Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

3 ರಿಂದ 5 ವಾರಗಳಲ್ಲೇ ಕಾಯಿಲೆಗಳು ಗುಣ ಚರ್ಮರೋಗಕ್ಕೆ ಹುತ್ತದ ಮಣ್ಣು ಸಿದ್ದೌಷಧ

Team Udayavani, Dec 20, 2024, 6:02 PM IST

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ತನ್ನದೇ ಆದ ಇತಿಹಾಸ ಹೊಂದಿರುವ ವೈದ್ಯನಾಥೇಶ್ವರ ಸ್ವಾಮಿ ದೇವಾಲಯದಲ್ಲಿನ ಹುತ್ತದ ಮಣ್ಣು ಚರ್ಮವ್ಯಾಧಿಗೆ ರಾಮಬಾಣ. ಅದೆಷ್ಟೇ ಆಸ್ಪತ್ರೆಗಳು, ವೈದ್ಯರ ಬಳಿ ಚಿಕಿತ್ಸೆ ಪಡೆದರೂ ವಾಸಿಯಾಗದ ಚರ್ಮವ್ಯಾಧಿಗೆ ವೈದ್ಯನಾಥೇಶ್ವರ ಸ್ವಾಮಿ ದೇಗುಲದಲ್ಲಿ ಪರಿಹಾರ ಸಿಕ್ಕಿದೆ. ಇದರಿಂದ ಕೇವಲ ಜಿಲ್ಲೆ, ರಾಜ್ಯವಲ್ಲದೇ, ಹೊರ ರಾಜ್ಯಗಳ ಭಕ್ತರು ಇಲ್ಲಿಗೆ ಬಂದು ವ್ಯಾಧಿಗಳನ್ನು ಪರಿಹರಿಸಿಕೊಂಡಿರುವ ಉದಾಹರಣೆ ಸಾಕಷ್ಟಿದೆ. ಪವಿತ್ರ ಕ್ಷೇತ್ರದ ಉದಯ, ಇಲ್ಲಿನ ವಿಶೇಷತೆಗಳ ಕುರಿತು ಮಾಹಿತಿ.

ಐತಿಹಾಸಿಕ ಹಿನ್ನೆಲೆಯ ದೇವಾಲಯಗಳು ನಾಡಿನ ಸಾಂಪ್ರದಾಯಿಕ ಪ್ರತೀಕಗಳಾಗಿದ್ದು, ಅವುಗಳ ಪೈಕಿ ಪ್ರಮುಖವಾಗಿ ಕಾಣಸಿಗುವ ದೇವಾಲಯಗಳಲ್ಲಿ ತಾಲೂಕಿನ ವೈದ್ಯನಾಥಪುರ ಗ್ರಾಮದ ಶ್ರೀ ಪ್ರಸನ್ನ ಪಾರ್ವತಾಂಭ, ವೈದ್ಯನಾಥೇಶ್ವರ ದೇವಾಲಯವೂ ಒಂದಾಗಿದ್ದು, ತನ್ನದೇ ಆದ ಇತಿಹಾಸ ಮತ್ತು ಭಕ್ತಗಣವನ್ನು ಹೊಂದಿದೆ. ಪುರಾಣ ಪ್ರಸಿದ್ಧ ದೇವಾಲಯ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವೈದ್ಯನಾಥಪುರದ ಶಿಂಷಾ ನದಿಯ ದಡದಲ್ಲಿದ್ದು, ಪೌರಾಣಿಕ ಪ್ರತೀತಿಯುಳ್ಳ
ವೈದ್ಯನಾಥೇಶ್ವರಸ್ವಾಮಿ ನೆಲೆಗೊಂಡ ಬಗ್ಗೆ ಸಾಕಷ್ಟು ಭಕ್ತಿಪ್ರಧಾನ ನಂಬಿಕೆಗಳು ಈಗಲೂ ಜನರಲ್ಲಿ ಮನೆಮಾಡಿದೆ.

