಗೆ ಭದ್ರವಾಗಿ ಅಲಂಕಾರಕ್ಕೆ ಇಟ್ಟು, ನಾವು ಕಲಿತವರು, ಬುದ್ಧಿಜೀವಿಗಳು ಅನಿಸಿಕೊಂಡು ಪ್ರದರ್ಶನಕ್ಕಾಗಿ ಇಟ್ಟವರೂ ಇದ್ದಾರೆ. ಅಂತಹ ಶೋಕಿಯಿಂದ ಸಾಹಿತ್ಯದ ಅಭಿರುಚಿ ಖಂಡಿತ ಉಂಟಾಗದು.

ಮನೆಯಲ್ಲಿಯೇ ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿ ಕೊಳ್ಳಲು ಪುಟ್ಟ ಗ್ರಂಥಾಲಯವನ್ನು ಮನೆಯಲ್ಲಿಯೇ ಮಾಡಿ ಓದಲು ಅವಕಾಶಮಾಡಿ ಕೊಡುವ. ಪ್ರವಾಸಕ್ಕೆ ಹೋದಲ್ಲಿಂದ ಮಕ್ಕಳಿಗೆ ಪುಸ್ತಕಗಳು ಕಾಣಿಕೆಯಾಗಿ ಬರಲಿ. ಪುಸ್ತಕವೇ ನಮ್ಮ ಗೆಳೆಯ ಎಂಬ ಭಾವನೆ ಮಕ್ಕಳಿಗೆ ಉಂಟಾಗಲಿ. ಹುಟ್ಟುಹಬ್ಬ ಅಥವಾ ಯಾವುದೇ ಸಾಧನೆಗಳ ಅಭಿನಂದನೆಗಳಿಗೆ ಪುಸ್ತಕಗಳೇ ಉಡುಗೊರೆಗಳಾಗಲಿ. ಇಂದಿನ ಮಕ್ಕಳೊಳಗೆ ಒಬ್ಬ ಸಾಹಿತಿ ಇದ್ದರೆ ಅವನನ್ನು ಬೆಳಕಿಗೆ ತರುವ ಜವಾಬ್ದಾರಿ ನಮ್ಮದಾಗಲಿ. ಕೇವಲ ಅಂಕದ ವಿದ್ಯಾರ್ಥಿಯಾಗದೆ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುವ ವಿವೇಕದ, ಸಾಹಿತ್ಯ ಮನೋಭಾವದ ಮಕ್ಕಳು ಮುಂದಿನ ದಿನಗಳಲ್ಲಿ ಬೆಳೆದುಬರಲಿ.

– ವಿಜಯಲಕ್ಷ್ಮೀ ಕಟೀಲು

ಟಾಪ್ ನ್ಯೂಸ್

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

121

Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.