Maharastra Urban Naxals Bill: ನಗರ ನಕ್ಸಲರಿಗೆ ಮೂಗುದಾರ

ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ ಮಂಡನೆ

Team Udayavani, Jul 15, 2024, 7:50 AM IST

Urban-naxal

ಮಹಾರಾಷ್ಟ್ರ ವಿಧಾನಸಭೆಯಲ್ಲಿ “ವಿಶೇಷ ಸಾರ್ವಜನಿಕ ಭದ್ರತಾ’ ಮಸೂದೆಯನ್ನು ಮಂಡಿಸಲಾಗಿದೆ. ನಕ್ಸ ಲರೆಡೆಗೆ ಸಹಾನುಭೂತಿ ಹಾಗೂ ನೆರವು ಒದಗಿಸುವ “ನಗರ ನಕ್ಸಲ’ರನ್ನು ಶಿಕ್ಷೆಗೆ ಗುರಿಯಾಗಿಸುವುದು ಈ ಮಸೂದೆಯ ಉದ್ದೇಶವಾಗಿದೆ. ಮಹಾರಾಷ್ಟ್ರದ ಉದ್ದೇಶಿತ ಮಸೂದೆ ಹಾಗೂ ನಗರ ನಕ್ಸಲರು ಕುರಿತಾದ ಮಾಹಿತಿ ಇಲ್ಲಿದೆ.

ನಗರ ನಕ್ಸಲರನ್ನು (Urban Naxals) ಮಟ್ಟ ಹಾಕಲು ಮುಖ್ಯ ಮಂತ್ರಿ ಏಕ ನಾಥ ಶಿಂಧೆ ನೇತೃ ತ್ವದ ಸರಕಾರವು ಮಹಾರಾಷ್ಟ್ರದ ವಿಧಾನಸಭೆಯಲ್ಲಿ “ಮಹಾ ರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ’  (ಎಂಎಸ್‌ಪಿಸಿ) ಮಸೂದೆ  ಮಂಡಿಸಿದೆ.
ಈ ವಿವಾದಿತ ಮಸೂದೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆ ಯು ತ್ತಿವೆ. ಕೇಂದ್ರ ಸರಕಾರದ ಪ್ರಕಾರ “ಅರ್ಬನ್‌ ನಕ್ಸಲ್‌’ ಅಥವಾ “ನಗರ ನಕ್ಸಲ್‌’ ಎಂಬ ಪದ ಬಳ ಕೆಯ ಇಲ್ಲ! ಆದರೂ ಮಹಾ ರಾಷ್ಟ್ರ ಜಾರಿಗೆ ತರಲು ಹೊರಟಿರುವ ಈ ಕಾಯ್ದೆಯು, ಜನರ ಗಮನವನ್ನು ಬೇರೆ ಡೆಗೆ ಸೆಳೆ ಯುವ ಪ್ರಯತ್ನ ಎಂದು ವಿಪ ಕ್ಷ ಗಳು ವಾದಿ ಸಿ ದರೆ, ಈಗ ನಕ್ಸಲರ ವ್ಯಾಪ್ತಿ ಕೇವಲ ಕಾಡಷ್ಟೇ ಅಲ್ಲ. ಅವರಿಗೆ ನೆರವು ಒದಗಿಸುವ ದೊಡ್ಡ ಗುಂಪೇ ನಗರದಲ್ಲಿದೆ. ಅಂಥ ವ ರಿಗೆ ಶಿಕ್ಷೆ ನೀಡಲು ಕಾಯ್ದೆ ಅಗತ್ಯ ಎಂಬ ವಾದವನ್ನು ಮಹಾರಾಷ್ಟ್ರ ಸರಕಾರ ಮುಂದಿಡುತ್ತಿದೆ.

