ಪುಣ್ಯ ಪರ್ವದಿನ ಸಂಕ್ರಮಣ


Team Udayavani, Jan 15, 2020, 6:00 AM IST

mk-34

ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಜಗದ ಚರಾಚರ ಆಗು- ಹೋಗುಗಳಿಗೆ ಸೂರ್ಯನೇ ಕಾರಣ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ತನ್ನ ಪಥ ಬದಲಿಸಿ, ವಸಂತಕಾಲ ಸಮೀಪಿಸುವ ಕಾಲವಾದ್ದರಿಂದ ಪ್ರಕೃತಿಯಲ್ಲಿ ವಿಶೇಷ ಚೈತನ್ಯ, ಸೌಂದರ್ಯ ತುಂಬುವ ಕಾಲ. ಆದ್ದರಿಂದ ಸಂಕ್ರಾಂತಿಗೆ ಎಲ್ಲಿಲ್ಲದ ಪ್ರಮುಖ್ಯತೆಯಿದೆ.

ಭರತ ಖಂಡವು ಹಬ್ಬಗಳ ನಾಡು. ವರ್ಷದುದ್ದಕ್ಕೂ ಶಿವರಾತ್ರಿ, ಯುಗಾದಿ, ರಂಜಾನ್‌, ಕಾರ ಹುಣ್ಣಿಮೆ, ದುರ್ಗಾಷ್ಟಮಿ, ನಾಗರ ಪಂಚಮಿ, ಗಣೇಶ ಹಬ್ಬ, ದೀಪಾವಳಿ, ದಸರಾ, ಕ್ರಿಸ್‌ಮಸ್‌, ರಾಮನವಮಿ ಎಂಬೆಲ್ಲ ನೂರಾರು ಹಬ್ಬಗಳನ್ನು ಆಚರಿಸಲಾಗುತ್ತಿದೆ. ಪ್ರತಿ ಹಬ್ಬಕ್ಕೂ ತನ್ನದೆ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ಕಾಳಜಿ ಇದೆ. ಈ ಹಬ್ಬಗಳಲ್ಲಿ ಆರೋಗ್ಯದ ವಿಚಾರಗಳು, ಸ್ನೇಹ, ಬ್ರಾತೃತ್ವ, ಪ್ರೀತಿ-ಮಮಕಾರಗಳ ಭಾವನಾವೇಶ ಎದ್ದು ಕಾಣುತ್ತವೆ. ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ಬಹುತೇಕ ಭಾರತೀಯ ಹಬ್ಬಗಳಲ್ಲಿ ಗುರುತಿಸಬಹುದು. ಅಧುನಿಕ ಕಾಲದ ಒತ್ತಡಯುಕ್ತ ಜೀವನದಲ್ಲೂ ಹಬ್ಬಗಳ ಮಹತ್ವ ಹೆಚ್ಚುತ್ತಲಿರುವುದು ಸಂತಸದಾಯಕ.

ಹಬ್ಬಗಳಿಂದ ಸಂತೋಷ, ಸಡಗರ, ಸಂಭ್ರಮ ತುಂಬಿರುವುದರಿಂದ ಮನುಷ್ಯನ ಮಾನಸಿಕ, ದೈಹಿಕ ಆರೋಗ್ಯದ ಮೇಲೂ ಹಬ್ಬಗಳು ಧನಾತ್ಮಕ ಪರಿಣಾಮ ಬೀರುತ್ತವೆ. ಹಬ್ಬಗಳು ಎಲ್ಲ ಧರ್ಮಗಳ ಆಚರಣೆಗಳಿಗೆ ತಕ್ಕಂತಿರುತ್ತವೆ.

ಬಹಳಷ್ಟು ಹಬ್ಬಗಳನ್ನು ಚಾಂದ್ರಮಾನ, ನಿರಯನ ಪಂಚಾಗದಂತೆ ಆಚರಿಸಿದರೆ, ಮಕರ ಸಂಕ್ರಾಂತಿಯನ್ನು ಮಾತ್ರ ಸಾಯನ, ಸೂರ್ಯ ಚಲನೆಯಂತೆ ಆಚರಿಸಲಾಗುತ್ತದೆ. ಹಬ್ಬಗಳನ್ನು ಎಲ್ಲೆಡೆ ಆಚರಿಸಿದರು ಸಹ ಹೆಸರು ಮಾತ್ರ ಬೇರೆಯಾಗಿರುವುದನ್ನು ಕಾಣುತ್ತೇವೆ. ಹಾಗೆಯೇ ಸಂಕ್ರಮಣ ಹಬ್ಬ ಕೂಡ. ಸುಗ್ಗಿಯ ಹಬ್ಬ ಎನಿಸಿಕೊಂಡಿರುವ ಸಂಕ್ರಮಣದ ಸೊಬಗು ನಾಡಿನೆಲ್ಲೆಡೆ ತುಂಬಿಕೊಳ್ಳುತ್ತಲಿದೆ.

