ತುಳು ಮೌಖೀಕ ಮಹಾಕವಿ ಮಾಚಾರು ಗೋಪಾಲ ನಾಯ್ಕ


Team Udayavani, Apr 26, 2023, 7:12 AM IST

ತುಳು ಮೌಖೀಕ ಮಹಾಕವಿ ಮಾಚಾರು ಗೋಪಾಲ ನಾಯ್ಕ

ಜಾನಪದ ಕಲಾವಿದ, ತುಳು ಸಿರಿ ಕಾವ್ಯದ ಕಣಜ ಎಂದೇ ಖ್ಯಾತರಾಗಿದ್ದ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಚಾರು ಗೋಪಾಲ ನಾಯ್ಕ (85) ಎ. 24ರಂದು
ನಿಧನ ಹೊಂದಿದ್ದು, ಅವರಿಗೆ ನುಡಿನಮನ ಇಲ್ಲಿದೆ…

ಮಾಚಾರು ಗೋಪಾಲ ನಾಯ್ಕ ಅವರು 15,683 ಸಾಲುಗಳ ದೀರ್ಘ‌ ತುಳುಸಿರಿ ಕಾವ್ಯವನ್ನು ಹಾಡಿದ ಪ್ರಸಿದ್ಧ ಜನಪದ ಮಹಾ ಗಾಯಕ. ಮೌಖೀಕ ಪರಂಪರೆಯ ಹಲವು ಸಂಧಿ, ಪಾಡªನ, ಕತೆ, ಕಬಿತೆಗಳ ಕಣಜ. ಸಿರಿ ಜಾತ್ರೆಯಲ್ಲಿ ಕುಮಾರನಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಅವರು ಸಿರಿತಂಡದ ನಾಯಕರು, ಮಾರ್ಗದರ್ಶಕರು. ಕೌಟುಂಬಿಕ ಸಮಸ್ಯೆಗಳಿಗೆ ಸಲಹೆಗಾರರು.

ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ಕು.ಶಿ. ಹರಿದಾಸ ಭಟ್‌, ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ, ಫಿನ್ಲಂಡಿನ ಲೌರಿ ಹೋಂಕೊ ಮತ್ತು ಅನ್ನೆಲಿ ಹೋಂಕೊ, ಮಂಗಳೂರು ವಿ.ವಿ.ಯ ಬಿ.ಎ. ವಿವೇಕ ರೈ ಮತ್ತು ಕೆ. ಚಿನ್ನಪ್ಪ ಗೌಡ ಅವರನ್ನು ಒಳಗೊಂಡ ಅಪೂರ್ವ ತಂಡದ ಸಿರಿ ಪಠ್ಯದ ಸಂಗ್ರಹ ಮತ್ತು ಸಂಪಾದನೆ ಯೋಜನೆಯ ಕೇಂದ್ರ ಶಕ್ತಿ ಅವರು. ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ವಿದ್ವಾಂಸ ಫಿನ್ಲಂಡ್‌ನ‌ ಲೌರಿ ಹೋಂಕೊ ಅವರು ಜನಪದ ಮಹಾಕಾವ್ಯಗಳ ರಚನೆ, ಮರುರಚನೆ, ಕಲಿಕೆ, ಪ್ರಸಾರ ಇವುಗಳಿಗೆ ಸಂಬಂಧಿಸಿದಂತೆ ರೂಪಿಸಿದ “ಮಾನಸಿಕ ಪಠ್ಯ’ ಮತ್ತು “ಸಿದ್ಧಮಾದರಿ’ ಸಿದ್ಧಾಂತಕ್ಕೆ ಆಕರ ಸಾಮಗ್ರಿಗಳನ್ನು ಒದಗಿಸಿದ ಸಂಶೋಧನ ಸಹಭಾಗಿ. ಅವರ ಸಿರಿಕಾವ್ಯ ಮೂಲ ತುಳುಪಠ್ಯ ಇಂಗ್ಲಿಷ್‌ ಅನುವಾದ ಸಹಿತ ದೀರ್ಘ‌ ಪ್ರಸ್ತಾವನೆಯೊಂದಿಗೆ ಎರಡು ಸಂಪುಟಗಳಲ್ಲಿ ಪ್ರಕಟವಾಗಿದೆ.