ನಗರದ ಪ್ರದೇಶದಲ್ಲಿ ನಕ್ಸಲ್‌ ಸಿದ್ಧಾಂತ ವನ್ನು ಹರ ಡು ವ ವರು, ನೇಮ ಕಾತಿ ಮಾಡಿ ಕೊ ಳ್ಳು ವ ವರು, ಶಸ್ತ್ರಾಸ್ತ್ರ ರವಾನೆ ಸೇರಿ  ಸಾರಿಗೆ ನೆರವು ಒದ ಗಿ ಸು ವ ವ ರನ್ನು “ಮಹಾ ರಾಷ್ಟ್ರ ವಿಶೇಷ ಸಾರ್ವ ಜ ನಿಕ ಭದ್ರ ತಾ ’ ಕಾಯ್ದೆ ವ್ಯಾಪ್ತಿಗೆ ಸೇರಿ ಸ ಲಾ ಗಿದೆ. ನಕ್ಸ ಲ್‌ ಮುಂಚೂಣಿಯ ಸಂಘಟನೆಗಳ ಮೂಲಕ ನಗರ ಪ್ರದೇಶದಲ್ಲಿ ನಕ್ಸಲ್‌ ವಾದ ವನ್ನು ಹೆಚ್ಚಿ ಸು ವು ದು. ಕೆಲವು ಬಂಧಿತ ವ್ಯಕ್ತಿಗಳಿಂದ ವಶಪಡಿಸಿಕೊಳ್ಳ ಲಾದ ದಾಖಲೆಗಳ ಪ್ರಕಾರ, ಮಾವೋ ವಾದಿ ಜಾಲದ ಸುರ ಕ್ಷಿತ ಆಶ್ರಯತಾಣ ಗಳು ಮಹಾರಾಷ್ಟ್ರದ ನಗರ ಪ್ರದೇಶಗಳಲ್ಲಿವೆ. ನಗ ರ ಪ್ರದೇ ಶ ದಲ್ಲಿ ಸಕ್ರಿ ಯ ವಾ ಗಿ ರುವ ಈ ಜಾಲ ವನ್ನು ಕಾನೂನು ಸಾಧ ನ ಗಳ ಮೂಲಕ ನಿಯಂತ್ರಣ ಮಾಡು ವುದು ಈ ಮಸೂ ದೆಯ ಉದ್ದೇಶವಾಗಿದೆ.
7 ವರ್ಷ ಜೈಲು ಶಿಕ್ಷೆ, 5 ಲಕ್ಷ ದಂಡ
1. ಕಾನೂನು ಬಾಹಿರ ಚಟುವಟಿಕೆ: ಸಾರ್ವಜನಿಕ ಸುವ್ಯವಸ್ಥೆ, ಶಾಂತಿ ಮತ್ತು ನೆಮ್ಮದಿಗೆ ಅಪಾಯ ಅಥವಾ ಅಪಾಯವನ್ನುಂಟುಮಾಡುವ ಅಥವಾ ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಅಡ್ಡಿಪಡಿಸುವ ಅಥವಾ ಹಸ್ತಕ್ಷೇಪ ಮಾಡುವ ಅಥವಾ ಕಾನೂನು ಅಥವಾ ಅದರ ಸ್ಥಾಪಿತ ಸಂಸ್ಥೆಗಳು ಮತ್ತು ಸಿಬಂದಿಯ ಆಡಳಿತಕ್ಕೆ ಅಡ್ಡಿಪಡಿಸುವ ಅಥವಾ ಹಸ್ತಕ್ಷೇಪ ಮಾಡುವ ಯಾವುದೇ ಕ್ರಮವನ್ನು ಉದ್ದೇ ಶಿತ ಮಸೂ ದೆ ಯಲ್ಲಿ ಕಾನೂನು ಬಾಹಿರ ಚಟು ವ ಟಿಕೆ ಎಂದು ತಿಳಿ ಸ ಲಾ ಗಿ ದೆ.

