ಕಾಪು ಲೈಟ್‌ ಹೌಸ್‌ ಬಗ್ಗೆ ನಿಮಗೆಷ್ಟು ಗೊತ್ತು ? ದೀಪಸ್ತಂಭಗಳ ಬಗ್ಗೆ ಕುತೂಹಲಕರ ಮಾಹಿತಿ…


ದಿನೇಶ ಎಂ, Nov 27, 2022, 5:39 PM IST

lighthouse web exclusive dm

ಕಡಲಿನ ಅತ್ಯಂತ ಸುಂದರ ನೋಟವನ್ನು ದೀಪಸ್ತಂಭದ ಅಂಕುಡೊಂಕಾದ ಮೆಟ್ಟಿಲುಗಳನ್ನು ಹತ್ತಿ ನೋಡುವುದೇ ವಿಶೇಷ ಅನುಭವ ಮತ್ತು ಆ ಪಕ್ಷಿ ನೋಟದಿಂದ ನಮ್ಮ ಮನಸ್ಸಿಗೆ ಸಂತೋಷದ ರೆಕ್ಕೆ ಬಂದು ಹಾರಾಡುವುದಂತೂ ನಿಜ.

ದೀಪಸ್ಥಂಭಗಳು ಹಡಗುಗಳಿಗೆ ಸಂಚಾರಕ್ಕೆ ಸಹಾಯ ಮಾಡಲು ನಿರ್ಮಿಸಲಾಗುತ್ತದೆ. ಆಧುನಿಕ ತಂತ್ರಜ್ಞಾನಗಳ ಅನ್ವೇಷಣೆಗಳಿಂದಾಗಿ ಅವು ಸ್ವಲ್ಪ ಹಳೆಯದಾಗಿಕಂಡರೂ, ದೀಪಸ್ತಂಭಗಳು ಇನ್ನೂ ಪ್ರಮುಖವಾದುದಾಗಿದೆ. ಅನೇಕ ದೀಪಸ್ತಂಭಗಳು ಸಾರ್ವಜನಿಕರಿಗೆ ಅವಕಾಶ ನೀಡುವುದರಿಂದ, ಇದು ಬೀಚ್ ಪ್ರವಾಸೋದ್ಯಮದ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ನಾವು ಮರದ ಸುಡುವ ಬೆಳಕಿನಿಂದ ಲೈಟ್‌ಹೌಸ್‌ಗಳಲ್ಲಿ ಬಳಸುವ ಲೇಸರ್ ದೀಪಗಳವರೆಗೆ ಬಹಳ ಅಭಿವೃದ್ದಿಯನ್ನು ಹೊಂದಿದ್ದೇವೆ. ಈ ದೀಪಸ್ತಂಭಗಳು ಇಂದು, ಪ್ರಾಚೀನ ಕಾಲದಲ್ಲಿ ಸೇವೆ ಸಲ್ಲಿಸಿರುವ ಇತಿಹಾಸವನ್ನು ಹೊಂದಿವೆ. ವಾಣಿಜ್ಯ ಅಥವಾ ಯಾವುದೇ ಉದ್ದೇಶದ ಹಡಗು ಮತ್ತು ಹಿಂದಿನ ಹಾಯಿ ದೋಣಿಗಳಿಗೆ ದಾರಿ, ದಿಕ್ಕುಗಳನ್ನು ತೋರಿದ ಭಾರತದಲ್ಲಿನ ಐತಿಹಾಸಿಕ ನಿರ್ಮಾಣಗಳೇ ಈ ಜನಪ್ರಿಯ ಲೈಟ್‌ಹೌಸ್‌ಗಳು.

ಕಾಪು ಬೀಚ್ ದೀಪಸ್ತಂಭ: ಉಡುಪಿ ಜಿಲ್ಲೆಯ ಕಾಪು ಪ್ರದೇಶದಲ್ಲಿರುವ ಕಾಪು ಬೀಚ್, ಇದು ಕರ್ನಾಟಕದ ಅತ್ಯಂತ ಅಗ್ರಮಾನ್ಯ ಬೀಚ್ ಗಳಲ್ಲೊಂದಾಗಿದೆ. ಕಾಪು ದೀಪಸ್ತಂಭವು ಸುಮಾರು 100 ಮೆಟ್ಟಿಲುಗಳನ್ನು ಹತ್ತಿದ ನಂತರ, ನಾವು ಈ ದೀಪಸ್ತಂಭದ ಮೇಲ್ಭಾಗವನ್ನು ತಲುಪಬಹುದು. ಇಲ್ಲಿಂದ ಕಾಪು ಬೀಚ್ ನಲ್ಲಿರುವ ಕಲ್ಲಿನಿಂದ ಕೂಡಿದ ಹಲವಾರು ರಚನೆಗಳ ಜೊತೆಗೆ ಸುಂದರವಾದ ಸಮುದ್ರದ ನೋಟವನ್ನು ನೋಡಬಹುದಾಗಿದೆ. ಲೈಟ್‌ಹೌಸ್‌ನ ಕೆಳಭಾಗದಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಬೇಕು.

