Live-in ಗೆಳತಿ ಸರಸ್ವತಿ ವೈದ್ಯ ಹತ್ಯೆ ಪ್ರಕರಣ: ಆರೋಪಿಗೆ ಅಶ್ಲೀಲ ಚಿತ್ರ ವೀಕ್ಷಣೆ ಹುಚ್ಚು!
ಮೃತದೇಹ ಕೆಡದಂತೆ ಇಡುವ ಕುರಿತು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದ ಮನೋಜ್
Team Udayavani, Jun 11, 2023, 7:10 AM IST
ಥಾಣೆ: ತನ್ನ 32 ವರ್ಷದ ಲಿವ್ ಇನ್ ಗೆಳತಿ ಸರಸ್ವತಿ ವೈದ್ಯ ಅವರನ್ನು ಹತ್ಯೆ ಮಾಡಿ, ಕತ್ತರಿಸಿ, ಕುಕ್ಕರ್‌ನಲ್ಲಿ ಬೇಯಿಸಿ, ಬೀದಿ ನಾಯಿಗಳಿಗೆ ಹಂಚಿದ್ದ ಆರೋಪಿ ಮನೋಜ್ ರಮೇಶ್ ಸಾಣೆಗೆ ಅಶ್ಲೀಲ ಚಿತ್ರ (ಪೋರ್ನೋಗ್ರಫಿ) ವೀಕ್ಷಣೆಯ ಹುಚ್ಚು ಇತ್ತು ಎಂಬುದು ಪೊಲೀಸರ ವಿಚಾರಣೆಯಿಂದ ಬಹಿರಂಗವಾಗಿದೆ.
ಮನೋಜ್(56)ಗೆ ಸ್ವಲ್ಪ ಮರೆವಿತ್ತು, ಹಾಗಾಗಿ ಪೋರ್ನ್ ಸೈಟ್‌ಗಳ ಹೆಸರನ್ನು ಪೇಪರ್‌ನಲ್ಲಿ ಬರೆದಿಡುತ್ತಿದ್ದ. ಇದು ಕೂಡ ಪೊಲೀಸರಿಗೆ ದೊರೆತಿದೆ. ತನ್ನನ್ನು ಖುಷಿಯಾಗಿ ಮತ್ತು ತೃಪ್ತಿಯಾಗಿ ಇಡಲು ಸಾಧ್ಯವಾಗದ ಬಗ್ಗೆ ಮನೋಜ್‌ನೊಂದಿಗೆ ಸರಸ್ವತಿ ಜಗಳವಾಡುತ್ತಿದ್ದಳು. ಅಲ್ಲದೇ ಆತ ಮೊಬೈಲ್‌ನಲ್ಲಿ ಬೇರೆ ಮಹಿಳೆಯರ ನಗ್ನ ದೇಹಗಳನ್ನು ವೀಕ್ಷಿಸುವುದರ ಕುರಿತು ಸರಸ್ವತಿ ಕೆರಳುತ್ತಿದ್ದಳು ಎಂಬುದು ತಿಳಿದುಬಂದಿದೆ.
ಪೊಲೀಸರು ಆರೋಪಿ ಮನೋಜ್‌ನ ಮೊಬೈಲ್ ವಶಕ್ಕೆ ಪಡೆದು, ಆತನ ಬ್ರೌಸಿಂಗ್ ಹಿಸ್ಟರಿಯನ್ನು ಪರಿಶೀಲಿಸಿದ್ದಾರೆ. ಹತ್ತಾರು ಪೋರ್ನ್ ಸೈಟ್‌ಗಳನ್ನು ಆತ ವೀಕ್ಷಿಸುತ್ತಿದ್ದುದು ಕಂಡುಬಂದಿದೆ. ಪ್ರಮುಖವಾಗಿ, ಹತ್ಯೆಯಾದ ಜೂ.4ರಂದು ಆತ ಮೃತದೇಹ ಕೆಡದಂತೆ ಇಡುವ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾನೆ. ಜತೆಗೆ ಮಾರುಕಟ್ಟೆಯಿಂದ ನಾಲ್ಕು ನೀಲಗಿರಿ ತೈಲ ಬಾಟಲಿ ಖರೀದಿಸಿ, ದುರ್ವಾಸನೆ ಹಬ್ಬದಂತೆ ಮೃತದೇಹದ ಮೇಲೆ ಹಾಕಿದ್ದಾನೆ.
ಮೃತದೇಹವನ್ನು ಮರ ಕತ್ತರಿಸುವ ಸಾಧನದಿಂದ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅವುಗಳು ಕೆಡದಂತೆ ಇಡಲು ಕುಕ್ಕರ್‌ನಲ್ಲಿಟ್ಟು ಬೇಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹ ಪೂರ್ಣವಾಗಿ ವಿಲೇವಾರಿಯಾಗುವ ಮುನ್ನವೇ ನೆರೆಮನೆಯವರಿಗೆ ದುರ್ವಾಸನೆ ಬಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ, ಕೊಲೆ ಬಹಿರಂಗವಾಗಿದೆ.
ನೆರೆ-ಹೊರೆಯವರು ಶಾಕ್:
ಆರೋಪಿ ತನ್ನ ಸಹ ಜೀವನದ ಗೆಳತಿಯನ್ನು ಹತ್ಯೆ ಮಾಡಿ, ತುಂಡಾಗಿ ಕತ್ತರಿಸಿ, ಅವುಗಳನ್ನು ಬಟ್ಟಲು ಮತ್ತು ಬಕೆಟ್‌ಗಳಲ್ಲಿ ಇಟ್ಟ ಸುದ್ದಿ ಕೇಳಿ, ಅದೇ ಕಟ್ಟಡದಲ್ಲಿ ವಾಸವಿರುವ ನೆರೆ-ಹೊರೆಯವರು ಬೆಚ್ಚಿಬಿದ್ದಿದ್ದಾರೆ. ತಮ್ಮ ಮನೆಯ ಪಕ್ಕದಲ್ಲೇ ಇಂತಹದೊಂದು ಕ್ರೌರ್ಯ ನಡೆಯಿತೇ ಎಂಬುದನ್ನು ಈಗಲೂ ಅವರಿಗೆ ನಂಬಲು ಆಗುತ್ತಿಲ್ಲ. ಅಪಾರ್ಟ್‌ಮೆಂಟ್‌ನಲ್ಲಿ ಮೌನ ಆವರಿಸಿದ್ದು, ಎಲ್ಲರೂ ಸೇರಿ ಅಪಾರ್ಟ್‌ಮೆಂಟ್ ಆವರಣವನ್ನು ಸ್ವತ್ಛಗೊಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.