ದಿನದ 24 ತಾಸು ತೆರೆಯಲಿದೆ ಮಳಿಗೆ :ಕಾರ್ಮಿಕ ಇಲಾಖೆ ಅಧಿಸೂಚನೆ
Team Udayavani, Jan 3, 2021, 6:40 AM IST
ಬೆಂಗಳೂರು: ಹತ್ತಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ವಾಣಿಜ್ಯ ಮಳಿಗೆಗಳು ವಾರದ ಏಳೂ ದಿನ, ದಿನದ 24 ತಾಸು ಕೂಡ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಕುರಿತು ಕಾರ್ಮಿಕ ಇಲಾಖೆ ಮೂಲಕ ಅಧಿಸೂಚನೆ ಹೊರಡಿಸಲಾಗಿದ್ದು, ಮುಂದಿನ ಮೂರು ವರ್ಷಗಳಿಗೆ ಈ ಅಧಿಸೂಚನೆ ಅನ್ವಯವಾಗಲಿದೆ. ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳು ತಮ್ಮ ನೌಕರರಿಗೆ ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ರಜೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಜೆ ಮತ್ತು ವಾರದ ರಜೆಯಲ್ಲಿರುವ ಉದ್ಯೋಗಿಗಳ ಮಾಹಿತಿಯನ್ನು ಎಲ್ಲರಿಗೂ ಕಾಣಿಸುವಂತೆ ಪ್ರದರ್ಶಿಸಬೇಕು. ಕಾರ್ಮಿಕರಿಗೆ ವೇತನ ಮತ್ತು ಹೆಚ್ಚುವರಿ ಅವಧಿಯ ಭತ್ಯೆಯನ್ನು 1963ರ ಸಂಬಳ ಮತ್ತು ಭತ್ತೆ ಕಾಯ್ದೆ ಅನ್ವಯ ನೀಡಬೇಕು.
ಗರಿಷ್ಠ 8 ತಾಸು ಕೆಲಸ
ಪ್ರತೀ ಕಾರ್ಮಿಕನನ್ನು 8 ತಾಸು ಮೀರಿ ದುಡಿಸಿಕೊಳ್ಳುವಂತಿಲ್ಲ. ಹೆಚ್ಚುವರಿ ಅವಧಿಯೂ ಗರಿಷ್ಠ 2 ತಾಸು ಮೀರುವಂತಿಲ್ಲ. ಮೂರು ತಿಂಗಳಲ್ಲಿ ಹೆಚ್ಚುವರಿ ಅವಧಿ 50 ತಾಸು ಮೀರುವಂತಿಲ್ಲ.
ಕಾರ್ಮಿಕರನ್ನು ರಜೆಯ ದಿನ ಅಥವಾ ಕೆಲಸದ ಅವಧಿ ಮುಗಿದ ಮೇಲೆ ನಿರ್ದಿಷ್ಟ ಸೂಚನೆ ಇಲ್ಲದೇ ಹೆಚ್ಚುವರಿ ಅವಧಿ ಕೆಲಸ ಮಾಡಿಸುವುದು ಕಂಡುಬಂದರೆ ಅಂತಹ ಅಂಗಡಿ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ರಾತ್ರಿ 8 ಗಂಟೆ ಅನಂತರ ಮಹಿಳಾ ಕಾರ್ಮಿಕರನ್ನು ಕೆಲಸ ಮಾಡಿಸಿಕೊಳ್ಳುವಂತಿಲ್ಲ. ಒಂದು ವೇಳೆ ಮಹಿಳಾ ಕಾರ್ಮಿಕರು ಲಿಖೀತ ರೂಪದಲ್ಲಿ ಒಪ್ಪಿಗೆ ನೀಡಿದರೆ ರಾತ್ರಿ 8ರಿಂದ ಬೆಳಗಿನ 6 ಗಂಟೆಯ ತನಕ ಅವರ ಗೌರವಕ್ಕೆ ಧಕ್ಕೆ ಬಾರದಂತೆ, ರಕ್ಷಣೆ ನೀಡಿ, ಕೆಲಸ ಒದಗಿಸಬಹುದು. ಎಲ್ಲ ಮಹಿಳಾ ಸಿಬಂದಿಗೆ ಶಿಪ್ಟ್ ಆಧಾರದಲ್ಲಿಯೇ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.