![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 14, 2022, 7:50 AM IST
ನವದೆಹಲಿ: ಆತ ಸರ್ಕಾರಿ ಅಧಿಕಾರಿಯೊಬ್ಬರ ಪುತ್ರ. ಇತ್ತೀಚೆಗೆ ಕಾರು ಓಡಿಸುವ ಭರದಲ್ಲಿ ಪಾದಚಾರಿಯೊಬ್ಬನಿಗೆ ಡಿಕ್ಕಿ ಹೊಡೆದಿದ್ದ. ಆದರೆ, ಅಷ್ಟಕ್ಕೆ ಬಿಡದ ಆತ, ಕಾರು ಇಳಿದು ಬಂದು ಗಾಯಗೊಂಡಿದ್ದ ಆ ಪಾದಚಾರಿಯನ್ನು ತನ್ನ ಕಾರಿನ ಬಾನೆಟ್ ಮೇಲೆ ಹಾಕಿ, ಆ ಕಾರನ್ನು ಡ್ರೈವ್ ಮಾಡಿಕೊಂಡು ಪಂಚತಾರಾ ಹೋಟೆಲೊಂದಕ್ಕೆ ಹೋದ!
ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್‌ನಲ್ಲಿ ಈ ಘಟನೆ ನಡೆದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ಅಪಘಾತದ ದೃಶ್ಯಗಳು ದಾಖಲಾಗಿದ್ದು, ಅವುಗಳ ಆಧಾರದಲ್ಲಿ ಆತನ ವಿರುದ್ಧ ಪ್ರಕರಣದ ದಾಖಲಾಗಿವೆ.
ಈ ಯುವಕ ಖಾಸಗಿ ವಿವಿಯಲ್ಲಿ ಕಾನೂನು ಪದವಿ ಕಲಿಯುತ್ತಿದ್ದಾನೆ ಎಂದು ದಕ್ಷಿಣ ದೆಹಲಿಯ ಡಿಸಿಪಿ ಬೇನಿತಾ ಮೇರಿ ಜೈಕರ್ ತಿಳಿಸಿದ್ದಾರೆ. ಕೆಲವೊಂದು ವರದಿಗಳ ಪ್ರಕಾರ ಕಾರ್‌ನಲ್ಲಿ ವಿದ್ಯಾರ್ಥಿಯ ತಂದೆಯೂ ಇದ್ದರು ಎಂದು ಹೇಳಲಾಗಿದೆ.
Shocking #CCTV visuals of a man being dragged on bonnet of a car in South Delhi. Delhi police arrested Rtd IAS and his son. @DCPSouthDelhi
@CPDelhi
@DelhiPolice pic.twitter.com/hw23FlcCpM— PURUSHOTTAM SINGH (@singhpuru2202) February 11, 2022
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.