ದೇಗುಲ ನಿರ್ಮಾಣವಾಗಿದ್ದು ಹೇಗೆ ?
ಕ್ಷೇತ್ರದ ಸಮೀಪದಲ್ಲಿರುವ ನಗರಕೆರೆಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಶ್ರೀ ಗಂಗ ಅರಸನು ಗೋ ಶಾಲೆ ನಿರ್ವಹಿಸುತ್ತಿದ್ದನು. ತಾನು ಸಾಕಿದ ಹಸುಗಳು ದಿನನಿತ್ಯ ಹಾಲು ನೀಡುತ್ತಿದ್ದವಾ ದರೂ, ಅವುಗಳ ಪೈಕಿ ಒಂದು ಹಸು ಮಾತ್ರ ದಿನನಿತ್ಯ ಹಾಲು ನೀಡುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಅರಸ ಹಸುವನ್ನು ಹಿಂಬಾಲಿಸಿದಾಗ ಅಚ್ಚರಿಯೊಂದು ಕಾದಿತ್ತು. ಹಸು ನದಿ ದಡದಲ್ಲಿದ್ದ ಹುತ್ತವೊಂದಕ್ಕೆ ಹಾಲೆರೆಯುವ ದೃಶ್ಯ ಕಂಡ ಅರಸ ಗಾಬರಿಗೊಂಡು ಕುತೂಹಲದಿಂದ ಹುತ್ತವನ್ನು
ಹೊಡೆಯುತ್ತಿದ್ದಾಗ ಹುತ್ತದೊಳಗಿದ್ದ ಉದ್ಭವ ಲಿಂಗಕ್ಕೆ ಆಯುಧ ದಿಂದ ಪೆಟ್ಟಾಗಿ ಲಿಂಗದ ತಲೆಯ ಭಾಗದಿಂದ ರಕ್ತಸುರಿಯಲಾರಂಭಿಸಿತು.

ಆ ಸಂದರ್ಭದಲ್ಲಿ ಅರಸನಿಗೆ ಅಶರೀರ ವಾಣಿಯೊಂದು “ಅಲ್ಲೇ ಪಕ್ಕದಲ್ಲಿ ಬೆಳೆದಿರುವ ವಿಷಪೂರಿ ಗಿಡದ ಸೊಪ್ಪಿನರಸವನ್ನು
ಗಾಯವಾದ ಭಾಗಕ್ಕೆ ಲೇಪಿಸು’ ಎಂಬುದಾಗಿ ಕೇಳಿಸಿತು. ಅದರಂತೆ ಅರಸ ನಡೆದುಕೊಂಡಾಗ ರಕ್ತಸ್ರಾವ ನಿಲ್ಲುತ್ತದೆ. ಇದರಿಂದ ಭಕ್ತಿ ಪರವಶನಾದ ಅರಸನು ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲು ಮುಂದಾಗುತ್ತಾನೆ. ತನಗೆ ತಾನೇ ವೈದ್ಯ ಮಾಡಿಕೊಂಡದ್ದರಿಂದಾಗಿ ಈ ಕ್ಷೇತ್ರಕ್ಕೆ ವೈದ್ಯನಾಥೇಶ್ವರ ಎಂದು ಹೆಸರು ಬಂದಿದ್ದು, ಗ್ರಾಮಕ್ಕೆ ವೈದ್ಯನಾಥಪುರ ಎಂಬ ಹೆಸರಾಯಿತೆಂಬುದು ಪ್ರತೀತಿ.

