ಲೆ|ಜ| ಪಾಂಡೆ ಸೇನೆಯ ಹೊಸ ವೈಸ್ ಚೀಫ್
Team Udayavani, Feb 2, 2022, 7:10 AM IST
ಹೊಸದಿಲ್ಲಿ: ಭಾರತೀಯ ಸೇನೆಯ ನೂತನ ವೈಸ್ ಚೀಫ್ ಆಗಿ ಲೆ|ಜ| ಮನೋಜ್ ಪಾಂಡೆ ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಇದು ವರೆಗೆ ಅವರು ಸೇನೆಯ ಈಸ್ಟರ್ನ್ ಕಮಾಂಡ್ನ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರಿಂದ ತೆರವಾದ ಈಸ್ಟರ್ನ್ ಕಮಾಂಡ್ನ ಮುಖ್ಯಸ್ಥ ಸ್ಥಾನಕ್ಕೆ ಲೆ|ಜ| ಆರ್.ಪಿ. ಕಲಿತಾ ಅವರು ನೇಮಕಗೊಂಡಿದ್ದಾರೆ.
1982ರಲ್ಲಿ ಬಾಂಬೇ ಸ್ಯಾಪರ್ ಮೂಲಕ ಸೈನಿಕ ಜೀವನ ಆರಂಭಿ ಸಿದ್ದ ಲೆ|ಜ| ಪಾಂಡೆಯವರು ಸಾಂಪ್ರ ದಾಯಿಕ ಮತ್ತು ಉಗ್ರ ವಿರೋಧಿ ಕಾರ್ಯಾಚರಣೆಗಳ ಸಹಿತ ಹಲವು ಉನ್ನತ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ “ಆಪರೇಶನ್ ಪರಾ ಕ್ರಮ್’ ಸಂದರ್ಭ ಎಲ್ಒಸಿಯಲ್ಲಿ ಅವರು ಎಂಜಿನಿಯರ್ ರೆಜಿಮೆಂಟ್ನ ಮುಖ್ಯಸ್ಥರಾಗಿದ್ದರು. ವಿಶ್ವಸಂಸ್ಥೆಯ ಶಾಂತಿ ಪಾಲನ ಪಡೆಯ ಸದಸ್ಯರಾಗಿ ಇಥಿಯೋಪಿಯಾ ಮತ್ತು ಎರೀಟ್ರಿಯಾ ಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ಪರಮ ವಿಶಿಷ್ಟ ಸೇವಾ ಪದಕ, ಅತೀ ವಿಶಿಷ್ಟ ಸೇವಾ ಪದಕ, ವಿಶಿಷ್ಟ ಸೇವಾ ಪದಕಗಳನ್ನು ಪಡೆದಿದ್ದಾರೆ. ಇದೇ ಎಪ್ರಿಲ್ನಲ್ಲಿ ಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ ನಿವೃತ್ತಿ ಹೊಂದ ಲಿದ್ದು, ಸೇನಾ ಸಂಪ್ರದಾಯದ ಪ್ರಕಾರ ಹಿರಿಯರಾದ ಲೆ|ಜ| ಪಾಂಡೆ ಆಗ ನೂತನ ಸೇನಾ ಮುಖ್ಯಸ್ಥರಾಗುತ್ತಾರೆ.
ನಾರ್ದರ್ನ್ ಕಮಾಂಡ್ ಮುಖ್ಯಸ್ಥರಾಗಿ ಲೆ|ಜ| ದ್ವಿವೇದಿ
ಭಾರತೀಯ ಸೇನೆಯ ನಾರ್ದರ್ನ್ ಕಮಾಂಡ್ನ ಕಮಾಂಡಿಂಗ್ ಇನ್ ಚೀಫ್ ಆಗಿ ಲೆ|ಜ| ಉಪೇಂದ್ರ ದ್ವಿವೇದಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಇದುವರೆಗೆ ಈ ಹುದ್ದೆಯಲ್ಲಿದ್ದ ಕಾರ್ಗಿಲ್ ಯುದ್ಧವೀರ ಲೆ|ಜ| ಯೋಗೇಶ್ ಕುಮಾರ್ ಜೋಶಿ ಸೋಮವಾರ ನಿವೃತ್ತಿ ಹೊಂದಿದ್ದರು. ಉಧಂಪುರದಲ್ಲಿರುವ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ಲೆ|ಜ| ದ್ವಿವೇದಿಯವರು ಅಧಿಕಾರ ವಹಿಸಿಕೊಂಡರು ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ. 1984ರಲ್ಲಿ ಜಮ್ಮು ಕಾಶ್ಮೀರ ರೈಫಲ್ಸ್ನ 18ನೇ ಬೆಟಾಲಿಯನ್ ಮೂಲಕ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಣೆ ಆರಂಭಿಸಿದ್ದ ಲೆ|ಜ| ದ್ವಿವೇದಿಯವರು 35 ವರ್ಷಗಳ ಸೈನಿಕ ಜೀವನದಲ್ಲಿ ಹಲವಾರು ಪ್ರಧಾನ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.