Maharashtra Govt. Formation: ಹೊಸ ಸಿಎಂಗೆ ಸಂಪೂರ್ಣ ಸಹಕಾರ ನೀಡುವೆ: ಏಕನಾಥ ಶಿಂಧೆ
ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕು ಇಲ್ಲ: ಉಸ್ತುವಾರಿ ಸಿಎಂ, ಇಂದು/ ನಾಳೆ ಮಹಾರಾಷ್ಟ್ರ ಬಿಜೆಪಿ ಶಾಸಕಾಂಗ ಸಭೆ?
Team Udayavani, Dec 2, 2024, 7:20 AM IST
ಮುಂಬಯಿ: “ರಾಜ್ಯದ ನೂತನ ಸಿಎಂ ಯಾರೆಂದು ನಿರ್ಧರಿಸುವುದು ಬಿಜೆಪಿ. ಅವರು ಯಾರನ್ನೇ ಸಿಎಂ ಮಾಡಿದರೂ ನನ್ನ ಸಂಪೂರ್ಣ ಬೆಂಬಲವಿರುತ್ತದೆ’.
ಹೀಗೆಂದು ಹೇಳಿದ್ದು ಮಹಾರಾಷ್ಟ್ರದ ಉಸ್ತುವಾರಿ ಸಿಎಂ ಏಕನಾಥ ಶಿಂಧೆ.
ಸಿಎಂ ಚರ್ಚೆ ಎದ್ದ ಬೆನ್ನಲ್ಲೇ ಹುಟ್ಟೂರಿಗೆ ತೆರಳಿದ್ದ ಶಿಂಧೆ, ರವಿವಾರ ಮೌನ ಮುರಿದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಮಹಾಯುತಿ ಮೈತ್ರಿಕೂಟದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಸಿಎಂ ಆಯ್ಕೆಯನ್ನು ಪ್ರಧಾನಿ ಮೋದಿ ಮತ್ತು ಸಚಿವ ಅಮಿತ್ ಶಾ ಅವರು ಮಾಡುತ್ತಾರೆ. ಸರಕಾರ ರಚನೆ ಕುರಿತು ಮಾತುಕತೆ ನಡೆಯುತ್ತಿದೆ. ಮೈತ್ರಿಕೂಟದ ಮೂರೂ ಪಕ್ಷಗಳ ಸಮ್ಮತಿಯೊಂದಿಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಫಡ್ನವೀಸ್ ಹೆಸರು ಅಂತಿಮ?:
ಇದೇ ವೇಳೆ, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಸೋಮವಾರ ಅಥವಾ ಮಂಗಳವಾರ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ನಾಯಕನನ್ನಾಗಿ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ರವಿವಾರ ತಿಳಿಸಿದ್ದಾರೆ. ಮಹಾಯುತಿ ಸರಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಡಿ.5ರ ಸಂಜೆ ಮುಂಬಯಿಯ ಆಜಾದ್ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಭಾಗಿಯಾಗಲಿದ್ದಾರೆ ಎಂದೂ ಹೇಳಿದ್ದಾರೆ.
ಏಕನಾಥ ಶಿಂಧೆ ಪುತ್ರನಿಗೆ ಡಿಸಿಎಂ ಸ್ಥಾನ?
ಉಸ್ತುವಾರಿ ಸಿಎಂ ಏಕನಾಥ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ಅವರಿಗೆ ಮಹಾರಾಷ್ಟ್ರ ಡಿಸಿಎಂ ಹುದ್ದೆ ಸಿಗಲಿದೆಯೇ? ಈ ಪ್ರಶ್ನೆಗೆ ರವಿವಾರ ಏಕನಾಥ ಶಿಂಧೆ ಉತ್ತರಿಸಿದ್ದು, “ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ’ ಎಂದಿದ್ದಾರೆ. ಶಿಂಧೆ ಅವರು ಸರಕಾರದಲ್ಲಿ ಪ್ರಮುಖ ಖಾತೆಗಳ ಜತೆಗೆ ತಮ್ಮ ಪುತ್ರನಿಗೆ ಡಿಸಿಎಂ ಹುದ್ದೆ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Survival: ಜನಸಂಖ್ಯೆ ಕುಸಿತ ತಡೆಗೆ ಮೂರು ಮಕ್ಕಳನ್ನು ಪಡೆಯಿರಿ: ಮೋಹನ್ ಭಾಗವತ್
Cyclone Fengal: ಫೈಂಜಾಲ್‌ಗೆ 3 ಬಲಿ: ಪುದುಚೇರಿಯಲ್ಲಿ 30 ವರ್ಷದಲ್ಲೇ ಗರಿಷ್ಠ ಮಳೆ!
Scraps: ಜಗನ್ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್ ವಿಸರ್ಜನೆ: ಆಂಧ್ರ ಸರ್ಕಾರ ಘೋಷಣೆ
Conraversy Statement: ಬಾಂಗ್ಲಾ-ಭಾರತ ನಡುವೆ ವ್ಯತ್ಯಾಸ ಕಾಣುತ್ತಿಲ್ಲ: ಮೆಹಬೂಬಾ ವಿವಾದ
Book Release: ಟಿಪ್ಪು ಅತ್ಯಂತ ಸಂಕೀರ್ಣ ವ್ಯಕ್ತಿ: ವಿದೇಶಾಂಗ ಸಚಿವ ಜೈಶಂಕರ್
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ
Tumkur: ಬಸ್ ಪಲ್ಟಿಯಾಗಿ ಮೂವರು ಸಾವು
Survival: ಜನಸಂಖ್ಯೆ ಕುಸಿತ ತಡೆಗೆ ಮೂರು ಮಕ್ಕಳನ್ನು ಪಡೆಯಿರಿ: ಮೋಹನ್ ಭಾಗವತ್
ICC Chairman: ಐಸಿಸಿಗೆ ನೂತನ ಸಾರಥಿ ಜಯ್ ಶಾ; ಅಧಿಕಾರ ಸ್ವೀಕಾರ
Adjustment Politcs: ಬಿವೈವಿ ಹೊಂದಾಣಿಕೆ ದಾಖಲೆ ಬಿಡುಗಡೆ ಮಾಡಲೇ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.