ಕಾಪು ದೀಪಸ್ತಂಭವನ್ನು 1901 ರಲ್ಲಿ ನಿರ್ಮಿಸಲಾಯಿತು. ಬಂಡೆಯ ಮೇಲೆ ನಿರ್ಮಿಸಲಾಗಿರುವ ಈ ದೀಪ ಸ್ಥ೦ಭ ಶತಮಾನ ಕಳೆದರೂ ಸುಭದ್ರವಾಗಿ ನಿಂತಿದೆ ಪೂರ್ವಜರ ನಿರ್ಮಾಣ ಕೌಶಲ್ಯಗಳ ಹಿರಿಮೆಯನ್ನು ಸಾರುತ್ತಿದೆ. ಹಿಂದಿನ ಕಾಲದಲ್ಲಿ ಉಪಗ್ರಹ ಆಧಾರಿತ ತಂತ್ರಜ್ಞಾನ ಮತ್ತು ಮಾರ್ಗದರ್ಶಕ ಇರಲಿಲ್ಲವಾದ್ದರಿಂದ ತೀರದಲ್ಲಿರುವ ದೀಪ ಸ್ಥ೦ಭಗಳು ಹಡಗಿನ ನಾವಿಕರಿಗೆ ದಾರಿ ದೀಪವಾಗಿದ್ದವು. ಈಗ ಇದು ಪ್ರವಾಸಿ ಆಕರ್ಷಣೆಯಾಗಿದ್ದು, ಕಾಪು ದೀಪಸ್ತಂಭ ಪ್ರತಿದಿನ ಸಂಜೆ 4 ರಿಂದ ಸಂಜೆ 6 ರವರೆಗೆ ಪ್ರವಾಸಿಗರಿಗೆ ತೆರೆದಿರುತ್ತದೆ.

ಕಾಪು ಕಡಲ ತೀರದಲ್ಲಿ ಇರುವ ಲೈಟ್‌ ಹೌಸ್ ಬ್ರಿಟಿಷ್ ಆಡಳಿತ ಕಾಲದಲ್ಲಿ ನಿರ್ಮಾಣಗೊಂಡಿತ್ತು. ಸೀಮೆ ಎಣ್ಣೆಯಿಂದ ಬೆಳಗುವ ಪಿಸ್ ಹೊಳಪಿನ ದೀಪದಿಂದ ಆರಂಬಿಸಿ ಈಗಿನ ವಿದ್ಯುತ್ ದೀಪದ ವರೆಗೆ ತನ್ನ ಸೌಂದರ್ಯದ ಜೊತೆಗೆ ಐತಿಹಾಸಿಕ ಕ್ಷಣಗಳಿಗೆ, ಹಳೇಯ ಪೂರ್ವಜರ ಜೀವನ ಕ್ರಮಗಳಿಗೆ ಸಾಕ್ಷಿಯಾಗಿದೆ. ಸಮುದ್ರ ಮಟ್ಟದಿಂದ 21 ಮೀ ಎತ್ತರದ ಏಕ ಶಿಲೆಯ ಮೇಲೆ ನಿರ್ಮಾಣಗೊಂಡಿರುವ ಕಾಪು ದೀಪ ಸ್ಥ೦ಭ 27 ಮೀಟರ್ ಎತ್ತರವಿದೆ.

ಭಾರತದ ಇತರ ಪ್ರಮುಖ ಲೈಟ್‌ ಹೌಸ್‌ ಗಳು ಕೂಡ ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುತ್ತಿವೆ, ಅಂತಹ ಪ್ರಮುಖ ಲೈಟ್‌ ಹೌಸ್‌ ಗಳು ವಿಝಿಂಜಂ ಲೈಟ್ ಹೌಸ್, ಮಹಾಬಲಿಪುರಂ ಲೈಟ್ ಹೌಸ್, ತಂಗಸ್ಸೆರಿ ದೀಪಸ್ತಂಭಗಳಾಗಿವೆ.

ವಿಝಿಂಜಂ ಲೈಟ್ ಹೌಸ್ : ಕೋವಲಂ ನ ವಿಝಿಂಜಂ ದೀಪಸ್ತಂಭವು ಕೇರಳದ ಅತ್ಯಂತ ಹಳೆಯ ದೀಪಸ್ತಂಭಗಳಲ್ಲೊಂದಾಗಿದೆ. 18 ಮತ್ತು 19ನೇ ಶತಮಾನಗಳಲ್ಲಿ ವಿಝಿಂಜಂ ಅತ್ಯಂತ ಹೆಚ್ಚು ಕಾರ್ಯನಿರತವಾಗಿದ್ದ ಬಂದರಾಗಿತ್ತು ಆದುದರಿಂದ ಇಲ್ಲಿ ದೀಪಸ್ತಂಭವನ್ನು ನಿರ್ಮಿಸಲಾಗಿದೆ. ಇಂದು ಈ ದೀಪಸ್ತಂಭವು ಕೇರಳದ ಕೋವಲಂ ಬೀಚ್ ನ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ.