2. ಕಾನೂನು ಬಾಹಿರ ಸಂಘಟ ನೆ:  ಯಾ ವುದೇ ಕಾನೂ ನು ಬಾ ಹಿರ ಚಟು ವ ಟಿ ಕೆ ಯಲ್ಲಿ ಪಾಲ್ಗೊ ಳ್ಳು ವುದು. ಪ್ರತ್ಯ ಕ್ಷ ವಾಗಿ ಇಲ್ಲವೇ ಪರೋ ಕ್ಷ ವಾಗಿ ಉತ್ತೇ ಜನ, ನೆರವು ನೀಡುವ ಸಂಘ ಟ ನೆ.
3ಮೂರು ಲಕ್ಷ ರೂ. ದಂಡ, 3 ವರ್ಷ ಜೈಲು: ಕಾನೂ ನು ಬಾ ಹಿರ ಸಂಘ ಟ ನೆಯ ಸಭೆ, ಚಟು ವ ಟಿ ಕೆ ಗ ಳಲ್ಲಿ ಪಾಲ್ಗೊ ಂಡಿರುವುದು ಸಾಬೀ ತಾದರೆ ಅಂಥ ವ್ಯಕ್ತಿ ಗಳಿಗೆ ಗರಿಷ್ಠ 3 ವರ್ಷ ಜೈಲು ಮತ್ತು 3 ಲಕ್ಷ ರೂ. ದಂಡ ವಿಧಿಸಲು ಅವ ಕಾ ಶ.

4ಏಳು ವರ್ಷ ಜೈಲು, 5 ಲಕ್ಷ ರೂ. ದಂಡ: ಕಾನೂನು ಬಾಹಿರ ಸಂಘಟನೆಯ ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ಎಸಗುವ ಅಥವಾ ಪ್ರೇರೇಪಿಸುವ ಅಥವಾ ಮಾಡಲು ಪ್ರಯತ್ನಿಸುವ ಅಥವಾ ಮಾಡಲು ಯೋಜಿಸುವವರಿಗೆ 7 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ.ವ ರೆಗೆ ದಂಡ ವಿಧಿಸಬಹುದಾಗಿದೆ.

ನಕ್ಸಲ್‌ವಾದ ಎಂದರೇನು?
ನಕ್ಸಲ್‌ವಾದ ಎನ್ನು ವುದು ಉಗ್ರ ಗಾಮಿ ಸಿದ್ಧಾಂತ ವಾ ಗಿದ್ದು, ಪ್ರಜಾಪ್ರಭುತ್ವ ಮತ್ತು ಪ್ರಜಾ ಸ ತ್ತಾ ತ್ಮಕ ಪ್ರಕ್ರಿ ಯೆ ಗ ಳಲ್ಲಿ ಅದು ವಿಶ್ವಾ ಸ ವನ್ನು ಇರಿ ಸು ವು ದಿಲ್ಲ. ತುಳಿ ತ ಕ್ಕೊ ಳ ಗಾ ದ ವರು, ದೌರ್ಜ ನ್ಯ ಕ್ಕೊ ಳ ಗಾ ದ ವರ ಪರ ಮತ್ತು ನ್ಯಾಯ ಕ್ಕಾಗಿ ಹೋರಾಟ ನಡೆ ಸು ವು ದಾಗಿ ಹೇಳಿ ಕೊ ಳ್ಳುವ ನಕ್ಸ ಲ್‌ ವಾದ ಅಥವಾ ನಕ್ಸ ಲರು ಕಾನೂನು ಬಾಹಿರ ಚಟು ವ ಟಿಕೆ ನಡೆ ಸು ತ್ತಾರೆ. ತಮ್ಮ ಸಾಧ ನೆ ಗಾಗಿ ಸಶಸ್ತ್ರ ಬಂಡಾ ಯವನ್ನು ಸಾರು ತ್ತಾರೆ. ವಿಶೇಷ ವಾಗಿ ಸರಕಾರ, ಪೊಲೀ ಸರು, ಭದ್ರತಾ ಪಡೆ ಗಳ ವಿರುದ್ದ ಹಿಂಸಾಚಾರವನ್ನು ಸಾಧಿಸು ತ್ತಾರೆ.

