ವಿವಾಹಕ್ಕೆ 4 ದಿನ ಇರುವಾಗಲೇ ಮಗಳನ್ನು ಪೊಲೀಸರ ಎದುರೇ ಗುಂಡಿಟ್ಟು ಹ*ತ್ಯೆಗೈದ ತಂದೆ!
ವಿವಾಹದ ಮನೆಯಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.
Team Udayavani, Jan 15, 2025, 6:02 PM IST
ಗ್ವಾಲಿಯರ್: ಮಗಳ ವಿವಾಹದ ಆಮಂತ್ರಣ ಪತ್ರಿಕೆ ಹಂಚಿದ್ದು, ಇನ್ನೇನು ಮದುವೆಗೆ ನಾಲ್ಕು ದಿನ ಇರುವಾಗಲೇ ಮಗಳು ಅರೆಂಜ್ ಮ್ಯಾರೇಜ್ ಗೆ ಒಪ್ಪದೇ, ಮತ್ತೊಬ್ಬನನ್ನು ವಿವಾಹವಾಗುತ್ತೇನೆ ಎಂದಿದ್ದಕ್ಕೆ ಪೊಲೀಸರು ಮತ್ತು ಪಂಚಾಯಿತಿದಾರರ ಸಮ್ಮುಖದಲ್ಲೇ ತಂದೆ ಗುಂಡಿಕ್ಕಿ ಹ*ತ್ಯೆಗೈದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ.
ಸಾರ್ವಜನಿಕವಾಗಿ ಪೋಷಕರು ನಿಗದಿಪಡಿಸಿದ್ದ ವರನ ಜತೆಗೆ ವಿವಾಹವಾಗಲು ನಿರಾಕರಿಸಿ, ತಾನೊಬ್ಬನನ್ನು ಪ್ರೀತಿಸುತ್ತಿದ್ದು ಆತನನ್ನೇ ವಿವಾಹವಾಗುವುದಾಗಿ ಪುತ್ರಿ ಹೇಳಿದಾಗ ಸಿಟ್ಟಿಗೆದ್ದ ತಂದೆ ಪೊಲೀಸ್ ಅಧಿಕಅರಿಯ ಮುಂದೆ ಗುಂಡಿಟ್ಟು ಕೊಂ*ದಿರುವ ಆಘಾತಕಾರಿ ಘಟನೆ ನಡೆದಿದೆ.
ಮೃ*ತಳನ್ನು ತನು ಗುರ್ಜರ್ (20ವರ್ಷ) ಎಂದು ಗುರುತಿಸಲಾಗಿದೆ. ಈ ಘಟನೆ ಮಂಗಳವಾರ (ಜ.14) ರಾತ್ರಿ ನಗರದ ಗೋಲಾ ಕಾ ಮಂದಿರ ಪ್ರದೇಶದಲ್ಲಿ ನಡೆದಿದೆ. ಮಗಳು ತನು ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಾನು ಪ್ರೀತಿಸುತ್ತಿರುವ ವಿಷಯ ಹಾಗೂ ತಂದೆಯ ಬಲವಂತದ ಬಗ್ಗೆ ವಿಡಿಯೋವನ್ನು ಶೇರ್ ಮಾಡಿದ್ದು, ತಂದೆಯ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ವರದಿ ವಿವರಿಸಿದೆ.
“ನನ್ನ ಇಚ್ಛೆಯ ವಿರುದ್ಧವಾಗಿ ನನ್ನ ಕುಟುಂಬದವರು ವಿವಾಹವಾಗಲು ಒತ್ತಡ ಹೇರುತ್ತಿದ್ದಾರೆ…ಎಂದು ಹೇಳಿರುವ 52ಸೆಕೆಂಡುಗಳ ವಿಡಿಯೋದಲ್ಲಿ ತನ್ನ ಜೀವಕ್ಕೆ ಅಪಾಯವಿದ್ದು, ಇದಕ್ಕೆ ತಂದೆ ಮಹೇಶ್ ಹಾಗೂ ಕುಟುಂಬದ ಇತರ ಸದಸ್ಯರೇ ಕಾರಣ ಎಂದು ಹೆಸರನ್ನು ಉಲ್ಲೇಖಿಸಿದ್ದಳು.