ಮಹಾಬಲಿಪುರಂ ಲೈಟ್ ಹೌಸ್:  ಮಹಾಬಲಿಪುರಂ ದೀಪಸ್ತಂಭವು ಕಲ್ಲಿನಲ್ಲಿ ರಚಿತವಾದ ರಚನೆಯಾಗಿದ್ದು ಇದನ್ನು ವಸಾಹತು ಶಾಯಿಗಳ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಯಿತು. ಇದನ್ನು ಪಲ್ಲವ ರಾಜ ಮಹೇಂದ್ರ ಪಲ್ಲವ ನಿರ್ಮಿಸಿದ ಪ್ರಾಚೀನ ದೀಪಸ್ತಂಭದ ಪಕ್ಕದಲ್ಲಿ ನಿರ್ಮಿಸಲಾಗಿದೆ. ಇದು ಭಾರತದ ರಾಜರ ದೂರದೃಷ್ಟಿಯನ್ನು ತೋರಿಸುತ್ತದೆ.

ತಂಗಸ್ಸೆರಿ ದೀಪಸ್ತಂಭ:  ತಂಗಸ್ಸೆರಿ ದೀಪಸ್ತಂಭವನ್ನು ಕೊಲ್ಲಂನ ತಂಗಸ್ಸೆರಿಯಲ್ಲಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟಿದೆ. ಈ ದೀಪಸ್ತಂಭವು ಕೇರಳದ ಅತ್ಯಂತ ಎತ್ತರದ ದೀಪಸ್ತಂಭವೆನಿಸಿದೆ.

ಫ಼ೋರ್ಟ್ ಅಗುಡಾ, ದೀಪಸ್ತಂಭ: ಗೋವಾದ ಪೋರ್ಟ್ ಅಗುಡಾ ಪೋರ್ಚುಗೀಸರ ವಾಸ್ತುಶಿಲ್ಪಗಳಲ್ಲೊಂದಾಗಿದೆ. ಇದು ಗೋವಾ ಸಿಂಕ್ವೇರಿಯಂ ಬೀಚ್ ನ ಪ್ರಮುಖ ಆಕರ್ಷಣೆಯಾಗಿದೆ.

ದೀಪಸ್ಥಂಭಗಳು ಈಗ ಪ್ರವಾಸಿ ತಾಣಗಳಾಗಿ ಗುರುತಿಸಿಕೊಂಡರೂ, ಒಂದೊಮ್ಮೆ ಹಲವರ ಜೀವನಕ್ಕೆ, ಜೀವನಕ್ರಮಗಳಿಗೆ ದಾರಿ ತೋರಿದ ಬೆಳಕು ಅದು. ಸಮುದ್ರದ ಏರಿಳಿತಗಳ ಮಧ್ಯೆ ಕೇವಲ ಅನುಭವಗಳ ಮೇಲೆ ದಿಕ್ಕು ಕಂಡುಕೊಳ್ಳುತ್ತಿದ್ದ ಕಾಲದಲ್ಲಿ ದಡ ಸೇರಲು, ದಿಕ್ಕುಗಳನ್ನು ಅರಿಯಲು ಗುರುವಾಗಿ, ದಾರಿದೀಪವಾಗಿ ಭರವಸೆಯ ಬೆಳಕಾಗಿದ್ದದ್ದು ಇದೇ ದೀಪಸ್ತಂಭಗಳು.

ಟಾಪ್ ನ್ಯೂಸ್

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿಯಲ್ಲ, ಕಾಡು ಬೆಕ್ಕಿನ ದಾಳಿ: ವ್ಯಕ್ತಿಗೆ ಗಂಭೀರ ಗಾಯ

Laxmi-Heebalakar1

ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್‌ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ

Kalaburagi-Acci

Kalaburagi: ಟಿಟಿ ಟಯರ್‌ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

de

Mangaluru: ಅಪರಿಚಿತ ವ್ಯಕ್ತಿ ಸಾವು

arest

Kundapura: ಅಂಬರ್‌ ಗ್ರೀಸ್‌ ಮಾರಾಟ ಪ್ರಕರಣ; ಮತ್ತೋರ್ವ ಆರೋಪಿಯ ಬಂಧನ

Mudhola

Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ

7

Kasaragod: ಅಂಗಡಿಗೆ ನುಗ್ಗಿದ ಕಾಡು ಹಂದಿ

5

Kadaba: ಮೇಯಲು ಬಿಟ್ಟ ದನದ ಕಾಲು ಕಡಿದ ವ್ಯಕ್ತಿ; ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.