ಜಯನಗರದ ಮಳೆಮಲ್ಲೇಶ್ವರ ಗುಡ್ಡದಲ್ಲಿ ಕರಡಿ ಪ್ರತ್ಯಕ್ಷ : ಭಯಭೀತರಾದ ಜನತೆ
Team Udayavani, May 26, 2021, 10:10 PM IST
ಗಂಗಾವತಿ: ನಗರದ ಜಯನಗರದ ಮಳೆಮಲ್ಲೇಶ್ವರ ಗುಡ್ಡದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ವಾಕಿಂಗ್ ಬಂದವರು ಭಯಭೀತಗೊಂಡ ಘಟನೆ ಬುಧವಾರ ಸಂಜೆ ಜರುಗಿದೆ.
ನಗರದಲ್ಲಿ ಒಂದು ತಿಂಗಳಲ್ಲಿ ಕರಡಿ ಪ್ರತ್ಯಕ್ಷವಾಗುತ್ತಿರುವುದು ಇದು ಎರಡನೇ ಬಾರಿ, 15 ದಿನಗಳ ಹಿಂದೆ ಬಸ್ ಡಿಪೋ ನೀಲಕಂಠೇಶ್ವರ ಕ್ಯಾಂಪ್ ಮೂಲಕ ಕರಡಿಯೊಂದು ಬಂದು ಇಬ್ಬರು ಗೃಹಣಿಯರು ಸೇರಿ ಪಾರ್ಕ್ ನಲ್ಲಿದ್ದ ಪೌರಕಾರ್ಮಿಕನೊರ್ವನನ್ನು ಕಚ್ಚಿ ಗಾಯಗೊಳಿಸಿತ್ತು. ಆರು ದಿನಗಳ ಹಿಂದೆ ಮೂರು ಚಿರತೆಗಳು ಜಯನಗರದ ಸಿದ್ದಿಕೇರಿಯ ಗದ್ದೆಯಲ್ಲಿದ್ದ ಕುರಿ ಹಿಂಡಿನ ಮೇಲೆ ದಾಳಿ ಮಾಡಿ 32 ಕುರಿಗಳನ್ನು ಕೊಂದು ಹಾಕಿದ್ದವು.
ಇದನ್ನೂ ಓದಿ :ಮೈಸೂರು : ಮೇಯರ್ ರುಕ್ಮಿಣಿ ಮಾದೇಗೌಡ ಅವರ ಪಾಲಿಕೆ ಸದಸ್ಯತ್ವ ರದ್ದು, ಮೇಯರ್ ಸ್ಥಾನಕ್ಕೂ ಕಂಟಕ
ಇಂದು ಮತ್ತೆ ಕರಡಿ ಜಯನಗರ ಗುಡ್ಡದಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಮೂಡಿಸಿದೆ. ಸ್ಥಳಕ್ಕೆ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸಂಪುಟದಲ್ಲಿ ನಮಗೂ ಅವಕಾಶ ಕೊಡಿ: ಇಬ್ಬರು ಕಾಂಗ್ರೆಸ್ ಶಾಸಕರ ಪಟ್ಟು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.