ಗೋವಿನ ಹಾಡಿನ ತವರೂರು
“ಧರಣಿ ಮಂಡಲ ಮಧ್ಯದೊಳಗೆ……”ಎಂಬ ಪ್ರಸಿದ್ಧ ಜನಪದ ಹಾಡಿನ ಹುಟ್ಟು ಈ ಕ್ಷೇತ್ರದಲ್ಲಾಗಿದ್ದು, ಹಾಡನ್ನು ಒಬ್ಬ ಅಜ್ಞಾತ ಬ್ರಾಹ್ಮಣ ಕವಿಯು ರಚಿಸಿದ್ದಾನೆ ಎಂಬುದು ಇತಿಹಾಸದ ಉಲ್ಲೇಖ. ಅಂತೆಯೇ ಕದಂಬ ಋಷಿಗಳ ತಪೋಭೂಮಿ ಎಂದೂ ಸಹ ಕರೆಯಲಾಗಿದೆ. ಈ ಕ್ಷೇತ್ರದಲ್ಲಿ ಕದಂಬ ಜಂಗಮ ಮಠವೂ ಇದ್ದು, ಈ ಮಠವನ್ನು ಮಠಾಧೀಶರಾದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿಗಳು ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಮಠದಲ್ಲಿ ಸಂಸ್ಕೃತ ವಿದ್ಯಾಪೀಠವನ್ನೂ ತೆರೆಯಲು ಸಿದ್ಧತೆಗಳು ನಡೆದಿವೆ.

“ಚರ್ಮವ್ಯಾಧಿ’ಗೆ ಹುತ್ತದ ಮಣ್ಣು “ಔಷಧಿ’!
ವೈದ್ಯನಾಥೇಶ್ವರ ಎಂಬ ಹೆಸರಿನ ದೇವಾಲಯಗಳು ದೇಶದಲ್ಲಿ ಕೇವಲ ಮೂರು ಸ್ಥಳಗಳಲ್ಲಿ ಮಾತ್ರವಿದ್ದು, ಅವುಗಳಲ್ಲಿ ಎರಡು ಕರ್ನಾಟಕದ ವೈದ್ಯನಾಥಪುರ ಮತ್ತು  ತಲಕಾಡಿನಲ್ಲಿವೆ. ಮತ್ತೊಂದು ನೆರೆಯ ರಾಜ್ಯದ ತಮಿಳುನಾಡಿನಲ್ಲಿದ್ದು, ಈ ಐತಿಹಾಸಿಕ
ದೇವಾಲಯದಲ್ಲಿ ಬರುವ ಭಕ್ತರಿಗೆ ಚರ್ಮ ಸಂಬಂಧಿ ಕಾಯಿಲೆಗಳಾದ ಅದರಲ್ಲೂ ಮಕ್ಕಳಿಗೆ ತಲೆಯಲ್ಲಾಗುವ ನಾಗರ ಎಂಬ ಗಾಯಕ್ಕೆ ಇಲ್ಲಿನ ಹುತ್ತದ ಮಣ್ಣನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಇದರಿಂದ ಸಾವಿರಾರು ಮಕ್ಕಳಿಗೆ ಚರ್ಮವ್ಯಾಧಿ ಕಾಯಿಲೆಗಳು ಗುಣವಾಗಿರುವ ಉದಾಹರಣೆಗಳು ಸಾಕಷ್ಟಿವೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಶ್ರದ್ಧೆ, ಮಡಿ ಮತ್ತು ಭಕ್ತಿಯಿಂದ ದೇವರ ಸೇವೆ ಮಾಡಿದರೆ, ಯಾವುದೇ ಕಾಯಿಲೆಗಳು 3 ರಿಂದ 5 ವಾರಗಳಲ್ಲಿ ಗುಣಮುಖವಾಗಲಿವೆ.

