ವಿದ್ಯುತ್ ಕಂಬ ಏರಿದ 60ರ ವ್ಯಕ್ತಿ : ಕಾರಣ ಕೇಳಿದ್ರೆ ಅಯ್ಯೋ ಅಂತೀರಾ…!
ವಿದ್ಯುತ್ ಕಂಬ ಏರಿದ 60ರ ವ್ಯಕ್ತಿ
Team Udayavani, Mar 11, 2021, 10:00 PM IST
ಧೋಲಾಪುರ (ರಾಜಸ್ಥಾನ) : ನಮ್ಮ ಸುತ್ತ ಮುತ್ತ ಜನರು ಹೇಗೆಲ್ಲಾ ಇರ್ತಾರೆ ಎಂದು ಗಮಿನಿಸಿದರೆ ಕೆಲವು ಬಾರಿ ನಗು ಬರುತ್ತದೆ. ಇನ್ನು ಕೆಲವರ ನಡೆವಳಿಕೆಗಳು ನೋಡುಗರಿಗೆ ಹಾಸ್ಯಾಸ್ಪದವಾಗಿ ನಗೆಪಾಟಲಿಗೆ ಕಾರಣವಾಗುತ್ತದೆ. ಇನ್ನು ಕೆಲವು ವಯಸ್ಸಾದ ಜೀವಗಳು ಮಾಡುವ ತರ್ಲೆಗಳು ವಿಚಿತ್ರವೆನಿಸುತ್ತದೆ. ಹಾಗೇ ಇಲ್ಲೊಂದು ಘಟನೆ ನಡೆದಿದೆ ನೋಡಿ..
ರಾಜಸ್ಥಾನದ ಧೋಲಾಪುರ ಪ್ರದೇಶದಲ್ಲಿ 60 ವರ್ಷದ ಸೊಬ್ರಾನ್ ಎಂಬ ವ್ಯಕ್ತಿಯೊಬ್ಬ ಹೈ ಟೆನ್ಷನ್ ವಿದ್ಯುತ್ ಕಂಬವನ್ನು ಹತ್ತಿ ಕುಳಿತಿದ್ದಾನೆ. ಅಯ್ಯೋ… ಈ ವಯಸ್ಸಾದ ವ್ಯಕ್ತಿ ಯಾಕೆ ಕಂಬವನ್ನು ಹತ್ತಿದಾ ಎಂದು ಕೇಳಿದ್ರೆ ನೀವು ಆಶ್ಚರ್ಯ ಪಡೋದ್ರಲ್ಲಿ ಡೌಟೇ ಇಲ್ಲ…
ಹೌದು ಸೊಬ್ರಾನ್ ಎಂಬ ಈ ವ್ಯಕ್ತಿಯ ಮನೆಯಲ್ಲಿ ಎರಡನೇ ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ವಿದ್ಯುತ್ ಕಂಬವನ್ನು ಹತ್ತಿ ಕುಳಿತಿದ್ದಾನೆ. ನಂತ್ರ ಸ್ಥಳೀಯ ಯುವಕನೊಬ್ಬ ಆತನನ್ನು ನಿಧಾನವಾಗಿ ಕೆಳಗೆ ಇಳಿಸಿಕೊಂಡು ಬಂದಿದ್ದಾರೆ. ಅದೃಷ್ಟ ಏನಂದ್ರೆ ಆ ವ್ಯಕ್ತಿ ಕಂಬವನ್ನು ಹತ್ತಿದ ವೇಳೆ ಅಲ್ಲಿ ವಿದ್ಯುತ್ ಸಂಚರಿಸುತ್ತಿರಲಿಲ್ಲ ಎಂದು ವರದಿಯಾಗಿದೆ.
ಈ ಸೊಬ್ರಾನ್ ಗೆ ಈಗಗಾಲೇ ಮದುವೆಯಾಗಿದ್ದು ಹೆಂಡತಿ ತೀರಿಕೊಂಡಿದ್ದಾರೆ. ಅಲ್ಲದೆ ಈ ವ್ಯಕ್ತಿಗೆ ಮೂರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಮೊಮ್ಮಕ್ಕಳೂ ಇದ್ದಾರೆ.
ಸ್ಥಳೀಯರು ಹೇಳುವ ಪ್ರಕಾರ ಸೊಬ್ರಾನ್ ಹೆಂಡಿತಿ ಸತ್ತ ಮೇಲೆ ನನಗೆ ಇನ್ನೊಂದು ಮದುವೆ ಮಾಡಿ ಎಂದು ಕೇಳಿತ್ತಿದ್ದನಂತೆ. ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸುತ್ತದ್ದನಂತೆ. ಮಕ್ಕಳು ಎರಡನೇ ಮದುವೆಗೆ ಒಪ್ಪದ ಕಾರಣ ಈ ಅವಾಂತರವನ್ನು ಮಾಡಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.