ಮಹಾಕವಿ ಪ್ರತಿಭೆ
ತುಳು ಸಿರಿ ಕಾವ್ಯವನ್ನು “ತುಳುನಾಡಿನ ಬೆಳಕು’ ಎಂದು ಗೋಪಾಲ ನಾಯ್ಕ ಬಣ್ಣಿಸಿದ್ದಾರೆ. ಅವರು ಹಾಡಿ ರುವ ಸಿರಿ ಸಂಧಿಯಲ್ಲಿ ಬರೋ ಬ್ಬರಿ 15,683 ಸಾಲುಗಳಿವೆ. ಗೋಪಾಲ ನಾಯ್ಕ ಅವರದು ಮಹಾಕವಿ ಪ್ರತಿಭೆ. ತನ್ನಷ್ಟೇ ಪ್ರತಿಭಾವಂತರಾದ ಮತ್ತು ಜನಪದ ಸಿರಿ ಮಹಾ ಕಾವ್ಯವನ್ನು ಮುರಿದು ಮರು ಕಟ್ಟುವ ಸಾಮರ್ಥ್ಯವುಳ್ಳ ಗಾಯ ಕರು ಇರುವುದನ್ನು ಗೋಪಾಲ ನಾಯ್ಕ ಮನಗಂಡಿದ್ದರು. ಪ್ರಕಟಿತ ಮತ್ತು ಅಪ್ರಕಟಿತ ಆದರೆ ಸಂಗ್ರಹ ವಾಗಿರುವ ಸಿರಿ ಸಂಧಿಯ ಎಲ್ಲ ಪಠ್ಯಗಳ ಸಾಲುಗಳನ್ನು ಲೆಕ್ಕ ಹಾಕಿದರೆ ಅಂದಾಜು ಅರುವತ್ತು ಸಾವಿರ ಸಾಲು ಗಳ ಗಡಿಯನ್ನು ಸಿರಿ ಕಾವ್ಯ ದಾಟಿದೆ.

ಸಿರಿ ಸಂಧಿಯ ಪೂರ್ಣ ಪಠ್ಯವನ್ನು ಹಾಡಿ ಮುಗಿಸಲು ಅವರು ತೆಗೆದುಕೊಂಡ ದಿನಗಳು ಒಂಬತ್ತು! ಸಿರಿ ಕಾವ್ಯವನ್ನು ಅಜ್ಜೆರು ಸಂಧಿ, ಸಿರಿ ಸಂಧಿ, ಸೊನ್ನೆಗಿಂಡೆ ಸಂಧಿ, ಅಬ್ಬಯ ದಾರಯ ಸಂಧಿ, ಕುಮಾರ ಸಂಧಿ ಮತ್ತು ಮುಕ್ತಾಯ ಹೀಗೆ ವ್ಯವ ಸ್ಥಿತವಾಗಿ ವಿಂಗಡಿಸಿ ಹಾಡಿದ್ದಾರೆ. ಸಿರಿ ಕಾವ್ಯ ಅಲ್ಲದೆ ಇವರು ಹಾಡಿದ ಇತರ ಸಂಧಿಗಳು/ ಜನಪದ ಕಾವ್ಯಗಳು ಇಂತಿವೆ. ಕೋಟಿ ಚೆನ್ನಯ ಬೈದ್ಯೆರೆ ಸಂಧಿ, ಏಕಸಾಲೆರೆ ಸಂಧಿ, ಮೈಸಂದಾಯ ಸಂಧಿ, ಈಶ್ವರ ಸಂಧಿ, ಕೋಡªಬ್ಬು ಸಂಧಿ. ಇಷ್ಟಲ್ಲದೆ ಅವ ರೊಬ್ಬ ಜನಪದ ವೈದ್ಯ, ಜನಪದ ಕುಣಿತ ಗಳ ನಾಯಕ. ಇವರು ಬೇಸಾ ಯದ ಗದ್ದೆಯಲ್ಲಿ ಕಬಿತೆ ಗಳನ್ನು ಮುಖ್ಯ ಗಾಯಕರಾಗಿ ಹಾಡು ತ್ತಿದ್ದರು. ಜನಪದ ಕತೆಗಳನ್ನು (ತುಳುವಿನ ಅಜ್ಜಿಕತೆ) ಹೇಳಬಲ್ಲ ಕತೆಗಾರನೂ ಹೌದು. ಸಿರಿ ಜಾತ್ರೆಯಲ್ಲಿ ಅವರ ನೇತೃತ್ವದಲ್ಲಿ ಒಂದು ಸಿರಿ ತಂಡ ಭಾಗವಹಿಸುತ್ತದೆ. ಬಳಗದ “ಮುಖ್ಯ ಕುಮಾರ’ ಅವರು. ಅವರು ಹಾಡುವ ಎಲ್ಲ ಸಂಧಿಗಳ ಸಾಲುಗಳನ್ನು ಒಟ್ಟು ಸೇರಿಸಿದರೆ 30,000 ದಾಟುತ್ತದೆ.

– ಡಾ| ಕೆ. ಚಿನ್ನಪ್ಪ ಗೌಡ

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.