ಲಂಡನ್‌ನಲ್ಲಿ ಕಾನೂನು ಭಂಜಕರಿಗೆ ದಂಡವೇ ಮದ್ದು
ನಮ್ಮ ದೇಶಕ್ಕೆ ನಾವೇ ಕಂಟಕರಾಗದಿರೋಣ
Team Udayavani, Apr 11, 2020, 10:55 AM IST
ಮಲ್ಪೆ: ವಿದೇಶ ಗಳಲ್ಲಿದ್ದು ಕೋವಿಡ್ 19 ಲಾಕ್‌ಡೌನ್ ಸಂದರ್ಭ ಸ್ವದೇಶಕ್ಕೆ ತೆರಳಿರುವ ನಾಗರಿಕರೆಲ್ಲರೂ ಸ್ವ ಇಚ್ಛೆಯಿಂದ 21 ದಿನ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕು. ಈ ಮೂಲಕ ನಮ್ಮ ದೇಶಕ್ಕೆ ನಾವೇ ಕಂಟಕರಾಗುವುದನ್ನು ತಪ್ಪಿಸಬಹುದು ಎಂದು ಕಾಪು ಕಲ್ಯಾ ಮೂಲದ ಕನ್ನಡತಿ ಶ್ರದ್ಧಾ ನಿತಿನ್ ಅನಿವಾಸಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಶ್ರದ್ಧಾ 10 ವರ್ಷಗಳಿಂದ ಲಂಡನ್‌ನಲ್ಲಿ ಪತಿಯ ಜತೆಗೆ ನೆಲೆಸಿದ್ದಾರೆ.
ಆತಂಕಿತರಾಗಿದ್ದೇವೆ
ಲಂಡನ್‌ನಲ್ಲಿ ಸೋಂಕುಪೀಡಿತರ ಸಂಖ್ಯೆ 60,733, ಮೃತರ ಸಂಖ್ಯೆ 7,097 ದಾಟಿದೆ. ಗಂಭೀರತೆಯನ್ನು ಅರಿಯುವಲ್ಲಿ ಆಡಳಿತ ಸ್ವಲ್ಪ ವಿಳಂಬ ಮಾಡಿದೆ ಎನ್ನಲಾಗುತ್ತಿದೆ. ನಾನಿರುವ ಹ್ಯಾರೋ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇದ್ದಾರೆ. ನಾವೆಲ್ಲ ಬಂದಿ ಗಳಂತೆ ಇದ್ದೇವೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಗಂಭೀರವಾಗುತ್ತಿದ್ದು, ಕಂಗೆಡಿಸಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಶ್ರದ್ಧಾ.
ಪ್ರಧಾನಿಗೂ ಸೋಂಕು ಪ್ರಧಾನಿ ಬೋರಿಸ್ ಜಾನ್ಸನ್, ಹೆಲ್ತ್‌ಸೆಕ್ರೆಟರಿ ಮೆಟ್ ಹೆನ್‌ಕೋಕ್, ರಾಣಿ ಎಲಿಜಬೆತ್, ಯುವರಾಜ ಚಾಲ್ಸ್ ì ಕೂಡ ಸೋಂಕಿಗೆ ಒಳಗಾಗಿದ್ದಾರೆ.
ಸೆಮಿ ಲಾಕ್‌ಡೌನ್
ಮಾ. 23ರಿಂದ ಸೆಮಿ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ. ಸೂಪರ್ ಮಾರ್ಕೆಟ್, ತುರ್ತು ಅಗತ್ಯಗಳಾದ ಮೆಡಿಕಲ್ ಹೊರತುಪಡಿಸಿ ಇನ್ನುಳಿದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ದೈನಂದಿನ ಆಹಾರದ ಪದಾರ್ಥ ಮಾರಾಟದ ಭಾರತೀಯ ಅಂಗಡಿಗಳು ತೆರೆದಿವೆ. ರೈಲು, ವಿಮಾನ ಯಾನ ಇದೆ. ಬೀಚ್, ಪಾರ್ಕ್‌ಗಳಿಗೆ ಜನರು ಹೋಗುತ್ತಾರೆ. ಪೊಲೀಸರು ಲಾಠೀಪ್ರಹಾರ ಮಾಡುವಂತಿಲ್ಲ, ದೊಡ್ಡ ಮೊತ್ತದ ದಂಡ ವಿಧಿಸುತ್ತಾರೆ. ಅಂಗಡಿಗಳಲ್ಲಿ ಕನಿಷ್ಠ 2.5 ಗಂಟೆ ಸರದಿಯಲ್ಲಿ ಕಾಯಬೇಕು. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿದರೆ ನಾಲ್ಕು ವಾರಗಳ ಕಾಲ ಕಾಯಬೇಕು.
ವಿದೇಶದಿಂದ ಮರಳಿದ ಅನಿವಾಸಿ ಭಾರತೀಯರು ಮತ್ತು ವಿದೇಶೀ ಪ್ರವಾಸಿಗರು ನಿಯಮಗಳನ್ನು ಗಾಳಿಗೆ ತೂರಿ, ಊರೆಲ್ಲ ಸುತ್ತಾಡಿ ಆತಂಕದ ವಾತಾವರಣ ಸೃಷ್ಟಿಸಿದರು. ಕುಟುಂಬವನ್ನು, ದೇಶವನ್ನು ಕೋವಿಡ್ 19 ಕಪಿಮುಷ್ಟಿಯಿಂದ ಪಾರು ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
– ಶ್ರದ್ಧಾ ನಿತಿನ್, ಲಂಡನ್
-ನಟರಾಜ್ ಮಲ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.