ಯಾರು ನಗರ ನಕ್ಸಲರು?
ಸರ ಳ ವಾಗಿ ಹೇಳ ಬೇ ಕೆಂದರೆ, ನಗರ ಪ್ರದೇ ಶ ಗ ಳಲ್ಲಿ ವಾಸಿ ಸು ತ್ತಿದ್ದು ನಕ್ಸಲ್‌ ಚಟು ವ ಟಿ ಕೆಗಳಿಗೆ ಸಹಾಯ ಮಾಡು ವ ವರು ಹಾಗೂ ನಕ್ಸ ಲರ ಸಹಾ ನು ಭೂ ತಿ ಗ ಳನ್ನು ನಗ ರ ನಕ್ಸ ಲರು ( ಅ ರ್ಬನ್‌ ನಕ್ಸ ಲ್‌ ) ಎಂದು ಕರೆ ಯ ಲಾ ಗು ತ್ತದೆ. ಬಲ ಪಂಥೀಯರು ಈ ಪದ ವನ್ನು ಹೆಚ್ಚು ಬಳ ಸು ತ್ತಾರೆ. ಬಾಲಿ ವುಡ್‌ ಚಿತ್ರ ರಂಗ ದ ನಿರ್ದೇ ಶಕ ವಿವೇಕ ಅಗ್ನಿ ಹೋತ್ರಿ “ಅರ್ಬನ್‌ ನಕ್ಸಲ್‌’ ಎಂಬ ಪುಸ್ತಕ ಕೂಡ ಬರೆ ದಿ ದ್ದಾರೆ. ಎಡ ಚಿಂತ ನೆಯ ಬುದ್ಧಿ ಜೀ ವಿ ಗಳು, ಕೆಲವು ಸಾಮಾ ಜಿಕ ಕಾರ್ಯ ಕ ರ್ತರು, ವಕೀ ಲರು, ಪತ್ರ ಕ ರ್ತರು ಸೇರಿ  ಸಂಘ ಸಂಸ್ಥೆ ಗ ಳನ್ನು “ಅರ್ಬನ್‌ ನಕ್ಸಲ್‌’ ಎಂದು ದೂಷಿ ಸ ಲಾ ಗು ತ್ತದೆ. ದಿಲ್ಲಿ ಸಿಎಂ ಅರ ವಿಂದ್‌ ಕೇಜ್ರಿ ವಾಲ್‌ ಅವ ರನ್ನು ಬಿಜೆಪಿ ಆಗಾಗ ನಗರ ನಕ್ಸಲ್‌ ಎಂದು ಛೇಡಿ ಸು ತ್ತ ದೆ!