“ನಾನು ವಿಕಿಯನ್ನು ವಿವಾಹವಾಗಲು ಬಯಸಿದ್ದು, ಅದಕ್ಕೆ ಪೋಷಕರು ಆರಂಭದಲ್ಲಿ ಒಪ್ಪಿದ್ದರು. ಆದರೆ ನಂತರ ನಿರಾಕರಿಸಿದ್ದರು. ಈ ವಿಚಾರದಲ್ಲಿ ಪ್ರತಿದಿನ ನನಗೆ ಹೊಡೆದು, ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಒಂದು ವೇಳೆ ನನಗೇನಾದರು ಆದರೆ ಅದಕ್ಕೆ ನನ್ನ ಕುಟುಂಬವೇ ಹೊಣೆಗಾರರು ಎಂದು ತನು ವಿಡಿಯೋದಲ್ಲಿ ತಿಳಿಸಿದ್ದಳು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ವರಿಷ್ಠಾಧಿಕಾರಿ ಧರಂವೀರ್ ಸಿಂಗ್ ಅವರು ತನು ನಿವಾಸಕ್ಕೆ ಆಗಮಿಸಿ ಸಂಧಾನಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಸಮುದಾಯದ ಹಿರಿಯರು ಪಂಚಾಯಿತಿ ನಡೆಸಲು ಆಗಮಿಸಿದ್ದರು. ಸಂಧಾನ ನಡೆಸುತ್ತಿದ್ದ ವೇಳೆ ಪುತ್ರಿ ತನು ಮನೆಯಲ್ಲಿ ವಾಸವಾಗಲು ನಿರಾಕರಿಸಿದ್ದು, ತನ್ನನ್ನು ಬೇರೆಡೆ ಕರೆದೊಯ್ಯುವಂತೆ ಪೊಲೀಸರಲ್ಲಿ ವಿನಂತಿಸಿಕೊಂಡಿದ್ದಳು. ಅಲ್ಲದೇ ಮದುವೆಗೆ ಸಿದ್ದಳಿಲ್ಲ ಎಂದು ತಿಳಿಸಿದ್ದಳು. ಆಗ ತಂದೆ ಮತ್ತು ಸಂಬಂಧಿ ರಾಹುಲ್ ಎಂಬಾತ ಏಕಾಏಕಿ ಗುಂಡಿನಿಂದ ಗುಂಡು ಹಾರಿಸಿದ್ದು, ತನು ಸ್ಥಳದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾಳೆ.
ತಂದೆ ಪಿಸ್ತೂಲ್ ಅನ್ನು ಕೆಳಗಿಟ್ಟು ಪೊಲೀಸರಿಗೆ ಶರಣಾಗಿದ್ದು, ಸಂಬಂಧಿ ರಾಹುಲ್ ಪಿಸ್ತೂಲ್ ಜತೆ ಪರಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 18ರಂದು ತನು ವಿವಾಹ ನಿಗದಿಯಾಗಿದ್ದು, ಇದೀಗ ಕೊ*ಲೆಯಲ್ಲಿ ಅಂತ್ಯಗೊಂಡಿದ್ದು, ವಿವಾಹದ ಮನೆಯಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ
Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ
Kerala: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾದ ವ್ಯಕ್ತಿ ಶವಾಗಾರದಲ್ಲಿ ಜೀವಂತವಾದ!
Liquor Policy Case:ಕೇಜ್ರಿ, ಸಿಸೋಡಿಯಾ ವಿರುದ್ಧ ಪ್ರಾಸಿಕ್ಯೂಷನ್: EDಗೆ ಕೇಂದ್ರದ ಅನುಮತಿ
RSS ಮೋಹನ್ ಭಾಗವತ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ: ರಾಹುಲ್ ಗಾಂಧಿ ಕಿಡಿ
MUST WATCH
ಹೊಸ ಸೇರ್ಪಡೆ
Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ
Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ
Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
Los Angeles Wildfires: ಇನ್ನೂ 60 ಲಕ್ಷ ಜನರಿಗೆ ಸಂಕಷ್ಟ, ಸಾವಿನ ಸಂಖ್ಯೆ 25ಕ್ಕೇರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.