Lokasabha Session: ವಕ್ಫ್ ಕಾಯ್ದೆ ತಿದ್ದುಪಡಿಗೆ ವಿಪಕ್ಷಗಳಿಂದ ಆಕ್ಷೇಪ
ಪಾರದರ್ಶಕತೆಯೇ ಉದ್ದೇಶ: ಬಿಜೆಪಿಗರ ಸಮರ್ಥನೆ
Team Udayavani, Aug 6, 2024, 6:45 AM IST
ಹೊಸದಿಲ್ಲಿ: ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಮುಂದಾಗಿದೆ ಎಂಬ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಈ ಕ್ರಮವನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದರೆ, ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಸೋಮವಾರವೇ ಲೋಕಸಭೆಯಲ್ಲಿ ಮಂಡನೆಯಾಗಲಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾತನಾಡಿದ್ದ ಹಲವು ಬಿಜೆಪಿ ನಾಯಕರು, “ಮೋದಿ ಸರಕಾರವು ಪ್ರತಿಯೊಂದು ವಲಯದಲ್ಲೂ ಪಾರದರ್ಶಕತೆ ತರುವ ಉದ್ದೇಶದಿಂದ ಕೆಲಸ ಮಾಡುತ್ತಿದೆ. ಅಲ್ಲದೆ ಮುಸ್ಲಿಂ ಸಮುದಾಯದ ಆಗ್ರಹದ ಮೇರೆಗೆ ಈ ತಿದ್ದುಪ ಡಿ ಯನ್ನು ತರಲಾಗುತ್ತಿ ದೆ’ ಎಂದಿದ್ದಾರೆ.
ಇನ್ನೊಂದೆಡೆ, ಸಮಾಜದಲ್ಲಿ ವಿಭಜನೆ ತರುವ ಉದ್ದೇಶದಿಂದಲೇ ಬಿಜೆಪಿ ಇಂಥ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿರುವ ವಿಪಕ್ಷ ಗಳು, ಈ ವಿಧೇಯಕವನ್ನು ವಿರೋಧಿಸುವುದಾಗಿ ಘೋಷಿಸಿವೆ. ಎಸ್‌ಪಿ ನಾಯಕ ಅಖೀಲೇಶ್ ಮಾತನಾಡಿ, “ಬಿಜೆಪಿ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ ಎಂದಿದ್ದಾರೆ. ಶಿವ ಸೇನೆ ಉದ್ಧವ್ ಬಣ, ಸಿಪಿಎಂ, ಐಯು ಎಂಎಲ್, ಎಐಎಂಪಿಎಲ್‌ಬಿ ಕೂಡ ಇದಕ್ಕೆ ಧ್ವನಿಗೂಡಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
IMF; ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಅಪಾಯ ಇಲ್ಲ
Russia ಸೇನೆಯಲ್ಲಿದ್ದ 16 ಭಾರತೀಯರು ನಾಪತ್ತೆ, 12 ಜನ ಸಾವು: ಕೇಂದ್ರ
MUST WATCH
ಹೊಸ ಸೇರ್ಪಡೆ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.