ನಗರ ನಕ್ಸಲ್‌ ಆರೋ ಪಿ ತ ರು
2018ರಲ್ಲಿ ಮಹಾ ರಾ ಷ್ಟ್ರ ದಲ್ಲಿ ಸಂಭ ವಿ ಸಿದ ಭೀಮಾ ಕೋರೆ ಗಾಂವ್‌ ಹಿಂಸಾ ಚಾ ರ ಸಂಬಂಧ ಬಂಧಿ ಸ ಲಾದ ಪ್ರಮುಖ ಸಾಮಾ ಜಿಕ ಕಾರ್ಯ ಕ ರ್ತರು, ಎಡ ಚಿಂತ ನಾ ಕಾ ರ ರನ್ನು ಕೆಲ ವು ಮಾಧ್ಯ ಮ ಗಳು ಮತ್ತು ಬಲ ಪಂಥೀ ಯರು “ನಗರ ನಕ್ಸ ಲರು’ ಎಂದೇ ಸಂಬೋಧಿಸು ತ್ತಾರೆ. ಈ ಪ್ರಕ ರ ಣ ದಲ್ಲಿ 300 ಜನರನ್ನು ಬಂಧಿ ಸ ಲಾ ಗಿತ್ತು. ಸುಧೀರ್‌ ಧವಳೆ, ರೋನಾ ವಿಲ್ಸನ್‌, ಶೋಮಾ ಶೋನ್‌, ಮಹೇಶ್‌ ರಾವತ್‌, ಸುರೇಂದ್ರ ಗಾಡ್ಲಿಂಗ್‌, ವರ ವರ ರಾವ್‌, ಸುಧಾ ಭಾರ ದ್ವಾಜ್‌, ವೆರ್ನಾನ್‌ ಗೋನ್ಸಾಲ್‌Ì, ಅರುಣ್‌ ಫೆರಾ ರಿಯಾ ನಗರ ನಕ್ಸಲ್‌ ಎಂಬ ಆಪಾ ದಿ ತರ ಪಟ್ಟಿ ಯ ಲ್ಲಿ ರುವ ಪ್ರಮುಖ ಸಾಮಾ ಜಿಕ ಕಾರ್ಯಕರ್ತರಾಗಿದ್ದಾರೆ.

ಪ್ರಧಾನಿ ಮೋದಿ, ಅಮಿತ್‌  ಶಾ ರಿಂದಲೂ ಬಳಕೆ!
ಕೇಂದ್ರ ಸರಕಾರವೇ ಅಧಿಕೃತ ವಾಗಿ ಅರ್ಬನ್‌ ನಕ್ಸಲ್‌ ಪದ ಬಳಸುವುದಿಲ್ಲವಾದರೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿ ಬಹು ತೇಕ ಸಚಿ ವರು, ಸಂಸ ದರು ಈ ಪದವನ್ನು ಬಳ ಸು ತ್ತಾರೆ. ಕಳೆದ ಲೋಕ ಸಭೆ ಚುನಾ ವಣೆ ವೇಳೆಯೂ ಮೋದಿ ಅರ್ಬನ್‌ ನಕ್ಸಲ್‌ ಪದ ಬಳ ಸಿ ದ್ದಾರೆ. ಕಾಂಗ್ರೆಸ್‌ ಪಕ್ಷವು ಅರ್ಬನ್‌ ನಕ್ಸ ಲ ರಿಂದ ನಡೆ ಯು ತ್ತಿದೆ ಎಂದು ಆರೋ ಪಿ ಸಿ ದ್ದರು. ಬಿಜೆ ಪಿಯ ಬಹು ತೇಕ ನಾಯ ಕರು ಈ ಪದ ವನ್ನು ಬಳಸಿ ಟೀಕೆ ಮಾಡುತ್ತಾರೆ.

ತೆಲಂಗಾಣ, ಆಂಧ್ರ, ಒಡಿಶಾದಲ್ಲೂ ಕಾಯ್ದೆ
ಮಹಾರಾಷ್ಟ್ರದಲ್ಲಿ ಮುಕ್ತವಾಗಿಯೇ ನಗರ ನಕ್ಸ ಲ್‌ ನಿಯಂತ್ರಣ ಅಂಶ ವನ್ನು ಒಳ ಗೊಂಡಿ ರುವ ಮಸೂದೆಯನ್ನು ಮಂಡಿ ಸ ಲಾ ಗಿದೆ. ಇದೇ ಮಾದ ರಿಯ ಕಾನೂನುಗಳು ಕೆಲವು ರಾಜ್ಯ ಗ ಳಲ್ಲಿ ಜಾರಿ ಯ ಲ್ಲಿವೆ. ಈ ಕಾಯ್ದೆ ಗ ಳಲ್ಲಿ ಪ ರೋ ಕ್ಷ ವಾಗಿ ಪ್ರಸ್ತಾವಿಸ ಲಾ ಗಿದೆ. ಛತ್ತೀ ಸ್‌ ಗಢ, ತೆಲಂಗಾಣ, ಆಂಧ್ರಪ್ರ ದೇಶ, ಒಡಿಶಾ ಸೇರಿ ಕೆಲವು ರಾಜ್ಯ ದಲ್ಲಿ ಸಾರ್ವ ಜ ನಿಕ ಭದ್ರತಾ ಕಾಯ್ದೆ ಗಳು  ಅಸ್ತಿ ತ್ವ ದ ಲ್ಲಿವೆ. ನಕ್ಸಲ್‌ ಸಂಘ ಟ ನೆ ಗಳು ಮತ್ತು ನಿಷೇ ಧಿತ 48 ಸಂಸ್ಥೆ ಗಳ ಕಾನೂನು ಬಾಹಿರ ಚಟು ವ ಟಿ ಕೆ ಗ ಳನ್ನು ಈ ಕಾಯ್ದೆಯ ಮೂಲಕ ನಿಯಂತ್ರಿ ಸ ಲಾ ಗು ತ್ತದೆ.