ಸಂಕ್ರಮಣದ ಮೊದಲ ದಿನ ವನ್ನು ಮನೆ ಸ್ವತ್ಛಗೊಳಿಸಿ, ರಂಗವಲ್ಲಿ ಹಾಕಿ ಹೊಸದನ್ನು ಪಡೆಯುವ ಭೋಗಿ ಹಬ್ಬದೊಂದಿಗೆ ಪ್ರಾರಂಭಿಸುತ್ತಾರೆ. ಬೆಳಿಗ್ಗೆ ಎಳ್ಳು ಹಚ್ಚಿ ಅಭ್ಯಂಗ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆಗಳನ್ನು ಸಮರ್ಪಿಸುತ್ತಾರೆ. ದೇವರಿಗೆ ಹಾಗೂ ಗಂಡು ಮಕ್ಕಳಿಗೆ ಆರತಿ ಬೆಳಗುತ್ತಾರೆ. ಎತ್ತುಗಳಿಗೆ ಮೈ ತೊಳೆದು, ಕೊಂಬುಗಳಿಗೆ ಬಣ್ಣ ಹಚ್ಚಿ, ಗೆಜ್ಜೆ-ತುರಾಯಿ ಕಟ್ಟಿ, ಪೂಜಿಸುತ್ತಾರೆ. ಮತ್ತೆ ಕೆಲ ಕಡೆಗೆ ದನಕರುಗಳನ್ನು ಕಿಚ್ಚು ಹಾಯಿಸುತ್ತಾರೆ. ಭೋಗಿಯಂದು ಗಜ್ಜರಿ, ಸೌತೆಕಾಯಿ, ಎಲ್ಲ ತರಕಾರಿ, ಸೊಪ್ಪು, ಕಡಲೆಕಾಯಿ, ಅವರೆ, ತೊಗರಿ ಸೇರಿದಂತೆ ಎಲ್ಲ ಬಗೆಯ ಸಿರಿಧಾನ್ಯಗಳ ಮಿಶ್ರಣದ ಪಲ್ಲೆ, ಎಳ್ಳು, ಶೇಂಗಾ, ಪುಟಾಣಿ, ಗುರೆಳ್ಳು, ಕರಿ-ಬಿಳಿ ಎಳ್ಳು, ಬೆಳ್ಳುಳ್ಳಿ ಸೇರಿದಂತೆ ತರಹೆವಾರಿ ಚಟ್ನಿಗಳು, ಎಳ್ಳು-ಬೆಲ್ಲದ ಉಂಡಿ, ಶೇಂಗಾ ಉಂಡಿಗಳ ಸಿಹಿ. ಬಿಳಿ ಎಳ್ಳು ಹಚ್ಚಿದ ಸಜ್ಜಿ, ಜೋಳದ ರೊಟ್ಟಿ, ಬಾರೆಹಣ್ಣು, ಬಾಳೆಹಣ್ಣು, ಬೆಲ್ಲದಚ್ಚು, ಕಲ್ಲುಸಕ್ಕರೆ, ಕಬ್ಬು, ಕಡುಬು, ಕಡಲೆಕಾಯಿ, ಎಳ್ಳು-ಬೆಲ್ಲದ ಮಿಶ್ರಣ ಹೀಗೆ ವಿಶೇಷ ನೈವೇದ್ಯ ದೇವರಿಗೆ ಅರ್ಪಿಸಿ, ಆಪೆ¤àಷ್ಟರಿಗೆ ಹಂಚಿ ತಾವೂ ಸ್ವೀಕರಿಸುತ್ತಾರೆ.