ಶ್ರೀ ಕ್ಷೇತ್ರದಲ್ಲಿನ ಆಚರಣೆ ವಿಶೇಷ
ಪ್ರತೀ ವರ್ಷ ಕಾರ್ತಿಕ ಮಾಸದ ಸೋಮವಾರಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಅಪಾರ ಸಂಖ್ಯೆಯ ಭಕ್ತರು, ಶಿಂಷಾ ನದಿಯಲ್ಲಿ ಮಿಂದು ಬಳಿಕ ಹಲವು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸಿ
ನೆರವೇರಿಸಿಕೊಳ್ಳಲಿದ್ದಾರೆ. ದೇವಾಲಯದಲ್ಲಿ ಸ್ವಾಮಿಯವರಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ
ವಿನಿಯೋಗ ಜತೆಗೆ ಪ್ರತೀ ವರ್ಷದ ಮಾಘ ಬಹುಳ ಸಪ್ತಮಿಯಂದು ಈ ಕ್ಷೇತ್ರದಲ್ಲಿ ಮಹಾರಥೋತ್ಸವವು ಸಾವಿರಾರು ಭಕ್ತರ
ಸಮ್ಮುಖದಲ್ಲಿ ಜರುಗುತ್ತದೆ. ಪ್ರತಿ ಮಹಾ ಶಿವರಾತ್ರಿ ಆಚರಣೆಯಂದು ಭಕ್ತ ಸಮೂಹ ಬಂದು ರಾತ್ರಿಯಿಡೀ ಜಾಗರಣೆ ಮೂಲಕ
ವಿಶೇಷ ಪೂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೊಯ್ಸಳ ಶೈಲಿಯಲ್ಲಿ ದೇಗುಲ ನಿರ್ಮಾಣ ದೇವಾಲಯ ನಿರ್ಮಾಣವು ಹೊಯ್ಸಳ ಶೈಲಿಯಲ್ಲಿದ್ದು, ಪ್ರಾಂಗಣವನ್ನು ಸುತ್ತಿದಾಗ
ದೇಗುಲದ ಕಟ್ಟಡವು ನಕ್ಷತ್ರಾಕಾರದಲ್ಲಿರುವುದು ಸ್ಪಷ್ಟವಾಗಿ ಗೋಚರಿಸಲಿದೆ. ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ, ಮರುಳೇಶ್ವರ, ಮಲ್ಲಿಕಾರ್ಜುನ ಎಂಬ ಪಂಚ ಲಿಂಗಗಳಿದ್ದು, ಹಾಗೆಯೇ ವೈದ್ಯನಾಥೇಶ್ವರ ಸ್ವಾಮಿ ಪತ್ನಿ ಪ್ರಸನ್ನ ಪಾರ್ವತಾಂಬ ದೇವಿಯು ನೆಲೆಸಿದ್ದಾಳೆ. ಚಂಡಿಕೇಶ್ವರ ಹಾಗೂ ಅತ್ಯಂತ ವಿರಳವಾಗಿ ಕಾಣುವ ಸೂರ್ಯ ನಾರಾಯಣದೇವರ ಮೂರ್ತಿಯೂ ಇಲ್ಲಿ ಭಕ್ತರಿಗೆ ಪ್ರದರ್ಶನವಾಗಲಿದೆ. ನವಗ್ರಹ ಮತ್ತು ಗಣೇಶ ವಿಗ್ರಹಗಳ ಜತೆಗೆ ದೇವಾಲಯದ ಆವರಣದಲ್ಲಿ ಬಿಲ್ವ ಪತ್ರೆಯ
ಮರ ಇರುವುದು ವಿಶೇಷ.

■ ಎಸ್‌.ಪುಟ್ಟಸ್ವಾಮಿ

ಟಾಪ್ ನ್ಯೂಸ್

ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ 20ನೇ ಮಹಡಿಯಿಂದ ಜಿಗಿದ ಬಾಲಕಿ

Bengaluru: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ 20ನೇ ಮಹಡಿಯಿಂದ ಜಿಗಿದ ಬಾಲಕಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