ಅರ್ಬನ್‌ ನಕ್ಸಲ್‌: ಕೇಂದ್ರಕ್ಕೇ ಗೊತ್ತಿಲ್ಲ

ಬಲಪಂಥೀಯರು ಮತ್ತು ಬಲ ಪಂಥೀಯ ಸಹಾನುಭೂತಿಗಳು ಹೆಚ್ಚಾಗಿ ಬಳಸುವ ಈ ಅರ್ಬನ್‌ ನಕ್ಸಲ್‌ ಪದ ವನ್ನು ಸರಕಾರ ಕೂಡ ಬಳ ಸು ತ್ತಿ ದೆಯೇ ಎಂದು 2020ರಲ್ಲಿ ಟಿಎಂಸಿ ಸಂಸ ದ ರೊ ಬ್ಬರು ಸರಕಾರಕ್ಕೆ ಪ್ರಶ್ನೆ ಕೇಳಿ ದ್ದರು. ಈ ಕುರಿತು ಸಂಸ ತ್ತಿ ನಲ್ಲಿ ಲಿಖೀತ ಉತ್ತರ ನೀಡಿದ್ದ ಅಂದಿನ ಗೃಹ ಇಲಾ ಖೆಯ ರಾಜ್ಯ ಸಚಿವ ಜಿ.ಕಿ ಶನ್‌ ರೆಡ್ಡಿ, “ಕೇಂದ್ರ ಗೃಹ ವ್ಯವ ಹಾ ರಗಳ ಸಚಿ ವಾ ಲಯವು ಅರ್ಬನ್‌ ನಕ್ಸಲ್‌ ಎಂಬ ಪದ ವನ್ನು ಬಳಸುತ್ತಿಲ್ಲ’ ಎಂದು ಉತ್ತರಿಸಿದ್ದರು.

ಟಾಪ್ ನ್ಯೂಸ್

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwewqe

J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!

1-modi-BG

Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ

1-shah

J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ

ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು… ಜೀವಕ್ಕೆ ಮುಳುವಾದ ಇಡ್ಲಿ ತಿನ್ನುವ ಸ್ಪರ್ಧೆ

ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು… ಜೀವಕ್ಕೆ ಮುಳುವಾದ ಇಡ್ಲಿ ತಿನ್ನುವ ಸ್ಪರ್ಧೆ

Fake Visa: ನಕಲಿ ವೀಸಾ ಉತ್ಪಾದನೆಯ ಫ್ಯಾಕ್ಟರಿ ಪತ್ತೆ-ಮೂವರು ಆರೋಪಿಗಳ ಬಂಧನ

Fake Visa: ನಕಲಿ ವೀಸಾ ಉತ್ಪಾದನೆಯ ಫ್ಯಾಕ್ಟರಿ ಪತ್ತೆ-ಮೂವರು ಆರೋಪಿಗಳ ಬಂಧನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.