ಮರುದಿನ ಹೊಸ ಬಟ್ಟೆ ಧರಿಸಿ, ದೇವರಿಗೆ ಪೂಜೆ ಸಲ್ಲಿಸಿ, ಎಳ್ಳುಬೆಲ್ಲ ಕೊಟ್ಟು ನಾವು ನೀವು ಎಳ್ಳುಬೆಲ್ಲದಂಗ ಇರೋಣ ಎಂದು ಹೇಳುತ್ತ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ವರ್ಷದುದ್ದಕ್ಕೂ ವಿವಿಧ ಕಾರಣಕ್ಕೆ ಕೆಟ್ಟಿರುವ ಮನಸ್ಸುಗಳನ್ನು ಕೂಡಿಸಿಕೊಂಡು ಜೀವನದಲ್ಲಿ ಸಾಮರಸ್ಯ ಬೆಳೆಸಿಕೊಳ್ಳಲು, ಕಹಿ ಮರೆತು ಸಿಹಿ ತಿನ್ನೋಣ ಎಂಬ ಸಂಕೇತವಾಗಿ ಎಳ್ಳು-ಬೆಲ್ಲದ ಮಿಶ್ರಣ ಎಲ್ಲರಿಗೂ ಹಂಚಿ ಸ್ನೇಹ-ಪ್ರೀತಿ, ಸೌಹಾರ್ದತೆ ಬೆಳೆಸಿಕೊಳ್ಳುತ್ತಾರೆ. ದೂರದೂರಿನ ಮಿತ್ರ-ಬಂಧುಗಳಿಗೆ ಅಂಚೆ, ಕೊರಿಯರ್‌ ಮೂಲಕ ಉತ್ತಮ ಸಂದೇಶದೊಂದಿಗೆ ಎಳ್ಳು-ಬೆಲ್ಲ ವಿನಿಮಯ ನಡೆಯುತ್ತದೆ.

ಉತ್ತರಾಯಣ ಪುಣ್ಯಕಾಲ- “ಆರೋಗ್ಯ ಭಾಸ್ಕರಾತ್‌ ಇಚ್ಛೇತ್‌’ ಆರೋಗ್ಯಭಾಗ್ಯಕ್ಕೆ ಸೂರ್ಯೋಪಾಸನೆ, ಆರಾಧನೆ ಮುಖ್ಯ. ಸೂರ್ಯನು ದಕ್ಷಿಣ ಪಥದಿಂದ ಉತ್ತರ ಪಥದತ್ತ ಸಾಗುವ ಪುಣ್ಯಕಾಲ. ಮಕರ ಕರ್ಕಾಟಕ ಸಂಕ್ರಾಂತಿ ವೃತ್ತದಲ್ಲಿ ಸೂರ್ಯನು ಬರುವುದರಿಂದ ಇದು ಸೂರ್ಯದೇವನ ಆರಾಧನಾ ಹಬ್ಬವೆಂದೂ ಕರೆಯಲಾಗುತ್ತಿದೆ. ಮಕರ ರಾಶಿಗೆ ಶನಿದೇವನೆ ಒಡೆಯ. ಸೂರ್ಯ ತನ್ನ ಸುತ್ತ ಶನಿಯನ್ನು ಸಂಧಿಸುವ ದಿನ. ಭಾರತೀಯ ಕಾಲಮಾನದಂತೆ ಪುಷ್ಯ ಮಾಸದಲ್ಲಿ ಅಂದರೆ ಜನವರಿ 14-15ರಂದು ಬರುವ ಹಬ್ಬವು ಉತ್ತರಾಯಣ ಪುಣ್ಯಕಾಲ, ದೇವತೆಗಳ ಕಾಲದಲ್ಲಿ ಬರುವ ಹಬ್ಬವೆಂದು ಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಸಂಕ್ರಮಣದ ಉತ್ತರಾಯಣ ಪುಣ್ಯಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎನ್ನಲಾಗುತ್ತದೆ. ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ಬಹುತೇಕರು ನದಿಗಳ ಪುಣ್ಯಸ್ನಾನ ಮಾಡುತ್ತಾರೆ. ಧಾರ್ಮಿಕ ಶ್ರೇಷ್ಠತೆ ಪಡೆದ ಗಂಗಾ, ಕೃಷ್ಣಾ, ತುಂಗಾ, ಕಾವೇರಿ ನದಿಗಳಲ್ಲಂತೂ ಹಬ್ಬದ ದಿನ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡುವರು.

