MAHE Convocation: ಕ್ಲಿಕ್‌ ಮಾಡುವ ಮೊದಲೇ ಯೋಚಿಸಿ: ಡಾ.ಇಂದ್ರಜಿತ್‌ ಭಟ್ಟಾಚಾರ್ಯ ಸಲಹೆ

ಮಾಹೆ ವಿಶ್ವವಿದ್ಯಾನಿಲಯ 32ನೇ ಘಟಿಕೋತ್ಸವ, ಪದವೀಧರರಿಗೆ ಪದವಿ ಪ್ರದಾನ

Team Udayavani, Nov 10, 2024, 3:22 AM IST

Mahe-Convo

ಮಣಿಪಾಲ: ಮನುಷ್ಯ ಯಂತ್ರದೊಂದಿಗೆ ಸ್ಪರ್ಧಿಸುವುದಲ್ಲ. ಬದಲಾಗಿ ಯಂತ್ರ ನೀಡುವ ಫ‌ಲಿತಾಂಶದ ಪರಿಣಾಮಕಾರಿ ಅನುಷ್ಠಾನ ತಿಳಿಯಬೇಕು. ಡಿಜಿಟಲ್‌ ಯುಗದಲ್ಲಿ ಡಿಜಿಟಲ್‌ ಸಾಕ್ಷರತೆಯೇ ಪ್ರಧಾನ. ಹಿಂದೆಲ್ಲ ಮಾತನಾಡುವ ಮೊದಲು ಯೋಚಿಸಬೇಕಿತ್ತು. ಈಗ “ಕ್ಲಿಕ್‌’ ಮಾಡುವ ಮೊದಲು ಯೋಚಿಸಬೇಕು. ಆ ಮೂಲಕ ಡಿಜಿಟಲ್‌ ಅರೆಸ್ಟ್‌ನಿಂದ ದೂರ ಇರಬಹುದು. ಇದಕ್ಕಾಗಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಮತ್ತು ಅನುಸರಿಸುವುದು ಅತಿ ಮುಖ್ಯ ಎಂದು ಹೊಸದಿಲ್ಲಿಯ ರಾಷ್ಟ್ರೀಯ ರೊಬೊಟಿಕ್‌ ಆ್ಯಂಡ್‌ ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ ಸಂಸ್ಥೆಯ(ಎನ್‌ಐಆರ್‌ಎ) ಡೈರೆಕ್ಟರ್‌ ಜನರಲ್‌ ಡಾ| ಇಂದ್ರಜಿತ್‌ ಭಟ್ಟಾಚಾರ್ಯ ತಿಳಿಸಿದರು.

ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯುತ್ತಿರುವ ಮಾಹೆ ವಿ.ವಿ.ಯ 32ನೇ ಘಟಿಕೋತ್ಸವದ ಎರಡನೇ ದಿನವಾದ ಶನಿವಾರ ಪದವೀಧರರಿಗೆ ಪದವಿ ಪ್ರದಾನಿಸಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಎಐನಲ್ಲಿ ಹಲವು ವಿಧಗಳು ಇವೆ. ಅವುಗಳನ್ನು ಭಿನ್ನ ರೂಪದಲ್ಲಿ ಬಳಸಲಾಗುತ್ತದೆ ಎಂಬುದು ಸಹಿತ ಅವು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿಶ್ಲೇಷಿಸಿದರು.

ಕೃತಕ ಬುದ್ಧಿಮತ್ತೆ ನಮ್ಮ ಉದ್ಯೋಗದ ಮೇಲೆ ಹೊಡೆತ ನೀಡುವುದಿಲ್ಲ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಎಷ್ಟು ಪ್ರಮಾಣದಲ್ಲಿ ಉತ್ಪಾದಕತೆ ಹೊರ ತೆಗೆಯುತ್ತೇವೆ ಎನ್ನುವುದೇ ಪ್ರಮುಖವಾಗುತ್ತದೆ. ಇ-ಕಾಮರ್ಸ್‌, ಶಿಕ್ಷಣ, ವ್ಯಾಪರ, ಆರೋಗ್ಯ, ಸಂಶೋಧನೆ ಹೀಗೆ ಎಲ್ಲ ಕ್ಷೇತ್ರದಲ್ಲೂ ಎಐ ಮುಖ್ಯವಾಗಿದೆ ಎಂದರು.

