ಉಷ್ಣಹವೆಗೆ 700ಕ್ಕೂ ಅಧಿಕ ಸಾವು : ಕೊಲಂಬಿಯಾ ಪ್ರಾಂತ್ಯದ ಲಿಟ್ಟೆನ್ ಹಳ್ಳಿ ಭಸ್ಮ
Team Udayavani, Jul 4, 2021, 7:15 AM IST
ಟೊರಂಟೊ: ಬಿಸಿಗಾಳಿಯ ಪ್ರಭಾವಕ್ಕೆ ಕೆನಡಾದಲ್ಲಿ ಒಂದು ವಾರದ ಅವಧಿಯಲ್ಲಿ 719ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ.
ಇದರ ಜತೆಗೆ ಪೆಸಿಫಿಕ್ ವಲಯದ ವಾಯವ್ಯ ಭಾಗದಲ್ಲಿ ಹಲವು ದಿನಗಳಿಂದ ಬಿಸಿಗಾಳಿಯ ಪ್ರಕೋಪ ಹೆಚ್ಚಾಗಿದ್ದು, ಈ ಪೈಕಿ, ಕೆನಡಾದಲ್ಲಿ ಅತ್ಯಂತ ಹೆಚ್ಚು ಪ್ರತಿಕೂಲ ಪರಿಣಾಮ ಉಂಟಾಗಿದೆ. ಅದರ ತೀವ್ರತೆ ಎಷ್ಟಿದೆ ಎಂದರೆ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಲಿಟ್ಟೆನ್ ಎಂಬ ಹಳ್ಳಿ ನೋಡನೋಡುತ್ತಿದ್ದಂತೆ ಕಾಡ್ಗಿಚ್ಚಿಗೆ ಆಹುತಿಯಾಗಿದೆ.
ಲಿಟ್ಟೆನ್ ಬಳಿಯ ಅರಣ್ಯದಲ್ಲಿ ಕಾಣಿಸಿಕೊಂಡ ಬೆಂಕಿ, ಕೇವಲ 15 ನಿಮಿಷಗಳಲ್ಲಿ ಹಳ್ಳಿಯನ್ನು ತಲುಪಿತು. ಅಲ್ಲಿದ್ದ, 250 ಮನೆಗಳಿದ್ದ ನಿವಾಸಿಗಳು, ತಮ್ಮ ಅತ್ಯವಶ್ಯ ವಸ್ತುಗಳನ್ನೂ ಕೈಗೆತ್ತಿಕೊಳ್ಳದೆ ತಮ್ಮ ಮನೆಗಳಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಒಂದೇ ದಿನ, ಕೆನಡಾದ ಅರಣ್ಯ ಪ್ರದೇಶಗಳ ನಾನಾ ಸ್ಥಳಗಳಲ್ಲಿ ಸುಮಾರು 12,000 ಸಿಡಿಲುಗಳು ಬಡಿದು 150 ಸ್ಥಳಗಳಲ್ಲಿ ಕಾಳಿYಚ್ಚು ಕಾಣಿಸಿಕೊಂಡಿದೆ. ಇದರಿಂದ ಹೊತ್ತಿಕೊಂಡಿ ರುವ ಬೆಂಕಿಯಿಂದ ಬ್ರಿಟಿಷ್ ಕೊಲಂಬಿಯಾ ಹಾಗೂ ಇನ್ನಿತರ ಪ್ರಾಂತ್ಯಗಳಲ್ಲಿ ವಾತಾವರಣ ಉಷ್ಣಾಂಶ 49.6 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತೆಂದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಅಲ್ಲಲ್ಲಿ ಬಿಸಿಗಾಳಿ
ಉತ್ತರ ಭಾರತದ ಹಲವು ಕಡೆ, ಉಷ್ಣ ಹವೆ ಬೀಸುತ್ತಿದ್ದು, ಹರಿಯಾಣ ಮುಂತಾದ ಕಡೆ ಶುಕ್ರವಾರ-ಶನಿವಾರಗಳಂದು ಸಾಮಾನ್ಯ ದಿನದ ಉಷ್ಣಾಂಶ 3ರಿಂದ 4 ಡಿಗ್ರಿ ಏರಿಕೆಯಾಗಿ ತ್ತೆಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಜು. 1-2ರಂದು ಪಶ್ಚಿಮದ ರಾಜ್ಯಗಳ ಕೆಲವೆಡೆ ಉಷ್ಣಹವೆ ಆವರಿಸುವುದಾಗಿ ಇಲಾಖೆ ಮೊದಲೇ ಎಚ್ಚರಿಸಿತ್ತು. “ಮೊದಲೇ ತಿಳಿಸಿದಂತೆ ಹರಿಯಾಣ, ಪಂಜಾಬ್, ದಿಲ್ಲಿ ಹಾಗೂ ಉತ್ತರ ಪ್ರದೇಶದ ಪಶ್ಚಿಮ ಭಾಗದ ಕೆಲವು ಸ್ಥಳಗಳಲ್ಲಿ ಉಷ್ಣಹವೆ ಸಂಚಾರವಾಗಿದೆ’ ಎಂದು ಐಎಂಡಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.