ಕರ್ಕಾಟಕ ವೃತ್ತಕ್ಕೆ ಸೂರ್ಯನು ಬರುವುದರಿಂದ ಮೈಕೊರೆಯುವ ಚಳಿಗಾಲ ಕೊಂಚ ದೂರವಾಗಿ ಬೇಸಿಗೆ ಪ್ರಾರಂಭವಾಗುವುದು. ಹಾಗೂ ಈವರೆಗೆ ದೊಡ್ಡದಾಗಿದ್ದ ರಾತ್ರಿ ಹೊತ್ತು ಕಡಿಮೆಯಾಗಿ ಹಗಲು ದೊಡ್ಡದಾಗುತ್ತವೆ. ತಮಸೋಮಾ ಜ್ಯೋತಿರ್ಗಮಯ ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವಂತೆ ಜ್ಞಾನದ ಸಂಕೇತವಾದ ಬೆಳಕು ಹೆಚ್ಚಾಗುವ ಕಾಲ ಜ್ಞಾನ ತರುವ ಹಬ್ಬವಾಗಿದೆ. ಶಾಸ್ತ್ರಗಳ ಪ್ರಕಾರ ಸಂಕ್ರಮಣದಂದು ಕಪ್ಪು ಎಳ್ಳುಗಳಿಂದ ಸ್ನಾನ ಮಾಡಿ, ಬ್ರಾಹ್ಮಣರಿಗೆ ಎಳ್ಳುದಾನ ಮಾಡುವುದು ವಾಡಿಕೆ. ಪುಣ್ಯದಿನದ ಈ ದಾನದಿಂದ ಸೂರ್ಯನು ಸಂತುಷ್ಟನಾಗಿ ಆಜನ್ಮ ಪರ್ಯಂತ ಅನುಗ್ರಹಿಸಿ, ಸಕಲ ಇಷ್ಟಾರ್ಥ ಸಿದ್ಧಿ ನೀಡುತ್ತಾನೆಂಬ ನಂಬಿಕೆಯಿದೆ.

ಶ್ರೀ ಕೃಷ್ಣಪರಮಾತ್ಮನು ಗೀತೆಯಲ್ಲಿ ಹೇಳಿದಂತೆ ಆಯಣಗಳಲ್ಲಿ ಉತ್ತರಾಯಣವೆ ಶ್ರೇಷ್ಠವಾಗಿದೆ. ಕುರುಕ್ಷೇತ್ರ ಯುದ್ಧದಲ್ಲಿ ಇಚ್ಛಾಮರಣಿಯಾದ ಭೀಷ್ಮ ಪಿತಾಮಹನು ಅರ್ಜುನನ ಬಾಣಗಳ ಶರಶಯೆಯಲ್ಲಿ ಮಲಗಿ ಯಮಯಾತನೆ ಅನುಭವಿಸುತ್ತಿದ್ದರೂ ದಕ್ಷಿಣಾಯಣದಲ್ಲಿ ದೇಹತ್ಯಾಗ ಬೇಡವೆಂದು ಉತ್ತರಾಯಣ ಕಾಲ ದವರೆಗೂ ಕಾಯುವ ಕಥೆಯಿದೆ. ಶಿವ-ಪಾರ್ವತಿಯರ ವಿವಾಹ, ಬ್ರಹ್ಮದೇವನು ಜಗತ್ತಿನ ಸೃಷ್ಟಿ ಪ್ರಾರಂಭಿಸಿದ್ದು, ಇಂದ್ರದೇವನಿಗೆ ಗೌತಮ ಮುನಿಗಳು ಶಾಪ ವಿಮೋಚನೆ ಮಾಡಿದ್ದು, ಶ್ರೀಮನ್‌ನಾರಾಯಣನು ವರಹಾವತಾರದಲ್ಲಿ ಭೂಮಿಗೆ ಪಾದಸ್ಪರ್ಷ ಮಾಡಿದ್ದು, ಸಮುದ್ರ ಮಂಥನದಲ್ಲಿ ಮಹಾಲಕ್ಷ್ಮೀ ಅವತರಿಸಿದ್ದು, ಭಗೀರಥ ಮಹಾರಾಜ ತಪಗೈದು ಗಂಗೆಯನ್ನು ಭುವಿಗೆ ತಂದದ್ದು, ಋಷಿ-ಮುನಿಗಳು ತಪಸ್ಸು ಮಾಡಿದ್ದು ಉತ್ತರಾಯಣದ ಪುಣ್ಯಕಾಲದಲ್ಲೆ ಎಂದು ಪಂಡಿತರು ಹೇಳುತ್ತಾರೆ. ಈಗಲೂ ಸಹ ವಿವಾಹ, ನಾಮಕರಣ, ಗೃಹಪ್ರವೇಶ ಗಳಂಥ ಶುಭ ಕಾರ್ಯಗಳು ಉತ್ತರಾಯಣದಲ್ಲೆ ನಡೆಯುತ್ತವೆ.

