Lokasabha: ತುರ್ತು ಪರಿಸ್ಥಿತಿ ಅವಧಿ ಕರಾಳವೆಂದ ಸ್ಪೀಕರ್ ಓಂ ಬಿರ್ಲಾ; ವಿಪಕ್ಷಗಳ ಆಕ್ಷೇಪ
ಸದನದಲ್ಲಿ 2 ನಿಮಿಷ ಮೌನಾಚರಣೆ ಪ್ರಸ್ತಾಪಕ್ಕೆ ವಿರೋಧಿಸಿ ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು
Team Udayavani, Jun 26, 2024, 7:54 PM IST
ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಖಂಡಿಸಿ ಅಂದಿನ ಆ ಅವಧಿಯನ್ನು ಕರಾಳ ದಿನಗಳೆಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದರು.
ಲೋಕಸಭೆಗೆ ಸತತ ಎರಡನೇ ಬಾರಿಗೆ ಸ್ಪೀಕರ್ ಆಗಿ ಆಯ್ಕೆಯಾದ ರಾಜಸ್ಥಾನದ ಕೋಟಾ ಕ್ಷೇತ್ರದ ಸಂಸದ ಓಂ ಬಿರ್ಲಾ ಮಾತನಾಡಿ ಸದನದ ಸದಸ್ಯರು ದೇಶಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಕಲಾಪಗಳಿಗೆ ಸದಸ್ಯರು ಗೈರಾಗದೆ ಚರ್ಚೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ಸಂಸತ್ತು ಮತ್ತು ಬೀದಿಯಲ್ಲಿ ಪ್ರತಿಭಟಿಸುವುದರ ನಡುವಿನ ವ್ಯತ್ಯಾಸ ತಿಳಿದಿರಬೇಕು ಎಂದು ಹೇಳಿದರು.
ಬಳಿಕ ತುರ್ತು ಪರಿಸ್ಥಿತಿಯ ಕರಾಳ ದಿನದ 50ನೇ ವರ್ಷಾಚರಣೆ ಕುರಿತು ಮಾತನಾಡಿ ತುರ್ತು ಪರಿಸ್ಥಿತಿಯ “ಕರಾಳ ಅವಧಿಯಲ್ಲಿ”ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹತ್ತಿಕ್ಕಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಸುಕಲಾಯಿತು. ತುರ್ತು ಪರಿಸ್ಥಿತಿಯು ಭಾರತದ ಹಲವಾರು ನಾಗರಿಕರ ಜೀವನವನ್ನು ನಾಶ ಮಾಡಿದೆ. ಹಲವಾರು ಜನರು ಸಾವನ್ನಪ್ಪಿದ್ದಾರೆ. ತುರ್ತು ಪರಿಸ್ಥಿತಿಯ ಕರಾಳ ಅವಧಿಯಲ್ಲಿ ಕಾಂಗ್ರೆಸ್ನ ಸರ್ವಾಧಿಕಾರಿ ಸರ್ಕಾರದ ಕೈಯಲ್ಲಿ ಪ್ರಾಣ ಕಳೆದುಕೊಂಡ ಭಾರತದ ಅಂತಹ ಕರ್ತವ್ಯನಿಷ್ಠ ಮತ್ತು ದೇಶಭಕ್ತಿಯ ನಾಗರಿಕರ ಸ್ಮರಣೆಗಾಗಿ ನಾವು 2 ನಿಮಿಷಗಳ ಮೌನವನ್ನು ಆಚರಿಸುತ್ತೇವೆʼ ಎಂದು ಬಿರ್ಲಾ ಹೇಳಿದರು.
ಸ್ಪೀಕರ್ ಓಂ ಬಿರ್ಲಾ ತುರ್ತು ಪರಿಸ್ಥಿತಿಯನ್ನು ಕರಾಳ ಅವಧಿಯೆಂದು ಕರೆದಿದ್ದಕ್ಕೆ ವಿಪಕ್ಷದವರಿಂದ ತೀವ್ರ ಪ್ರತಿಭಟನೆ, ಘೋಷಣೆಗಳ ಕೂಗು ಕೇಳಿ ಬಂದವು. ಕಾಂಗ್ರೆಸ್ ಸಂಸದರು ಸದನದ ಬಾವಿಗೆ ಇಳಿದರೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸದಸ್ಯರು ಆಸನದಲ್ಲೇ ಕುಳಿತಿದ್ದರು.
ತುರ್ತುಪರಿಸ್ಥಿತಿಯ ಕರಾಳ ಅವಧಿಯಲ್ಲಿ ಸರ್ವಾಧಿಕಾರಿ ಕಾಂಗ್ರೆಸ್ ಸರ್ಕಾರದ ಧೋರಣೆಯಿಂದಾಗಿ ಪ್ರಾಣ ಕಳೆದುಕೊಂಡವರ ಸ್ಮರಣೆಗಾಗಿ 2 ನಿಮಿಷ ಮೌನ ಪ್ರಾರ್ಥನೆಗೆ ಲೋಕಸಭಾ ಸ್ಪೀಕರ್ ಶ್ರೀ @ombirlakota ಅವರು ಮನವಿ ಮಾಡಿದರೂ ಇಂಡಿ ಮೈತ್ರಿಕೂಟದವರು ಇದನ್ನು ಪರಿಗಣಿಸದೆ, ಗದ್ದಲವೆಬ್ಬಿಸಿ ಹುತಾತ್ಮರನ್ನು ಗೇಲಿ ಮಾಡುವ ಮೂಲಕ ದೇಶ ಮತ್ತು ಸಂವಿಧಾನದ… pic.twitter.com/AbZQgoc0wv
— BJP Karnataka (@BJP4Karnataka) June 26, 2024
ಸ್ಪೀಕರ್ ಭಾಷಣಕ್ಕೆ ಮೋದಿ ಮೆಚ್ಚುಗೆ
ತುರ್ತು ಪರಿಸ್ಥಿತಿ ಖಂಡಿಸಿ ಸ್ಪೀಕರ್ ಓಂ ಬಿರ್ಲಾ ಮಾಡಿದ ಭಾಷಣಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ, ಘೋಷಣೆಗಳ ಕೂಗಿದರೆ, ಪ್ರಧಾನಿ ನರೇಂದ್ರ ಮೋದಿ ಓಂ ಬಿರ್ಲಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಪಕ್ಷಗಳ ಘೋಷಣೆಯ ಖಂಡಿಸಿದ ಬಿಜೆಪಿ ಸಂಸದ, ಪಕ್ಷದ ವಕ್ತಾರ ಸಂಬಿತ್ ಪಾತ್ರ ಮಾತನಾಡಿ ತುರ್ತು ಪರಿಸ್ಥಿತಿ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಪ್ರಸ್ತಾಪಸಿದ ನಿಲುವಳಿಯ ಖಂಡಿಸಿ . ಕಾಂಗ್ರೆಸ್ ಸಂಸದರು ಸದನದ ಬಾವಿಗೆ ಇಳಿದರೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸದಸ್ಯರು ಆಸನದಲ್ಲೇ ಕುಳಿತಿದ್ದರು. ಕಾಂಗ್ರೆಸ್ ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ಬಂದ ಕೂಡಲೇ ಸಂವಿಧಾನ ರಕ್ಷಕರು ಆಗಲ್ಲ, ಹೃದಯಪೂರ್ವಕವಾಗಿ ಸಂವಿಧಾನಕ್ಕೆ ಗೌರವ ಕೊಡಬೇಕು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.