ಆಪತ್ಕಾಲದಲ್ಲಿ ಒದಗಿದ ಜೀವರಕ್ಷಕ ಆ್ಯಂಬುಲೆನ್ಸ್
ಕರ್ಣಾಟಕ ಬ್ಯಾಂಕ್ ನೆರವು
Team Udayavani, Apr 28, 2020, 5:45 AM IST
ಮಂಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆ ಸಂದರ್ಭ ಬಂದ ಸಿಡಿಲಿಗೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಗ್ರಾಮವೊಂದರಲ್ಲಿ ತಮಿಳುನಾಡು ಮೂಲದ ಧರ್ಮಪುರಿಯ ಮೂವರು ಕೂಲಿಕಾರ್ಮಿಕರು ಮೃತಪಟ್ಟರು. ಅನಾಥ ಶವಗಳ ಅಂತ್ಯಸಂಸ್ಕಾರವನ್ನು ನಡೆಸಲು ಕೋವಿಡ್ 19 ಕಾರಣದಿಂದ ಸಾಧ್ಯವಾಗಿರಲಿಲ್ಲ. ಈ ಆಪತ್ಕಾಲದಲ್ಲಿ ಉಪಯೋಗಕ್ಕೆ ಬಂದದ್ದು ಕರ್ಣಾಟಕ ಬ್ಯಾಂಕಿನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಕಳಸದ “ಕಾವೇರಿ ಮೆಮೋರಿಯಲ್ ಆಸ್ಪತ್ರೆಗೆ’ ನೀಡಿದ ಜೀವರಕ್ಷಕ ಉಪಕರಣಗಳನ್ನು ಹೊಂದಿದ ಆ್ಯಂಬುಲೆನ್ಸ್.
ಈ ಆ್ಯಂಬುಲೆನ್ಸ್ ಎರಡು ಹೊದಿಕೆಗಳ ಸಂಪೂರ್ಣ ಸುರಕ್ಷಾ ಕವಚಗಳನ್ನು ಹೊಂದಿದ್ದು, ಚಾಲಕನಿರುವ ಜಾಗ ಹಾಗೂ ರೋಗಿಗಳನ್ನು ಸಾಗಿಸುವ ಭಾಗ ಸಂಪೂರ್ಣ ಏರ್‌ಟೈಟ್ ಕ್ಯಾಬಿನ್‌ಗಳಾಗಿದ್ದು,ಚಾಲಕನಿಗೆ ರೋಗಿಯ ಸೋಂಕು ತಗಲುವ ಭಯವಿಲ್ಲ.
ಈ ವಾಹನವನ್ನು ಆಪತ್ಕಾಲದಲ್ಲಿ ಬಳಸಿಕೊಳ್ಳಬಹುದೆಂಬ ವಿಚಾರ ಹೊಳೆದುದು ಕಾವೇರಿ ಮೆಮೋರಿಯಲ್ ಆಸ್ಪತ್ರೆಯ ವೈದ್ಯ ಡಾ| ವಿಕ್ರಮ ಪ್ರಭು ಅವರಿಗೆ. ಅಗತ್ಯ ದಾಖಲೆಗಳೊಂದಿಗೆ ತಮಿಳುನಾಡು ಮೂಲದ ಚಾಲಕ ಮಣಿ ಅವರು 450 ಕಿ.ಮೀ. ದೂರದ ಧರ್ಮಪುರಿಗೆ ಆ್ಯಂಬು
ಲೆನ್ಸ್ ಚಾಲನೆಗೆ ಸಿದ್ಧರಾದರು. ಬೆಳಗ್ಗೆ 10 ಗಂಟೆಗೆ ಹೊರಟ ವಾಹನ ಧರ್ಮಪುರಿ ತಲುಪಿದ್ದು ಮಾರನೆಯ ದಿನ ಮುಂಜಾವ 4 ಗಂಟೆಗೆ. ಕೇವಲ ನಾಲ್ಕೇ ನಿಮಿಷಗಳಲ್ಲಿ ಶವಗಳನ್ನಿಳಿಸಿ ವಾಪಸು ಹೊರಟ ಮಣಿ ಆ್ಯಂಬುಲೆನ್ಸ್‌ನ ಕ್ಯಾಬಿನ್‌ನಿಂದ ಹೊರಗೆ ಇಳಿಯಲೇ ಇಲ್ಲ. ಮಾರನೇ ದಿನ ಕಳಸಕ್ಕೆ ಬಂದು ತಲುಪಿದಾಗ ಅಪರಾಹ್ನ 3 ಗಂಟೆಯಾಗಿತ್ತು. ತತ್‌ಕ್ಷಣವೇ ವಾಹನವನ್ನು ತೊಳೆದು ಶುದ್ಧಗೊಳಿಸಿ, ಔಷಧ ಸಿಂಪಡಿಸಿ ಪ್ಯುಮಿಗೇಷನ್ ಮಾಡಲಾಯಿತು ಎಂದು ಡಾ| ವಿಕ್ರಮ ಪ್ರಭು ತಿಳಿಸುತ್ತಾರೆ.
ಈ ಆ್ಯಂಬುಲೆನ್ಸನ್ನು ಎಂಆರ್‌ಪಿಎಲ್ ಸಂಸ್ಥೆ ದಾನ ಮಾಡಿದ್ದು, ಸುಮಾರು 12 ಲಕ್ಷ ರೂ. ಮೊತ್ತದ ವಿಶೇಷ ಜೀವರಕ್ಷಕ ಉಪಕರಣಗಳನ್ನು ಕರ್ಣಾಟಕ ಬ್ಯಾಂಕ್ ನೀಡಿತ್ತು. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇದು ಏಕೈಕ ವಿಶೇಷ ಜೀವರಕ್ಷಕ ಉಪಕರಣಗಳುಳ್ಳ ವಾಹನವಾಗಿದೆ.
ಕಳಸದ ಡಾ| ವಿಕ್ರಮ ಪ್ರಭು ಅವರಿಂದ ಈ ವಿಷಯ ತಿಳಿದು ನಾನು ಮೂಕವಿಸ್ಮಿತನಾದೆ. ನಮ್ಮ ಬ್ಯಾಂಕಿನ ಸಾಂಸ್ಥಿಕ ಜವಾಬ್ದಾರಿಯ ಸೌಲಭ್ಯಗಳು ಸಂಕಷ್ಟದ ಸನ್ನಿವೇಶದಲ್ಲೂ ಸ್ಥಳೀಯವಾಗಿ ಸದುಪಯೋಗ ಆಗುತ್ತಿರುವ ಸುದ್ದಿಗಳು ನಮ್ಮನ್ನು ಪುಳಕಿತಗೊಳಿಸುವುದರೊಂದಿಗೆ ಈ ಮಾರ್ಗದಲ್ಲಿ ಇನ್ನಷ್ಟು ಉತ್ಸಾಹದಿಂದ ಮುನ್ನಡೆಯಲು ಪ್ರೇರಣೆಯಾಗುತ್ತದೆ.
– ಮಹಾಬಲೇಶ್ವರ ಎಂ.ಎಸ್.,
ಕರ್ಣಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.