ಹಬ್ಬದಲ್ಲಿ ವಿಜ್ಞಾನ- ಸಂಕ್ರಮಣ ಹಬ್ಬದಲ್ಲೂ ಇತರೆ ಹಬ್ಬಗಳಂತೆ ವೈಜ್ಞಾನಿಕ ಭಾವ ಅಡಕವಾಗಿದೆ. ಶುದ್ಧ ಚಳಿಗಾಲದಲ್ಲಿ ಬರುವ ಸಂಕ್ರಮಣದಲ್ಲಿ ಎಳ್ಳು, ಕೊಬ್ಬರಿ, ಕಡಲೆಕಾಯಿಗಳ ಸೇವನೆಯಿಂದ ಚಳಿಗೆ ಸುಕ್ಕುಗಟ್ಟಿದ ಚರ್ಮಕ್ಕೆ ಎಣ್ಣೆ ಅಂಶ ದೊರೆತು, ಚರ್ಮ ಒಡೆಯುವಿಕೆ ನಿಲ್ಲುತ್ತದೆ. ಕಾಂತಿ ಹೆಚ್ಚುತ್ತದೆ. ಅದರಂತೆ ರೈತನ ಮಿತ್ರರಾದ ಎತ್ತುಗಳು ಸೇರಿದಂತೆ ದನ-ಕರುಗಳನ್ನು ಕಿಚ್ಚು ಹಾಯಿಸುವುದರಿಂದ ಅವುಗಳ ಮೈಮೇಲೆ ಮೆತ್ತಿಕೊಂಡಿರುವ ಉಣ್ಣೆಯಂಥ ಉಪದ್ರವಿಗಳು ಶಾಖಕ್ಕೆ ಬಿದ್ದು ಹೋಗುವುದರಿಂದ ದನಗಳಿಗೆ ಹಿತವಾಗುವುದು.

ವಿವಿಧೆಡೆ ಆಚರಣೆ- ಸಂಕ್ರಾಂತಿಯ ಸಂಭ್ರಮ ದೇಶಾದ್ಯಂತ ನಡೆಯುವುದು. ಹಬ್ಬ ಒಂದೆಯಾದರೂ ಹೆಸರು ಮಾತ್ರ ಬೇರೆ ಬೇರೆಯಾಗಿರುವುದನ್ನು ಕಾಣುತ್ತೇವೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಮಣ, ತಮಿಳುನಾಡಿನಲ್ಲಿ ಪೊಂಗಲ್‌, ಕೇರಳದಲ್ಲಿ ಮಕರ ವಿಳಕ್ಕು, ಪಂಜಾಬ್‌ ಹಾಗೂ ಹರಿಯಾಣದಲ್ಲಿ ಲೋಹರಿ, ಪಶ್ಚಿಮ ಬಂಗಾಳ ಅಸ್ಸಾಂನಲ್ಲಿ ಬೋಗಲಿ ಬಿಹು, ಗುಜರಾತ್‌, ರಾಜಸ್ಥಾನದಲ್ಲಿ ಉತ್ತರಾಯಣ್‌, ಮಹಾರಾಷ್ಟ್ರದಲ್ಲಿ ಕುಸುರಕಾಳ ಅಥವಾ ಎಳ್ಳು ಲಡ್ಡು ವಿತರಿಸಿ ತಿಳಗೂಳ್‌ ಘಾ, ಆಣಿ ಘೋಡ್‌ ಘೋಡ್‌ ಬೋಲಾ ಎನ್ನುವರು. ಹೀಗೆ ದೇಶದ ಎಲ್ಲ ಭಾಗಗಳಲ್ಲೂ ಆಚರಿಸಲಾಗುವ ಈ ಹಬ್ಬ ಹೆಚ್ಚು ಮಹತ್ವ ಪಡೆದಿದೆ.

ಭೀಕರ ಬರಗಾಲ, ಬಳಿಕ ಪ್ರವಾಹದ ನಡುವೆಯೂ ಸಂಭ್ರಮದಿಂದ ಆಚರಿಸುವ ಸಂಕ್ರಮಣವು ನಾಡಿನ ಜನತೆಯ ಸಂಕಷ್ಟಗಳನ್ನು ದೂರಮಾಡಿ, ಸ್ನೇಹ, ಸುಖ, ಶಾಂತಿ, ನೆಮ್ಮದಿಗಳು ಎಲ್ಲರ ಬಾಳಲ್ಲಿ ನಲಿದಾಡಲಿ ಎಂದು ಆಶಿಸೋಣ.

ಬಿ.ಟಿ.ಪತ್ತಾರ, ತೇರದಾಳ

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.