Elon Musk: ಮಗನನ್ನು ಹೆಗಲ ಮೇಲೆ ಹೊತ್ತು ಟ್ರಂಪ್‌ ಕಚೇರಿಗೆ ಬಂದ ಎಲಾನ್‌ ಮಸ್ಕ್

Elon Musk: ಮಗನನ್ನು ಹೆಗಲ ಮೇಲೆ ಹೊತ್ತು ಟ್ರಂಪ್‌ ಕಚೇರಿಗೆ ಬಂದ ಎಲಾನ್‌ ಮಸ್ಕ್

Bullet Train: ಬೆಂಗ್ಳೂರು-ಹೈದ್ರಾಬಾದ್‌ ಬುಲೆಟ್‌ ರೈಲು… ಟೆಂಡರ್‌ ಕರೆದ ಆರ್‌ಐಟಿಇಎಸ್‌

Bullet Train: ಬೆಂಗ್ಳೂರು-ಹೈದ್ರಾಬಾದ್‌ ಬುಲೆಟ್‌ ರೈಲು… ಟೆಂಡರ್‌ ಕರೆದ ಆರ್‌ಐಟಿಇಎಸ್‌

Survey: ಮೂಡ್‌ ಆಫ್ ನೇಷನ್‌ ಸಮೀಕ್ಷೆ: ಎನ್‌ಡಿಎಗೆ 343 ಸ್ಥಾನಗಳ ಗೆಲುವು

Survey: ಮೂಡ್‌ ಆಫ್ ನೇಷನ್‌ ಸಮೀಕ್ಷೆ: ಎನ್‌ಡಿಎಗೆ 343 ಸ್ಥಾನಗಳ ಗೆಲುವು

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

Tourism: 800 ಅಡಿ ಎತ್ತರದ ಬೆಟ್ಟದಲ್ಲಿ ಭವ್ಯ ಇತಿಹಾಸ ಸಾರುವ ಗಜೇಂದ್ರಗಡ ಕೋಟೆ

Tourism: 800 ಅಡಿ ಎತ್ತರದ ಬೆಟ್ಟದಲ್ಲಿ ಭವ್ಯ ಇತಿಹಾಸ ಸಾರುವ ಗಜೇಂದ್ರಗಡ ಕೋಟೆ

ಬೆಳಗಾವಿಯ ಹಿಡಕಲ್‌ನಲ್ಲಿ ರಾಜ್ಯದ ಮೊದಲ ಡೋಮ್‌ ಮಾದರಿ ಪಕ್ಷಿಧಾಮ

Tourism: ಬೆಳಗಾವಿಯ ಹಿಡಕಲ್‌ನಲ್ಲಿ ರಾಜ್ಯದ ಮೊದಲ ಡೋಮ್‌ ಮಾದರಿ ಪಕ್ಷಿಧಾಮ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

MUST WATCH

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

ಹೊಸ ಸೇರ್ಪಡೆ

Namma Santhe: ಉದಯವಾಣಿ – ಎಂಐಸಿ ನಮ್ಮ ಸಂತೆ ನಾಳೆಯಿಂದ

Namma Santhe: ಉದಯವಾಣಿ – ಎಂಐಸಿ ನಮ್ಮ ಸಂತೆ ನಾಳೆಯಿಂದ

ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ 20ನೇ ಮಹಡಿಯಿಂದ ಜಿಗಿದ ಬಾಲಕಿ

Bengaluru: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ 20ನೇ ಮಹಡಿಯಿಂದ ಜಿಗಿದ ಬಾಲಕಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

Elon Musk: ಮಗನನ್ನು ಹೆಗಲ ಮೇಲೆ ಹೊತ್ತು ಟ್ರಂಪ್‌ ಕಚೇರಿಗೆ ಬಂದ ಎಲಾನ್‌ ಮಸ್ಕ್

Elon Musk: ಮಗನನ್ನು ಹೆಗಲ ಮೇಲೆ ಹೊತ್ತು ಟ್ರಂಪ್‌ ಕಚೇರಿಗೆ ಬಂದ ಎಲಾನ್‌ ಮಸ್ಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.