ವಿಮರ್ಶಾತ್ಮಕ ಚಿಂತನೆ, ಉತ್ತಮ ಸಂವಹನ, ಸೃಜನಶೀಲತೆ, ಒಗ್ಗಿಕೊಳ್ಳುವಿಕೆ ಮತ್ತು ನಿರಂತರ ಕಲಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವಿಕಸಿತ ಭಾರತಕ್ಕೆ ಶ್ರೇಷ್ಠ ಕೊಡುಗೆ ನೀಡಲು ಸಾಧ್ಯ. ಡಿಜಿಟಲ್‌ ಯುಗಕ್ಕೆ ನಾವು ಸ್ಥಿತ್ಯಂತರಗೊಳ್ಳುತ್ತಿದ್ದೇವೆ. ಡಿಜಿಟಲ್‌ ಸುರಕ್ಷೆಯ ಜತೆಗೆ ಸುರಕ್ಷಿತ ಭಾರತ ಆಗಬೇಕು. ಈ ಹಿನ್ನೆಲೆಯಲ್ಲಿ ಸೈಬರ್‌ ಹೈಜೆನಿಕ್‌ ಉಪಕ್ರಮಗಳ ಬಳಕೆ ಅಗತ್ಯ. ನಮ್ಮ ಚಿಂತನೆ ಬಗ್ಗೆ ಸ್ಪಷ್ಟತೆ ಹಾಗೂ ಎಚ್ಚರ ಇರಬೇಕು. ನಮ್ಮ ಮಾತು, ಕ್ರಿಯೆ, ಹವ್ಯಾಸ ಮತ್ತು ವ್ಯಕ್ತಿತ್ವವು ನಮ್ಮ ಗುರಿ ಸಾಧನೆಗೆ ಪ್ರೇರಣೆಯಾಗಿರುತ್ತದೆ ಎಂದು ಪದವೀಧರರಿಗೆ ಸಲಹೆ ನೀಡಿದರು. ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಘಟಿಕೋತ್ಸವ ಪ್ರಕ್ರಿಯೆ ಮುನ್ನೆಡೆಸಿದರು.

ಮಾಹೆ ಟ್ರಸ್ಟ್‌ ಟ್ರಸ್ಟಿ ವಸಂತಿ ಆರ್‌. ಪೈ ಅವರು ಡಾ| ಇಂದ್ರಜಿತ್‌ ಭಟ್ಟಾಚಾರ್ಯ ಜತೆ ಸೇರಿ ಮೊಲೆಕ್ಯುಲರ್‌ ಬಯಾಲಜಿಯಲ್ಲಿ ಎಂ.ಎಸ್ಸಿ ಪಡೆದ ಅಡ್ಲೆ„ನ್‌ ಸಿಯೋನಾ ರೆಬೆಲ್ಲೊ, ಎಂಐಸಿಯ ಬಿಎ ಮೀಡಿಯಾ ಮತ್ತು ಕಮ್ಯುನಿಕೇಶನ್‌ನ ಸಮ್ರಗ್ಗಿ ಪಾತ್ರ, ಪಿಎಚ್‌ಪಿಎಸ್‌ನ ಎಂಎಸ್ಸಿ(ಬಯೋಸ್ಟಾಟಿಸ್ಟಿಕ್ಸ್‌) ಪದವೀಧರೆ ಜೀವಿತ್ಕಾ ಕೆ.ಎಂ. ಅವರಿಗೆ 2024ನೇ ಸಾಲಿನ ಡಾ| ಟಿಎಂಎ ಪೈ ಚಿನ್ನದ ಪದಕ ಸಹಿತ ಪದವಿ ಪ್ರದಾನ ಮಾಡಿದರು. ಸಹ ಕುಲಪತಿಗಳಾದ ಡಾ| ಶರತ್‌ ಕೆ. ರಾವ್‌, ಡಾ| ದಿಲೀಪ್‌ ಜಿ. ನಾಯ್ಕ, ಕುಲಸಚಿವ ಡಾ| ಪಿ.ಗಿರಿಧರ್‌ ಕಿಣಿ, ಮೌಲ್ಯಮಾಪನ ಕುಲಸಚಿವ ಡಾ| ವಿನೋದ್‌ ಥಾಮಸ್‌ ಸಹಿತ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್‌ ಪ್ರಸ್ತಾವನೆಗೈದು, ಮಾಹೆಯ ಸಾಧನೆಯ ವರದಿ ಮಂಡಿಸಿದರು. ಸಹ ಕುಲಪತಿ ಡಾ| ನಾರಾಯಣ ಸಭಾಹಿತ್‌ ಸ್ವಾಗತಿಸಿ, ಎಂಐಟಿ ನಿರ್ದೇಶಕ ಕ| ಡಾ| ಅನಿಲ್‌ ರಾಣ ಅತಿಥಿ ಪರಿಚಯ ಮಾಡಿದರು. ಮೌಲ್ಯಮಾಪನ ಡೆಪ್ಯೂಟಿ ರಿಜಿಸ್ಟ್ರಾರ್‌ ಡಾ| ಮಧುಕರ್‌ ಮಲ್ಯ ಪದವೀಧರರ ಅಂಕಿ ಅಂಶ ನೀಡಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಎಂಐಸಿ ನಿರ್ದೇಶಕಿ ಡಾ| ಪದ್ಮಾರಾಣಿ ವಂದಿಸಿದರು. ಎಂಕಾಡ್ಸ್‌ ಸಹಾಯಕ ಪ್ರಾಧ್ಯಾಪಕ ಡಾ| ಆನಂದ್‌ ದೀಪ್‌ ಶುಕ್ಲಾ ನಿರೂಪಿಸಿದರು.

ಟಾಪ್ ನ್ಯೂಸ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.